ಮೈಸೂರು : ಸಿಎಂ ಸಿದ್ದರಾಮಯ್ಯ ಸ್ವಕ್ಷೇತ್ರ ವರುಣಾದಲ್ಲಿ ಚೆಸ್ಕಾಂ ಅಧಿಕಾರಿಗಳು ಗೂಂಡಾ ವರ್ತನೆ ತೋರಿದ್ದು, ಕರೆಂಟ್ ಬಿಲ್ ಕಟ್ಟಿಲ್ಲವೆಂದು ವೃದ್ದೆಯನ್ನು ಅಧಿಕಾರಿಗಳು ತಳ್ಳಾಡಿರುವ ಘಟನೆ ವರದಿಯಾಗಿದೆ. 80 ವರ್ಷದ ಅಂಧ ವೃದ್ದೆ ಮಹದೇವಮ್ಮ ಮೇಲೆ ಚೆಸ್ಕಾಂ ಸಿಬ್ಬಂದಿಗಳು ಗೂಂಡಾ ವರ್ತನೆ ತೋರಿದ್ದಾರೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಚಿಕ್ಕಹೊಮ್ಮದಲ್ಲಿ ಈ ಒಂದು ಘಟನೆ ನಡೆದಿದೆ.
ಭಾಗ್ಯಜ್ಯೋತಿ ಯೋಜನೆ ಅಡಿ ವೃದ್ದೆ ಮಹಾದೇವಮ್ಮ ವಿದ್ಯುತ್ ಸಂಪರ್ಕ ಪಡೆದಿದ್ದರು. ಭಾಗ್ಯಜ್ಯೋತಿ ಫಲಾನುಭವಿಗಳಿಗೆ 55 ಯೂನಿಟ್ ಉಚಿತವಾಗಿ ವಿದ್ಯುತ್ ನೀಡಲಾಗುತ್ತಿದೆ. ಆದರೂ ಕೂಡ ಅಂಧ ವೃದ್ದೆ ಮಹದೇವಮ್ಮ ಮನೆಗೆ 5,000 ಕರೆಂಟ್ ಬಿಲ್ ಬಂದಿದೆ. 5000 ಕರೆಂಟ್ ಬಿಲ್ ಕಟ್ಟುವಂತೆ ಚೆಸ್ಕಂ ಸಿಬ್ಬಂದಿಗಳು ಮನೆಗೆ ಬಂದಿದ್ದಾರೆ. ಬಿಲ್ ಕಟ್ಟದರಿಂದ ಫ್ಯೂಸ್ ಮತ್ತು ಮೀಟರ್ ಬೋರ್ಡ್ ತೆಗೆಯಲು ಯತ್ನಿಸಿದ್ದಾರೆ.
ಈ ವೇಳೆ ಅಂಧ ವಿವೃದ್ದೆ ರುಧೆ ಮಹದೇವಮ್ಮ ಚೆಸ್ಕಾಂ ಸಿಬ್ಬಂದಿಯನ್ನು ಗೊಗರೆದಿದ್ದಾರೆ. ನಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಿಯ ಎಂದು ವೃದ್ಧೆಯನ್ನು ನೂಕಿ ತಳ್ಳಿ ದರ್ಪ ಮೆರೆದಿದ್ದಾರೆ. ಚೆಸ್ಕಾಂ ಸಿಬ್ಬಂದಿ ತಳ್ಳಿದಾಗ ಕೆಳಗೆ ಬಿದ್ದ ವೃದ್ದೆ ಮಹಾದೇವಮ್ಮಗೆ ಗಂಭೀರವಾದ ಗಾಯಗಳಾಗಿವೆ. ಮಹದೇವಮ್ಮರನ್ನು ಸಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆಯ ನಂತರ ವೃದ್ದೆ ಮಾದೇವಮ್ಮ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.








