ಬೆಂಗಳೂರು: ಬೆಂಗಳೂರಿನಲ್ಲಿ ಕಾಲೇಜಿನಲ್ಲಿ ಪ್ರೀತಿಗೆ ಒಪ್ಪದ ವಿದ್ಯಾರ್ಥಿನಿ ಭೀಕರ ಕೊಲೆಯಾಗಿರುವ ಘಟನೆ ನಡೆದಿದೆ. ಕೊಲೆಯಾದ ವಿದ್ಯಾರ್ಥಿನಿಯನ್ನು ಕೋಲಾರದ ಮೂಲದ ಲಯಸ್ಮಿತ ಅಂತ ಗುರುತುಕಂಡು ಹಿಡಿಯಲಾಗಿದೆ. ಬೆಂಗಳೂರಿನ ರಾಜನುಕುಂಟೆಯಲ್ಲಿರುವ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಈ ಘಟನೆ ನಡೆದಿದೆ.
ಘಟನೆಯಲ್ಲಿ ಯುವತಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲು ಮುಂದಾಗಿದ್ದರು ಕೂಡ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.
ಕೊಲೆ ಮಾಡಿದವನನ್ನು ಪವನ್ ಅಂತ ಕಂಡು ಹಿಡಿಯಲಾಗಿದ್ದು, ಆತನು ಕೂಡ ಲಯಸ್ಮಿತೆಯನ್ನು ಕೊಲೆ ಮಾಡಿದ ಬಳಿಕ ಚಾಕುವಿನಿಂದ ಆತ್ಮಹತ್ಯೆಗೆ ಯತ್ನಿಸಿದ್ದು, ಈಗ ಆತನನ್ನು ಕೂಡ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿದೆ ಅಂತ ತಿಳಿದು ಬಂದಿದೆ ಲಯಸ್ಮಿತ ಮತ್ತು ಪವನ್ ಇಬ್ಬರು ಕೋಲಾರ ಜಿಲ್ಲೆಯವರಾಗಿದ್ದು, ಲಯಸ್ಮಿತಳನ್ನು ಪ್ರೀತಿಸುವಂತೆ ಪವನ್ ಹಿಂದೆ ಬಿದ್ದಿದ್ದ ಎನ್ನಲಾಗಿದೆ. ಆದರೆ ಇದಕ್ಕೆ ಒಪ್ಪಿಗೆ ಸಿಕ್ಕಿಲ್ಲ ಎನ್ನಲಾಗಿದೆ. ಸದ್ಯ ಮೃತೆಯ ಶವವನ್ನು ಶವಗಾರಕ್ಕೆ ತರಲಾಗಿದ್ದು, ಸ್ತಳಕ್ಕೆ ಪೋಲಿಸರು ಆಗಮಿಸಿದ್ದು, ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದೆ.
ಇವೆಲ್ಲದರ ನಡುವೆ ರಾಜನುಕುಂಟೆ ಪೋಲಿಸರ ವಿರುದ್ದ ಸ್ಥಳೀಯ ಮಂದಿ ಕಿಡಿಕಾರುತ್ತಿದ್ದು, ಕೆಲ ದಿನಗಳ ಹಿಂದೆ ಕಾಲೇಜಿನ ಸುತ್ತ ಮತ್ತ ಗಲಾಟೆ ಆಗಿದ್ದು, ಇದಾದ ಬಳಿಕ ಕೂಡ ಸೂಕ್ತ ಕ್ರಮವನ್ನು ಕೈಗೊಳ್ಳವುದರಲ್ಲಿ ಪೋಲಿಸರು ಹಿಂದೇಟು ಹಾಕಿದ್ದಾರೆ.ಇದಲ್ಲದೇ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಗುಂಪು ಕಟ್ಟಿಕೊಂಡು ಪುಂಡಾಟ ನಡೆಸುತ್ತಿದ್ದರು ಕೂಡ ಪೋಲಿಸರು ಕಣ್ಣು ಮುಚ್ಚಿಕೊಂಡು ಸುಮ್ನೆ ಇದ್ದಾರೆ. ಒಂದು ವೇಳೆ ದೂರು ದಾಖಲಾದ್ರು ಕೂಡ ಪೋಲಿಸರು ಕೇಸ್ ಮುಚ್ಚಿ ಹಾಕುತ್ತಿದ್ದಾರೆ ಅಂಥ ಆರೋಪಿಸಿದ್ದಾರೆ.