ಬೆಂಗಳೂರು : ಅಕ್ಷರ ಕಲಿಸಿದ ರಾಜಪ್ಪ ಮೇಸ್ಟ್ರು ನೆನೆದ ಸಿಎಂ ಸಿದ್ದರಾಮಯ್ಯ ನಾಡಿನ ಜನತೆಗೆ ಗುರು ಪೂರ್ಣಿಮೆಯ ದಿನದ ಶುಭಾಶಯಗಳನ್ನು ಕೋರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಗುರುಪೂರ್ಣಿಮೆಯ ದಿನದಂದು ಅಕ್ಷರ ಕಲಿಸಿದ ರಾಜಪ್ಪ ಮೇಸ್ಟ್ರು, ಹೋರಾಟದ ಚಿಂತನೆಗೆ ದಿಕ್ಕುತೋರಿದ ಪ್ರೊ. ನಂಜುಂಡಸ್ವಾಮಿ, ಅರಿವಿನ ಗುರುಗಳಾದ ಬುದ್ಧ, ಬಸವಣ್ಣ, ಬಾಬಾ ಸಾಹೇಬರು, ಕನಕದಾಸರು, ನಾರಾಯಣ ಗುರುಗಳನ್ನು ಗೌರವದಿಂದ ಸ್ಮರಿಸಿ ನಮಿಸುತ್ತೇನೆ. ನಾಡಿನ ಜನತೆಗೆ ಗುರು ಪೂರ್ಣಿಮೆಯ ಶುಭಾಶಯಗಳು ಎಂದು ಹೇಳಿದ್ದಾರೆ.
ಇಂದು ಅಂದರೆ ಜುಲೈ 21 ರಂದು ಗುರು ಪೂರ್ಣಿಮಾ ಹಬ್ಬವನ್ನು ಆಚರಿಸಲಾಗುತ್ತಿದೆ. ಮಹಾಭಾರತದ ಲೇಖಕ ವೇದವ್ಯಾಸರು ಗುರು ಪೂರ್ಣಿಮೆಯ ದಿನದಂದು ಜನಿಸಿದರು. ಈ ದಿನವನ್ನು ಗುರುಗಳ ಗೌರವಾರ್ಥವಾಗಿ ಆಚರಿಸಲಾಗುತ್ತದೆ.