ಬೆಂಗಳೂರು: ಸಿಎಂ ಸಿದ್ಧರಾಮಯ್ಯ ಅವರು ವಿಶ್ರಾಂತಿಗೆಂದು ಇಂಧನ ಸಚಿವ ಕೆಜೆ ಜಾರ್ಜ್ ಅವರ ತೋಟದ ಮನೆಗೆ ತೆರಳಿದ್ದರು. ಈ ವೇಳೆಯಲ್ಲಿ ಸಿಎಂ ಸಿದ್ಧರಾಮಯ್ಯಗೂ ಪವರ್ ಕಟ್ ಬಿಸಿ ತಟ್ಟಿದೆ.
ಬೆಂಗಳೂರಿನ ಉತ್ತರ ತಾಲೂಕಿನ ಹೆಸರುಘಟ್ಟದಲ್ಲಿ ನಿನ್ನೆ ರಾತ್ರಿ ಸಿಎಂ ಸಿದ್ಧರಾಮಯ್ಯ ಅವರಿಗೂ ವಿಶ್ರಾಂತಿಯ ವೇಳೆಯಲ್ಲಿ ಪವರ್ ಕಟ್ ಬಿಸಿ ತಟ್ಟಿದೆ. ಸಚಿವ ಕೆ.ಜೆ ಜಾರ್ಜ್ ಅವರ ತೋಟದ ಮನೆಗೆ ಸಿಎಂ ಸಿದ್ಧರಾಮಯ್ಯ ವಿಶ್ರಾಂತಿಗೆ ತೆರಳಿದ್ದರು. ಈ ವೇಳೆಯಲ್ಲಿ ವಿದ್ಯುತ್ ಕೈಕೊಟ್ಟ ಪ್ರಸಂಗ ನಡೆದಿದೆ.
ನಿನ್ನೆ ರಾತ್ರಿ ಸುರಿದಂತ ಭಾರೀ ಮಳೆಯಿಂದಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ನಿನ್ನೆ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 10 ಗಂಟೆಯವರೆಗೆ ಪವರ್ ಕಟ್ ಆಗಿದೆ.
ಕೆಜೆ ಜಾರ್ಜ್ ಅವರ ತೋಟದ ಮನೆಯಲ್ಲಿ ಮಳೆಯಿಂದಾಗಿ ಪವರ್ ಕಟ್ ಆದ ಕಾರಣ, ಜನರೇಟರ್ ಬಳಸಿ ವಿದ್ಯುತ್ ಪೂರೈಕೆ ಮಾಡಲಾಗಿದೆ. ಇಂದು ಬೆಳಿಗ್ಗೆ 11 ಗಂಟೆಗೆ ಬೆಸ್ಕಾಂ ಲೈನ್ ಮ್ಯಾನ್ ಗಳು ಬಂದು, ವಿದ್ಯುತ್ ದುರಸ್ಥಿ ಕಾರ್ಯ ನಡೆಸಿದ ನಂತ್ರ ಮರಳಿ ವಿದ್ಯುತ್ ಬಂದಿದೆ.
ನಿನ್ನೆಯಿಂದ ಎಸ್ಕಾರ್ಟ್ ಇಲ್ಲದೆಯೇ ತೋಟದ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಂತ ಸಿಎಂ ಸಿದ್ಧರಾಮಯ್ಯ, ವಿದ್ಯುತ್ ಕೈಕೊಟ್ಟ ಬಳಿಕ ಮರಳಿ ಬೆಂಗಳೂರಿಗೆ ವಾಪಾಸ್ ಆಗಿದ್ದಾರೆ.
‘ಮೋದಿ’ ಮತ್ತೊಮ್ಮೆ ‘ಪ್ರಧಾನಿ’ಯಾಗ್ತಾರೆ: ‘ಕಾಲ ಭೈರವೇಶ್ವರ’ನ ‘ಶ್ವಾನ ಭವಿಷ್ಯ’
BREAKING: ಶರಣಾಗತಿ ಬೆನ್ನಲ್ಲೇ, ಜೂ.5ರವರೆಗೆ ‘ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್’ಗೆ ನ್ಯಾಯಾಂಗ ಬಂಧನ