ಬೆಂಗಳೂರು: ವಾಣಿಜ್ಯ ತೆರಿಗೆಗೆ ಸಂಬಂಧಿಸಿದಂತೆ ದೂರುದಾರರ ಪರವಾಗಿ ಮೇಲ್ಮನವಿ ಆದೇಶ ನೀಡಲು 25,000 ಲಂಚ ಸ್ವೀಕರಿಸುತ್ತಿದ್ದಾಗಲೇ ವಾಣಿಜ್ಯ ತೆರಿಗೆ ಅಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿರುವಂತ ಘಟನೆ ಬೆಂಗಳೂರಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಶ್ರೀರಾಂಪುರದ ವಕೀಲ ಡಿ.ಹೆಚ್ ಗುರುಪ್ರಸಾದ್ ಎಂಬುವರು ವಾಣಿಜ್ಯ ತೆರಿಗೆ ಇಲಾಖೆಗೆ ಸಂಬಂಧಿಸಿದಂತ ಮೇಲ್ಮನವಿ ಆದೇಶ ತಮ್ಮ ಪರವಾಗಿ ನೀಡಲು ಕೋರಿದ್ದರು. ಇದಕ್ಕೆ ಬೆಂಗಳೂರಿನ ಶಾಂತಿನಗರದ ಎಜಿಒ ಜೆಸಿಸಿಟಿ ಅಪೀಲ್-6 ರಾಮಾನುಜ ಎಂಬುವರಿಗೆ ತಿಳಿಸಿದ್ದರು.
ದೂರುದಾರರು ಪರವಾಗಿ ಮೇಲ್ಮನವಿ ಆದೇಶ ನೀಡಲು ಎಜಿಒ ರಾಮಾನುಜ ಅವರು 75,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಲೋಕಾಯುಕ್ತ ಪೊಲೀಸರಿಗೆ ದೂರುದಾರ ಗುರುಪ್ರಸಾದ್ ದೂರಿದ್ದರು.
ಈ ದೂರು ಆಧರಿಸಿ ಬೆಂಗಳೂರಿನ ಲೋಕಾಯುಕ್ತ ಎಸ್ಪಿ ಶಿವಪ್ರಕಾಶ್ ದೇವರಾಜು ಮೇಲ್ವಿಚಾರಣೆಯಲ್ಲಿ ಪಿಐ ಮಂಜುನಾಥ್, ಆದಿವೇಶ್ ಗುಡಿಗೊಪ್ಪ, ಕೇಶವಮೂರ್ತಿ ಮತ್ತು ಸಿಬ್ಬಂದಿಗಳ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. 75,000 ರೂಪಾಯಿಯಲ್ಲಿ ಮುಂಗಡವಾಗಿ 25,000 ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಹಿಡಿದಿದ್ದಾರೆ. ಈ ಸಂಬಂಧ ವಾಣಿಜ್ಯ ತೆರಿಗೆ ಇಲಾಖೆಯ ಎಜಿಒ ರಾಮಾನುಜ ಅವರ ವಿರುದ್ಧ ಸಿಆರ್ ಸಂಖ್ಯೆ 48/2025 ಯು/ಎಸ್ 7(ಎ) ಪಿಸಿ ಕಾಯ್ದೆ 1988 (ತಿದ್ದುಪಡಿ ಕಾಯ್ದೆ 2018)ರಂತೆ ಪ್ರಕರಣ ದಾಖಲಾಗಿದೆ.
ಸರ್ಕಾರಿ ಜಾಗ, ಸ್ಮಶಾನದ ಒತ್ತುವರಿ ತೆರವಿಗೆ ಆಗ್ರಹಿಸಿ BJP ಬೃಹತ್ ಪ್ರತಿಭಟನೆ