ಬೆಳಗಾವಿ : ಸಿಎಂ ಸಿದ್ದರಾಮಯ್ಯ ಸರ್ಕಾರ ಪಾಕಿಸ್ತಾನದೊಳಗಿನ ಒಂದು ಸರ್ಕಾರ ಇದ್ದಂತಿದೆ ಎಂದು ಬಿಜೆಪಿ ಉಚ್ಛಾಟಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿದ್ದರಾಮಯ್ಯ ಸರ್ಕಾರವನ್ನು ಪಾಕಿಸ್ತಾನ ಸರಕಾರಕ್ಕೆ ಹೋಲಿಸಿ ವಿವಾದ ಹುಟ್ಟು ಹಾಕಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮಾತನಾಡಿ, ಬಜೆಟ್ನಲ್ಲಿ ಎಲ್ಲವೂ ಮುಸ್ಲಿಮರಿಗೆ ಕೊಟ್ಟಿದ್ದಾರೆ. ಅವರ ಹೆಣ್ಣು ಮಕ್ಕಳಿಗೆ ಕರಾಟೆ ತರಬೇತಿ, ಸಿಬಿಎಸ್ಸಿ ಶಾಲೆ ಮಾಡುವುದು, ಪಿಎಸ್ಐ ಟ್ರೈನಿಂಗ್ ಹಾಗೂ ಉರ್ದು ಶಾಲೆಗೆ ಪ್ರೋತ್ಸಾಹ ಕೊಡುತ್ತಿದ್ದಾರೆ.ಇದು ಒಬ್ಬ ರಾಜ್ಯದ ಮುಖ್ಯಮಂತ್ರಿ ಮಾಡುವ ಬಜೆಟ್ಟಾ? ಈ ರೀತಿ ಪಾಕಿಸ್ತಾನದಲ್ಲಿ ಕೂಡ ಕೊಟ್ಟಿಲ್ಲ.
ಇಂತಹ ಮುಖ್ಯಮಂತ್ರಿ ಆಗಿದ್ದು, ಇಂತಹ ಸರ್ಕಾರ ಇದ್ದಿದ್ದು ನಮ್ಮ ದುರಂತ. ನಮಗೆ ಭ್ರಷ್ಟ ಹಾಗೂ ಸಾಬರ ಕಾಂಗ್ರೆಸ್ ಪಕ್ಷವನ್ನು ಸೋಲಿಸಬೇಕಾಗಿದೆ. ಈ ಸರ್ಕಾರ ಹೋದಮೇಲೆ ಭ್ರಷ್ಟ ಮಾರಿ ಮುಖ್ಯಮಂತ್ರಿ ಪುತ್ರ ಬರಬಾರದು ಪರೋಕ್ಷವಾಗಿ ಮತ್ತೆ ಬಿ. ವೈ ವಿಜಯೇಂದ್ರ ವಿರುದ್ಧ ಯತ್ನಾಳ್ ಕಿಡಿಕಾರಿದರು. ಅವನು ಮಹಾ ಭ್ರಷ್ಟ ಇವರು ಭ್ರಷ್ಟ ಜನರು ಏನು ಮಾಡಬೇಕು? ಬಿಜೆಪಿ ಹೈಕಮಾಂಡ್ ಅವರು ಏನು ಮಾಡುತ್ತಾರೆ ಎಂದು ನೋಡೋಣ ಎಂದರು.
ಇನ್ನು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ರಾಜಕೀಯಕ್ಕೆ ಬಂದು 50 ವರ್ಷ ಪೂರೈಸಿದ ಹಿನ್ನೆಲೆ, ಚಿತ್ರದುರ್ಗದಲ್ಲಿ 50 ವರ್ಷದ ಕಾರ್ಯಕ್ರಮ ಮಾಡುತ್ತಾರೆ. ಲಿಂಗಾಯತರು ಯಾರು ಬಿಎಸ್ ಯಡಿಯೂರಪ್ಪನವರ ಹಿಂದೆ ಇಲ್ಲ 50 ವರ್ಷದ ಕಾರ್ಯಕ್ರಮ ಇದೊಂದು ಬ್ಲಾಕ್ ಮೇಲ್ ಮಾಡುವ ತಂತ್ರವಾಗಿದೆ ಎಂದು ಯಡಿಯೂರಪ್ಪ ವಿರುದ್ಧ ಕೂಡ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು.








