ಬೆಂಗಳೂರು: ಮುಂದೆ ಸಿಎಂ ಸಿದ್ದರಾಮಯ್ಯ, ಪರಮೇಶ್ವರ್ ಸಿಡಿ ಕೂಡ ಬರಬಹುದು ಅಂಥ ಬಿಜೆಪಿ ಜಾರಕಿಹೊಳಿಯವರು ಹೇಳಿದ್ದಾರೆ.
ಅವರು ಇಂದು ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಮತದಾನ ಮಾಡಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದರು. ಇದೇ ವೇಳೆ ಅವರು ನಾನು ಮೊದಲಿಂದಲೂ ಪದೇ ಪದೇ ಹೇಳುತ್ತಿದ್ದೆ, ನನಗೆ ಆಗಿರುವುದು ನಾಳೆ ಸಿದ್ದರಾಮಯ್ಯ ಮತ್ತು ಗೃಹ ಸಚಿವರಿಗೂ ಆಗಬಹುದು, ದಯವಿಟ್ಟು ನಾನು ಕೈ ಮುಗಿದುಕೇಳುವೆ ಇದರ ಬಗ್ಗೆ ಅಂತ್ಯ ಕಾಣಬೇಕಾಗಿದೆ ಅಂತ ಹೇಳಿದರು. ಇನ್ನೂ ಮಹಾನಾಯಕ ಹಣದಲ್ಲಿ ಪ್ರಬಲನಾಗಿದ್ದಾನೆ,. ಅವನು ಏನು ಬೇಕಾದ್ರು ಮಾಡಬಹುದು ಅಂಥ ಅವರು ಹೇಳಿದರು.