ಬೆಂಗಳೂರು: ಬೆಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿಕೊಂಡು ತನ್ನ ಚಿಕ್ಕಪ್ಪನ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದು, ಇದೀಗ ಈ ಇಬ್ಬರೂ ಪೊಲೀಸರ ಅತಿಥಿಯಾಗಿದ್ದಾರೆ.
ಬಿಕಾಂ ವಿದ್ಯಾರ್ಥಿನಿ ದೀಕ್ಷಿತಾ ಮತ್ತು ವೈದ್ಯಕೀಯ ಓದುತ್ತಿರುವ ಮಧು ಅವರಿಗೆ ದೈನಂದಿನ ಖರ್ಚಿಗೆ ಹಣದ ಅಗತ್ಯವಿತ್ತು. ದೀಕ್ಷಿತಾ, ಪೀಣ್ಯ ಸಮೀಪದ ನೆಲಗದರನಹಳ್ಳಿಯಲ್ಲಿರುವ ತನ್ನ ಚಿಕ್ಕಪ್ಪ ತಿಮ್ಮೇಗೌಡನ ಮನೆಗೆ ಮಾಟಮಂತ್ರದ ಸಾಮಾಗ್ರಿಗಳಿಂದ ಹೆದರಿಸಿ ಕಳ್ಳತನ ಮಾಡುವ ಪ್ಲ್ಯಾನ್ ಮಾಡಿದ್ದಾಳೆ.
ಅದರಂತೆಯೇ, ಜುಲೈ 6 ರಂದು ದೀಕ್ಷಿತಾ ಮತ್ತು ಮಧು ಪಿಪಿಇ ಕಿಟ್ಗಳನ್ನು ಹಾಕಿಕೊಂಡು ತಿಮ್ಮೇಗೌಡನ ಮನೆಗೆ ತೆರಳಿ ಮಾಟಮಂತ್ರ ಸಾಮಗ್ರಿಗಳನ್ನು ಮನೆ ಬಾಗಿಲಿಗೆ ಎಸೆದಿದ್ದರು. ಇದನ್ನು ಕಂಡ ತಿಮ್ಮೇಗೌಡ ಗಾಬರಿಗೊಂಡು ಮನೆಯಿಂದ ಹೊರಗೆ ಓಡಿ ಸಂಬಂಧಿಕರನ್ನು ಭೇಟಿಯಾಗಲು ಹೊರಟುಹೋದರು.
ಆತ ಮನೆಯಿಂದ ಹೊರ ಹೋದ ಸಮಯವನ್ನು ಲಾಭ ಪಡೆದ ಇವರು, ಮನೆಗೆ ನುಗ್ಗಿ ನುಗ್ಗಿ 200 ಗ್ರಾಂ ಚಿನ್ನಾಭರಣ ಹಾಗೂ 90 ಸಾವಿರ ನಗದು ದೋಚಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿದಾಗ, ಆರೋಪಿಗಳು ಪೊಲೀಸರ ಬಲೆಗೆ ಸಿಲಿದ್ದು, ಅವರ ಬಳಿಯಿಂದ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೀಣ್ಯ ಪೊಲೀಸರು ತಿಳಿಸಿದ್ದಾರೆ.
Karnataka Rain: ಇಂದು, ನಾಳೆ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ – ಹವಾಮಾನ ಇಲಾಖೆ ಮುನ್ಸೂಚನೆ