ಬೆಂಗಳೂರು : ಭಾರತ್ ಜೋಡೋ’ ಯಾತ್ರೆಗೆ ಕೆಜಿಎಫ್ ( KGF) ಮ್ಯೂಸಿಕ್ ಬಳಸಿದ ಆರೋಪದ ಮೇರೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಎಫ್ ಐ ಆರ್(FIR) ದಾಖಲಾಗಿದೆ.
ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆಯ (Bharat Jodo Yatra) ವಿಡಿಯೋಗಳಿಗೆ ‘ಕೆಜಿಎಫ್’ ಸಿನಿಮಾದ ಹಾಡೊಂದರ ಮ್ಯೂಸಿಕ್ ಬಳಸಿರುವ ಆರೋಪ ಕೇಳಿ ಬಂದಿದ್ದು, ಕಾಪಿ ರೈಟ್ಸ್ ಉಲ್ಲಂಘನೆ ಹಿನ್ನೆಲೆ ಕಾಂಗ್ರೆಸ್ ಪಕ್ಷದ ಮೇಲೆ ಎಮ್.ಆರ್.ಟಿ ಸಂಸ್ಥೆಯು ಕಾನೂನು ಸಮರಕ್ಕೆ ಮುಂದಾಗಿದ್ದು, ಸಂಸ್ಥೆಯು ದೂರು ದಾಖಲಿಸಿದೆ.
ಕೆಜಿಎಫ್ ಸಿನಿಮಾದ ‘ಸುಲ್ತಾನಾ..’ ಹಾಡನ್ನು ಯಾತ್ರೆಯಲ್ಲಿ ಬಳಸಿದ್ದಕ್ಕಾಗಿ ರಾಹುಲ್ ಗಾಂಧಿ, ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಸುಪ್ರಿಯಾ ಹಾಗೂ ಭಾರತ್ ಜೋಡೋ ಯಾತ್ರೆಯ ಉಸ್ತುವಾರಿ ವಹಿಸಿಕೊಂಡಿರುವ ಜೈರಾಂ ರಮೇಶ್ ವಿರುದ್ಧ ದೂರು ದಾಖಲಾಗಿತ್ತು. ನ್ಯಾಯಾಲಯದ ನಿರ್ದೇಶನದ ಮೇರೆಗೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ. MRT ಸಂಸ್ಥೆಗೆ ಸೇರಿದ ಹಾಡುಗಳನ್ನು ಸಂಸ್ಥೆಯ ಅನುಮತಿ ಇಲ್ಲದೇ ಹಾಡುಗಳನ್ನು ಕಾಂಗ್ರೆಸ್ ಯಾತ್ರೆಯಲ್ಲಿ ಬಳಸಿದೆ ಎಂಬ ಆರೋಪವಿದೆ.
Alert: ಈ ಸಣ್ಣ ತಪ್ಪಿನಿಂದಾಗಿ, ಮೊಬೈಲ್ ಫೋನ್ ಸ್ಫೋಟಗೊಳ್ಳುತ್ತದೆ, ಹೀಗೆ ಮಾಡಬೇಡಿ
Alert: ಈ ಸಣ್ಣ ತಪ್ಪಿನಿಂದಾಗಿ, ಮೊಬೈಲ್ ಫೋನ್ ಸ್ಫೋಟಗೊಳ್ಳುತ್ತದೆ, ಹೀಗೆ ಮಾಡಬೇಡಿ
‘ನಿವೇಶನ ನಿರೀಕ್ಷೆ’ಯಲ್ಲಿದ್ದವರಿಗೆ ಗುಡ್ ನ್ಯೂಸ್: ‘ಆಶ್ರಯ ಜಿ+2 ಮಾದರಿ ಮನೆ’ಗಳಿಗೆ ಅರ್ಜಿ ಆಹ್ವಾನ