ಬೆಂಗಳೂರು : ಕನ್ನಡದ ‘ಆಕಾಶ ದೀಪ‘ ಧಾರಾವಾಹಿಯಲ್ಲಿ ನಟಿಸಿದ್ದ ದಿವ್ಯಾ ಶ್ರೀಧರ್ ಬಾಳಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಅವಕಾಶಕ್ಕಾಗಿ ತಮಿಳು ಇಂಡಸ್ಟ್ರಿಗೆ ಹೋಗಿದ್ದ ದಿವ್ಯಾಗೆ ಪರಿಚಯವಾದ ನಟ ಅಮ್ಜದ್ ಅಲಿಯಾಸ್ ಅರ್ನವ್ ಎಂಬಾತನ ಜತೆ ಪ್ರೀತಿಯಾಗಿದೆ. ಮದುವೆ ಕೂಡ ಆಗಿದ್ದು, ಆದರೆ ಸಂಸಾರದಲ್ಲಿ ಬಿರುಗಾಳಿ ಎದ್ದಿದೆ.
ಹೌದು, ಆಕಾಶ ದೀಪ ಸೀರಿಯಲ್ ಖ್ಯಾತಿಯ ದಿವ್ಯಾ ಶ್ರೀಧರ್ ಗೆ ತಮಿಳುನಾಡಿನಅರ್ನವ್ ವಂಚನೆ ಮಾಡಿದ್ದಾರೆ ಎಂದು ಈ ಹಿಂದೆ ವಿಡಿಯೋ ಮಾಡಿ ಆರೋಪ ಮಾಡಿದ್ದರು. ಈ ಆರೋಪದ ಬೆನ್ನಲ್ಲೇ ಅರ್ನವ್ ತನ್ನ ಪತ್ನಿ ದಿವ್ಯಾ ಶ್ರೀಧರ್ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಅರ್ನವ್ ‘’ದಿವ್ಯಾ ನನಗೆ ಆಗಾಗ ತೊಂದರೆ ನೀಡುತ್ತಿದ್ದಳು, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ನನ್ನನ್ನು ಹೆದರಿಸುತ್ತಿದ್ದಳು. ಆಗಾಗ ಫ್ಯಾನ್ ಗೆ ಸೀರೆ ಬಿಗಿದುಕೊಳ್ಳುತ್ತೇನೆ ಎಂದು ಬೆದರಿಸುತ್ತಿದ್ದಳು’’ ಎಂದು ಹೇಳಿದ್ದಾರೆ.
‘’ಇದಲ್ಲದೇ ಬ್ಲೇಡ್ ನಿಂದ ಕೈ ಕುಯ್ದುಕೊಂಡು ಫೋಟೋಗಳನ್ನು ನನಗೆ ಕಳುಹಿಸುತ್ತಿದ್ದರು. ಅಕ್ಟೋಬರ್ 5 ರಂದು ನನ್ನ ಮೇಲೆಯೇ ಹಲ್ಲೆ ನಡೆಸಿದ್ದಾಳೆ, ನಾಣೂ ಫೋಲೀಸರಿಗೆ ದೂರು ಕೊಡುತ್ತೇನೆ ಎಂದೆ, ಅದಕ್ಕೆ ಅವಳು ನಾನು ಹಲ್ಲೆ ಮಾಡಿದ್ದೇನೆ ಎಂದು ದೂರು ನೀಡಿದ್ದಾಳೆ’’ ಎಂದು ಅರ್ನವ್ ಹೇಳಿದ್ದಾರೆ ಎನ್ನಲಾಗಿದೆ.
ಈ ಹಿಂದೆ ದಿವ್ಯಾ ಶ್ರೀಧರ್ ಹೇಳಿದ್ದೇನು..?
‘ನನಗೂ ಅರ್ನವ್ಗೂ ಮದುವೆ ಆಗಿದೆ. ಆರ್ನವ್ ನನಗೆ ಸಾಕಷ್ಟು ಹಿಂಸೆ ಕೊಡ್ತಿದ್ದಾನೆ. ಮದುವೆ ವಿಚಾರವನ್ನು ಗುಟ್ಟಾಗಿ ಇಡುವಂತೆ ಹೇಳ್ತಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕದಂತೆ ಎಚ್ಚರಿಕೆ ಕೊಟ್ಟಿದ್ದಾನೆ. ಇದೇ ವಿಚಾರಕ್ಕೆ ಹಲವು ಬಾರಿ ನನ್ನ ಮೇಲೆ ಹಲ್ಲೆಯಾಗಿದೆ’ ಎಂದಿರುವ ದಿವ್ಯಾ, ಮನದ ನೋವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು.
‘2017ರಲ್ಲಿ ನಾವಿಬ್ಬರೂ ಒಂದೇ ಸೀರಿಯಲ್ನಲ್ಲಿ ಆಯಕ್ಟಿಂಗ್ ಮಾಡ್ತಿದ್ವಿ. ಆಗ ನಾವಿಬ್ಬರೂ ಫ್ರೆಂಡ್ಸ್ ಆದ್ವಿ. ಆಮೇಲೆ ಪ್ರೀತಿಸಿ ಮದ್ವೆ ಆದ್ವಿ. 2 ವರ್ಷದ ಹಿಂದೆ ಒಂದು ಮನೆ ಖರೀದಿಸಿದೆವು. ಮನೆ ತೆಗೆದುಕೊಳ್ಳುವಾಗ ನಾನು ಅವನಿಗೆ ಹಣದ ಸಹಾಯ ಮಾಡಿದ್ದೇನೆ.
ಕರೊನಾ ಲಾಕ್ಡೌನ್ ವೇಳೆ ಅವನು 2 ವರ್ಷ ಮನೆಯಲ್ಲೇ ಇದ್ದ. ಆಗ ಅವನಿಗೆ ಏನು ಬೇಕೋ ಎಲ್ಲವನ್ನೂ ತಂದು ಕೊಟ್ಟೆ. ಏನೂ ಕಷ್ಟ ಬಾರದಂತೆ ಚೆನ್ನಾಗಿ ನೋಡಿಕೊಂಡೆ. ಕೆಲಸ ಇಲ್ಲ ಅನ್ನೋ ನೋವು ಕಾಡದಂತೆ ನನ್ನ ಗಂಡನನ್ನು ಮಗು ಥರ ನೋಡಿಕೊಂಡೆ. ನಾನು ಅವನಿಗಾಗಿ ಎಲ್ಲವನ್ನೂ ಸಹಿಸಿಕೊಂಡಿದ್ದೇನೆ ಎಂದು ಇತ್ತೀಚೆಗೆ ದಿವ್ಯಾ ಹೇಳಿಕೊಂಡಿದ್ದಳು.
ಇದೀಗ ನನ್ನ ಪತಿ ನನ್ನನ್ನು ದೂರ ಇಟ್ಟಿದ್ದಾನೆ. ನನಗೆ ಅವನು ಬೇಕು. ನನ್ನ ಗಂಡ ನನ್ನನ್ನು ದೂರ ಮಾಡಿದ್ರೂ ನನಗೆ ಅವನೇ ಬೇಕು. ನನ್ನ ಹಾಗೂ ನನ್ನ ಮಗುವಿಗಾಗಿ ನೀವೆಲ್ಲರೂ ಪ್ರಾರ್ಥಿಸಿ’ ಎಂದು ನಟಿ ದಿವ್ಯಾ ಕಣ್ಣೀರಿಟ್ಟಿದ್ದಾರೆ. ದಿವ್ಯಾರನ್ನು ಪರಿಚಯ ಮಾಡಿಕೊಳ್ಳುವಾಗ ತನ್ನ ಹೆಸರು ಅರ್ನವ್ ಎಂದು ಹೇಳಿಕೊಂಡಿದ್ದನಂತೆ. ಅಸಲಿ ಹೆಸರು ಅಮ್ಜದ್ ಖಾನ್. ಆದರೂ ಹೆಸರನ್ನು ಏಕೆ ಮುಚ್ಚಿಟ್ಟರು ಎಂಬ ಪ್ರಶ್ನೆ ಮೂಡಿದ್ದು, ಇದು ಲವ್ ಜಿಹಾದ್ ಇರಬಹುದಾ ಎಂಬ ಅನುಮಾನ ಶುರುವಾಗಿದೆ. ಒಟ್ಟಿನಲ್ಲಿ ಯಾವುದು ಸತ್ಯ..ಸುಳ್ಳು ಎಂಬುದು ಪೊಲೀಸ್ ತನಿಖೆಯಿಂದಲೇ ಹೊರಬರಬೇಕಾಗಿದೆ.
BIGG NEWS : ಮುರುಘಾಮಠದ ಫೋಟೋಗಳ ಕಳ್ಳತನ ಕೇಸ್ ನಲ್ಲಿ’SJM’ ಸಂಸ್ಥೆಯ ನೌಕರರು ಭಾಗಿ ; ಮಹಾಂತ ರುದ್ರೇಶ್ವರಶ್ರೀ ಆರೋಪ