ಬರ್ಮಿಂಗ್ಹ್ಯಾಮ್: 22ನೇ ಕಾಮನ್ವೆಲ್ತ್ ಗೇಮ್ಸ್(Commonwealth Games) ಗುರುವಾರ ಬರ್ಮಿಂಗ್ಹ್ಯಾಮ್ನ ಅಲೆಕ್ಸಾಂಡರ್ ಸ್ಟೇಡಿಯಂನಲ್ಲಿ ಅತ್ಯಾಕರ್ಷಕ ಉದ್ಘಾಟನಾ ಸಮಾರಂಭದೊಂದಿಗೆ ಅದ್ಭುತ ಶೈಲಿಯಲ್ಲಿ ಪ್ರಾರಂಭವಾಯಿತು.
ಇಂಗ್ಲೆಂಡ್ನ ಬರ್ಮಿಂಗ್ಹ್ಯಾಮ್ನಲ್ಲಿರುವ ಅಲೆಕ್ಸಾಂಡರ್ ಸ್ಟೇಡಿಯಂನಲ್ಲಿ ಭಾರತೀಯ ಕಾಲಮಾನ ರಾತ್ರಿ 11:30ಕ್ಕೆ ಸುಮಾರು 30,000 ಪ್ರೇಕ್ಷಕರ ನಡುವೆ ಕ್ರೀಡಾಕೂಟಕ್ಕೆ ವರ್ಣರಂಜಿತ ಚಾಲನೆ ಸಿಕ್ಕಿತು. 22 ನೇ ಆವೃತ್ತಿಗೆ 72 ರಾಷ್ಟ್ರಗಳು ಮತ್ತು ಪ್ರಾಂತ್ಯಗಳಾದ್ಯಂತ 6,500 ಕ್ರೀಡಾಪಟುಗಳಳು ಭಾಗವಹಿಸಲಿದ್ದಾರೆ.
🤯Was there a bigger show-stopper tonight than the raging bull!?
What was your favourite moment of that epic Opening Ceremony!?#B2022 pic.twitter.com/eqkwmqKXjj
— Birmingham 2022 (@birminghamcg22) July 28, 2022
It’s time for the America’s to take to the stage. 🏟️
Featuring @CwthSportCAN, @BAHNOC, Guyana and the Falkland Islands who know how to make an entrance. 🙌 #CommonwealthGames | #B2022 pic.twitter.com/gKDMd2SeKj
— Commonwealth Sport (@thecgf) July 28, 2022
ಎರಡು ಗಂಟೆಗಳ ಉದ್ಘಾಟನಾ ಸಮಾರಂಭವು ಡ್ರಮ್ಮರ್-ತಾಳವಾದ್ಯ ವಾದಕ ಅಬ್ರಹಾಂ ಪ್ಯಾಡಿ ಟೆಟ್ಟೆಹ್ ಅವರ ಪ್ರದರ್ಶನದೊಂದಿಗೆ ಪ್ರಾರಂಭವಾಯಿತು. ಭಾರತೀಯ ಶಾಸ್ತ್ರೀಯ ಗಾಯಕ ಮತ್ತು ಸಂಯೋಜಕಿ ರಂಜನಾ ಘಟಕ್ ಅವರು ನಗರದ ವೈವಿಧ್ಯತೆಯನ್ನು ಪ್ರದರ್ಶಿಸಲು ಮುಂದಾಳತ್ವ ವಹಿಸಿದರು.
ಕಾಮನ್ವೆಲ್ತ್ ಗೇಮ್ಸ್ 2022 ಕೋವಿಡ್-19 ನಿರ್ಬಂಧಗಳಿಲ್ಲದೆ ನಡೆಯುತ್ತಿರುವ ಮೊದಲ ಪ್ರಮುಖ ಪಂದ್ಯಾವಳಿಯಾಗಿದೆ. ದಕ್ಷಿಣ ಆಫ್ರಿಕಾದ ಆತಿಥ್ಯದಿಂದ ಹೊರಗುಳಿದ ನಂತರ ಪಂದ್ಯಾವಳಿಯನ್ನು ನಡೆಸುವ ಜವಾಬ್ದಾರಿಯನ್ನು ಬರ್ಮಿಂಗ್ಹ್ಯಾಮ್ ತೆಗೆದುಕೊಂಡಿದೆ.
ಭಾರತೀಯ ತಂಡದ ನೇತೃತ್ವ ವಹಿಸಿದ ಪಿವಿ ಸಿಂಧು, ಮನ್ಪ್ರೀತ್ ಸಿಂಗ್
ಕಾಮನ್ವೆಲ್ತ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಭಾರತದ ತಂಡವನ್ನು ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಮತ್ತು ಪುರುಷರ ಹಾಕಿ ತಂಡದ ನಾಯಕ ಮನ್ಪ್ರೀತ್ ಸಿಂಗ್ ನೇತೃತ್ವ ವಹಿಸಿದ್ದರು.
Here Comes our Indian Contingent marching at the Opening Ceremony of the Commonwealth Games 2022 in Birmingham, UK.
Very proud to see the most beautiful Indian flag at #Birmingham2022 🇮🇳 pic.twitter.com/dtv2IsoQjN— Kiren Rijiju (@KirenRijiju) July 29, 2022
ಒಲಂಪಿಯನ್ ನೀರಜ್ ಚೋಪ್ರಾ ಅವರು ಭಾರತ ತಂಡದ ಧ್ವಜಧಾರಿಯಾಗಿದ್ದರು. ಆದರೆ, ಅವರು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಗಾಯಗೊಂಡು ಪಂದ್ಯಾವಳಿಯಿಂದ ಹೊರಗುಳಿದರು.
Good News : ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ
BREAKING NEWS : ಮಂಗಳೂರಿನ ಸುರತ್ಕಲ್ ನಲ್ಲಿ ಫಾಜಿಲ್ ಹತ್ಯೆ ಪ್ರಕರಣ : ಆಸ್ಪತ್ರೆಯಿಂದ ಮಂಗಳಪೇಟೆಗೆ ಮೃತದೇಹ ಶಿಫ್ಟ್