ಮೈಸೂರು : ಸಿಎಂ ಸಿದ್ದರಾಮಯ್ಯ ಅವರು ಮೈಸೂರು ಪ್ರವಾಸದಲ್ಲಿದ್ದು, ತಮ್ಮ ನೆಚ್ಚಿನ ಮೈಲಾರಿ ಹೋಟೆಲ್ಗೆ ಭೇಟಿ ನೀಡಿ ಉಪಹಾರ ಸೇವಿಸಿದ್ದಾರೆ. ಬಳಿಕ ತೃಪ್ತಿ, ಸಮಾಧಾನವಾಯಿತು ಎಂದು ಹೇಳಿದ್ದಾರೆ.
ಈ ಕುರಿತು ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ನಮ್ಮ ಮೈಸೂರಿನ ಮೈಲಾರಿ ಹೋಟೆಲ್ನಲ್ಲಿ ತಿಂಡಿ ತಿಂದರೆ ಒಂಥರಾ ಸಮಾಧಾನ, ತೃಪ್ತಿ. ಇಂದು ಕೂಡಾ ಹಾಗೆಯೇ ಆಯಿತು ” ಎಂದಿದ್ದಾರೆ. ಜತೆಗೆ ಉಪಹಾರ ಸೇವಿಸುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರ ಈ ಫೋಟೋ ವೈರಲ್ ಆಗುತ್ತಿದ್ದಂತೆ ಹಲವಾರು ಜನ ನೆಟ್ಟಿಗರು ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೈಲಾರಿ ಹೋಟೆಲ್ನಲ್ಲಿ ಮೃದುವಾದ ದೋಸೆ ಹಾಗೂ ಮಲ್ಲಿಗೆಯಂತಹ ಇಡ್ಲಿ ಸಾಕಷ್ಟು ಫೇಮಸ್. ಪ್ರತಿ ಬಾರಿ ಬಂದಾಗಲೂ ಸಿಎಂ ಬೆಣ್ಣೆ ದೋಸೆ, ಕಾಯಿ ಚಟ್ನಿ, ಆಲೂಗಡ್ಡೆ ಈರುಳ್ಳಿ ಪಲ್ಯ, ಇಡ್ಲಿ ಚಟ್ನಿ ತುಪ್ಪ ಅನ್ನು ಸವಿಯುತ್ತಾರೆ. ಇದಾದ ಬಳಿಕ ಕೆಆರ್ಎಸ್ ಡ್ಯಾಮ್ ಗೆ ತೆರಳಿ ಬಾಗಿನ ಅರ್ಪಿಸಿದರು. ಅದಾದ ನಂತರ ಮೈಸೂರು ಜಿಲ್ಲೆಯ ಹೆಚ್ಡಿ ಕೋಟೆ ತಾಲೂಕಿನ ಕಬಿನಿ ಜಜಲಾಶಯಕ್ಕೂ ತೆರಳಿ ಬಾಗಿನ ಅರ್ಪಿಸಿ ನಾಡಿನಲ್ಲಿ ಉತ್ತಮ ಮಳೆ ಆಗುತ್ತಿದ್ದು ರಾಜ್ಯ ಸಮೃದ್ಧಿಯಾಗಿದೆ ಎಂದು ತಿಳಿಸಿದರು.
ನಮ್ಮ ಮೈಸೂರಿನ ಮೈಲಾರಿ ಹೋಟೆಲ್ನಲ್ಲಿ ತಿಂಡಿ ತಿಂದರೆ ಒಂಥರಾ ಸಮಾಧಾನ, ತೃಪ್ತಿ.
ಇಂದು ಕೂಡಾ ಹಾಗೆಯೇ ಆಯಿತು. pic.twitter.com/uetWX4aVp6— Siddaramaiah (@siddaramaiah) July 29, 2024