ಬೆಳಗಾವಿ : ಪಹಲ್ಗಾಮ್ ದಾಳಿ ಅಧಿಕಾರಕ್ಕೆ ನಿನ್ನೆ ಭಾರತೀಯ ಸೇನೆ ಪಾಕಿಸ್ತಾನದ ಉಗ್ರರ ಕ್ಯಾಂಪ್ ಮೇಲೆ ದಾಳಿ ಮಾಡಿದ ಪರಿಣಾಮ 100ಕ್ಕೂ ಅಧಿಕ ಉಗ್ರರು ಸಾವನಪ್ಪಿದ್ದಾರೆ. ಈ ಮಾಹಿತಿಯನ್ನು ಸುದ್ದಿಗೋಷ್ಠಿಯಲ್ಲಿ ಹಂಚಿಕೊಂಡಿದ್ದು ಕರ್ನಲ್ ಸೋಫಿಯಾ ಖುರೇಶಿ. ಮತ್ತೊಂದು ಹೊಸ ವಿಚಾರ ಎಂದರೆ ಇವರು ಕರ್ನಾಟಕದ ಸೊಸೆ ಎಂಬುವುದು ಹೆಮ್ಮೆಯ ಸಂಗತಿಯಾಗಿದೆ.
ಹೌದು ನಿನ್ನೆ ದಾಳಿಯ ಮಾಹಿತಿ ನೀಡಿದ ಕರ್ನಲ್ ಸೋಫಿಯಾ ಖುರೆಷಿ ಕನ್ನಡದ ಸೊಸೆ ಎಂದು ಗೊತ್ತಾಗಿದೆ. ಕರ್ನಲ್ ಸೋಫಿಯ ಕರ್ನಾಟಕದ ಬೆಳಗಾವಿ ಮೂಲದವರು ಎಂದು ತಿಳಿದುಬಂದಿದೆ. ಸೋಫಿಯ ಬೆಳಗಾವಿಯ ಸೊಸೆ ಎಂಬುವುದೇ ಹೆಮ್ಮೆಯಾಗಿದೆ. ಅಲ್ಲದೇ ಸೋಫಿಯಾ ಪತಿ ಕೂಡ ಭಾರತೀಯ ಸೇನಾಧಿಕಾರಿ ಎನ್ನುವುದು ಮತ್ತೊಂದು ಹೆಮ್ಮೆಯ ಸಂಗತಿಯಾಗಿದೆ.
ಸೋಫಿಯ ಪತಿ ಹೆಸರು, ತಾಜುದ್ದೀನ್ ಬಾಗೇವಾಡಿ ಎಂದು ತಿಳಿದುಬಂದಿದೆ. ಗೋಕಾಕಿನ ಕೊಣ್ಣೂರು ನಿವಾಸಿಯಾಗಿದ್ದು, ಭಾರತೀಯ ಸೇನೆಯಲ್ಲಿ ಇಬ್ಬರು ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. 2015ರಲ್ಲಿ ಇಬ್ಬರು ಪ್ರೀತಿಸಿ ಮದುವೆಯಾಗಿದ್ದಾರೆ ಸದ್ಯ ಸೋಫಿಯಾ ಜಮ್ಮುನಲ್ಲಿ ಕರ್ನಲ್ ಆಗಿ ಸೇವಿ ಸಲ್ಲಿಸುತ್ತಿದ್ದು, ಪತಿ ತಾಜುದ್ದೀನ್ ಜಾನ್ಸಿ ಅಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಈ ಬಗ್ಗೆ ಸೋಫಿಯಾ ಖುರೇಷಿ ಅವರ ಮಾವ ಗೌಸ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ನಮ್ಮ ಸೊಸೆ ಸೋಫಿಯಾ ಬಗ್ಗೆ ನಮಗೆ ಹೆಮ್ಮೆ ಇದೆ. ಮಗ ಸಹ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ಇಬ್ಬರು 2015ರಲ್ಲಿ ಪ್ರೀತಿಸಿ ಮದುವೆಯಾಗಿದ್ದಾರೆ. ಸೊಸೆ ಮೂಲತಃ ಗುಜರಾತಿನ ವಡೋದರದವರು. ನಮಗೆ ಯಾವುದೇ ಜಾತಿಭೇದ ಇಲ್ಲ. ಭಾರತೀಯ ಸೇನೆಯಲ್ಲಿ ಇಬ್ಬರು ಸೇವೆ ಸಲ್ಲಿಸುತ್ತಿರುವುದಕ್ಕೆ ನಮಗೆ ತುಂಬಾ ಖುಷಿ ಇದೆ. ನಿನ್ನೆ ಸೊಸೆಯನ್ನು ಟಿವಿಯಲ್ಲಿ ನೋಡಿ ತುಂಬಾ ಖುಷಿಯಾಯಿತು. ಭಾರತೀಯ ಸೇನೆಗೆ ಇನ್ನಷ್ಟು ಧೈರ್ಯ ಬರಲಿ ಎಂದು ಎಲ್ಲರೂ ದೇವರಲ್ಲಿ ಪ್ರಾರ್ಥಿಸೋಣ ಎಂದು ತಿಳಿಸಿದರು.