ಬೆಂಗಳೂರು : ‘ಮನ್ ರೇಗಾ’ ಹೆಸರು ಬದ್ಲಾವಣೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್, ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಸೇರಿದಂತೆ ಸಚಿವರು ಆಗಮಿಸಿದ್ದಾರೆ. ಪ್ರತಿಭಟನಾ ವೇದಿಕೆಗೆ ಕಾಂಗ್ರೆಸ್ ನಾಯಕರು ಆಗಮಿಸಿದ್ದಾರೆ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಸಿಎಂ ಸಿದ್ದರಾಮಯ್ಯ ಭಾಷಣಕ್ಕೆ ಬರುತ್ತಿದ್ದಂತೆ ಡಿಕೆ ಡಿಕೆ ಎಂದು ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಕಾರ್ಯಕರ್ತರು ಡಿಕೆ ಎಂದು ಘೋಷಣೆ ಕೂಗಿದಕ್ಕೆ ಗರಂ ಆದರು. ಕಾರ್ಯಕರ್ತರನ್ನು ಕುಳಿತುಕೊಳ್ಳಿ ಎಂದು ಗದರಿದರು ಸುಮ್ಮನೆ ಕುಳಿತುಕೊಳ್ಳುವಂತೆ ಇದೆ ವೇಳೆ ಚಂದ್ರಶೇಖರ್ ಅವರು ಸಹ ತಾಕಿದು ಮಾಡಿದರು.
ಡಿಕೆ ಶಿವಕುಮಾರ್ ಭಾಷಣ ಕೆ ತೆರಳುವ ವೇಳೆ ಅವರ ತಲೆಗೆ ಸುತ್ತಿಕೊಂಡಿದ್ದ ಟವಲ್ ಸರಿಯಾಗಿ ಕಟ್ಟಿರಲಿಲ್ಲ. ಈ ವೇಳೆ ಸುರ್ಜಿವಾಲ ಡಿಕೆ ತಲೆಗೆ ತಾನೇ ಟವೆಲ್ ಕಟ್ಟಿದ ಪ್ರಸಂಗ ನಡೆಯಿತು. ಸಿಎಂ ತಲೆಗೆ ಸುತ್ತುವುದಕ್ಕೆ ಹೋದಾಗ ಬೇಡ ಬೇಡ ಎಂದು ಸಿಎಂ ಸಿದ್ದರಾಮಯ್ಯ ತಾವೇ ಟವೆಲ್ ಸುತ್ತಿಕೊಂಡಿದ್ದಾರೆ. ಸುರ್ಜೆವಲ ಕಟ್ಟಿದ ಟವೆಲ್ ಲೂಸ್ ಆಗಿತ್ತು, ಆದರೆ ಸಿದ್ದರಾಮಯ್ಯ ತಾವೇ ಡಿಕೆ ಶಿವಕುಮಾರ್ ಅವರಿಗೆ ತಲೆಗೆ ಟವೆಲ್ ಕಟ್ಟಿದ್ದಾರೆ.ಈ ಒಂದು ವಿಚಾರಕ್ಕೆ ಸಂಬಂಧಪಟ್ಟಂತೆ ಇದು ಅಧಿಕಾರದ ಹಸ್ತಾಂತರದ ಮುನ್ಸೂಚನೆನಾ? ಎಂದು ರಾಜ್ಯದ ಜನತೆ ಚರ್ಚಿಸುತ್ತಿದ್ದಾರೆ.








