Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬಾತ್‌ರೂಮ್ Vs ವಾಶ್‌ರೂಮ್ ನಡುವಿನ ವ್ಯತ್ಯಾಸವೇನು? ಇಲ್ಲಿದೆ ಸರಳ ವಿವರಣೆ!

24/03/2026 8:10 AM

ಇಂಧನ ಕೊರತೆ ನೀಗಿಸಲು ಸಿದ್ಧತೆ: ಯುಎಇಯಿಂದ 2 ಎಲ್‌ಪಿಜಿ ಹಡಗು ಹಾಗೂ ಸೌದಿಯಿಂದ ತೈಲ ಟ್ಯಾಂಕರ್ ಭಾರತದತ್ತ!

24/03/2026 8:02 AM

ಒಪ್ಪಿಗೆಯ ದೈಹಿಕ ಸಂಬಂಧ ಅತ್ಯಾಚಾರವಲ್ಲ : ಕೋರ್ಟ್ ಮಹತ್ವದ ತೀರ್ಪು

24/03/2026 7:57 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯ ಬಿಜೆಪಿ ನಾಯಕರಿಗೆ ಈ ತಿರುಗೇಟು ಕೊಟ್ಟ ಸಿಎಂ ಸಿದ್ಧರಾಮಯ್ಯ
KARNATAKA

ರಾಜ್ಯ ಬಿಜೆಪಿ ನಾಯಕರಿಗೆ ಈ ತಿರುಗೇಟು ಕೊಟ್ಟ ಸಿಎಂ ಸಿದ್ಧರಾಮಯ್ಯ

By kannadanewsnow0906/02/2026 8:32 PM

ಬೆಂಗಳೂರು: ರಾಜ್ಯ ಬಿಜೆಪಿ ನಾಯಕರು ತಮ್ಮ ಹೈಕಮಾಂಡ್‌ನ ಓಲೈಕೆಗಾಗಿ ಸುಳ್ಳು ಮಾಹಿತಿ ನೀಡುವುದನ್ನು ಬಿಟ್ಟು, ಜನರ ಹಿತಕ್ಕಾಗಿ ಈಗಲಾದರೂ ತಮ್ಮದೇ ಪ್ರಧಾನಿಗಳ ಬಳಿ ಧ್ವನಿಯೆತ್ತಲಿ ಎಂಬುದಾಗಿ ಸಿಎಂ ಸಿದ್ಧರಾಮಯ್ಯ ಕಿವಿಮಾತು ಹೇಳಿದ್ದಾರೆ.

ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಬೆಂಗಳೂರು ಮೆಟ್ರೋ ಕೇವಲ ಒಂದು ಸಾರಿಗೆ ವ್ಯವಸ್ಥೆಯಲ್ಲ, ಅದು ನಮ್ಮ ನಗರದ ಲಕ್ಷಾಂತರ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಸಾಮಾನ್ಯ ಕುಟುಂಬಗಳ ಕನಸುಗಳನ್ನು ಹೊತ್ತೊಯ್ಯುವ, ಪ್ರಗತಿಯತ್ತ ಮುನ್ನಡೆಸುವ ಮತ್ತು ಈ ಎಲ್ಲರ ದೈನಂದಿನ ಜೀವನಾಡಿಯ ಸಂಕೇತವಾಗಿದೆ. ಇತ್ತೀಚಿನ ಮೆಟ್ರೋ ದರ ಪರಿಷ್ಕರಣೆಯ ನಂತರ ಪ್ರಯಾಣಿಕರಿಂದ ವ್ಯಕ್ತವಾದ ಆತಂಕ ಮತ್ತು ಬೇಸರವನ್ನು ನಾನು ಅರ್ಥೈಸಿಕೊಳ್ಳಬಲ್ಲೆ. ಜನರ ಅಹವಾಲಿಗೆ ಕಿವಿಯಾಗಬೇಕಿರುವುದು ಪ್ರತಿ ಜವಾಬ್ದಾರಿಯುತ ಸರ್ಕಾರದ ಕರ್ತವ್ಯ ಎಂದು ನಂಬಿರುವ ನಮಗೆ ನಿಮ್ಮ ಅಹವಾಲುಗಳೇ ಆದ್ಯತೆಯಾಗಿವೆ ಎಂದಿದ್ದಾರೆ.

ಸತ್ಯ ಸಂಗತಿ ಏನೆಂದರೆ

ಮೆಟ್ರೋ ರೈಲ್ವೇಸ್ (ಆಪರೇಷನ್ & ಮೇಂಟೆನೆನ್ಸ್) ಆಕ್ಟ್, 2002ರ ಅಡಿಯಲ್ಲಿ, ಮೆಟ್ರೋ ದರಗಳನ್ನು ರಾಜ್ಯ ಸರ್ಕಾರ ನಿರ್ಧರಿಸುವುದಿಲ್ಲ. ದರಗಳನ್ನು ಕೇಂದ್ರ ಸರ್ಕಾರದ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯದ ಮೂಲಕ ರಚಿಸಲಾದ ಸ್ವತಂತ್ರ ದರ ನಿಗದಿ ಕಮಿಟಿ (FFC) ನಿರ್ಧರಿಸುತ್ತದೆ.

ಆಕ್ಟ್‌ನ ಸೆಕ್ಷನ್ 36ರ ಪ್ರಕಾರ, ದರ ನಿಗದಿ ಕಮಿಟಿಯು ನಿಗದಿತ ಅವಧಿಯೊಳಗೆ ತನ್ನ ಶಿಫಾರಸುಗಳನ್ನು ಸಲ್ಲಿಸಬೇಕು, ಮತ್ತು ಸೆಕ್ಷನ್ 37ರ ಅಡಿಯಲ್ಲಿ ಈ ಶಿಫಾರಸುಗಳು ಮೆಟ್ರೋ ಆಡಳಿತವು ಒಪ್ಪಲೇಬೇಕಿದೆ ಮತ್ತು ಜಾರಿ ಮಾಡಬೇಕಿದೆ. ರಾಜ್ಯ ಸರ್ಕಾರಕ್ಕೆ ಅಥವಾ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ ಈ ಶಿಫಾರಸುಗಳನ್ನು ರದ್ದುಗೊಳಿಸುವ ಅಥವಾ ಉಲ್ಲಂಘಿಸುವ ಕಾನೂನಾತ್ಮಕ ಅಧಿಕಾರವಿಲ್ಲ.

ಈ ದರ ನಿಗದಿ ಕಮಿಟಿಯನ್ನು:

● ಕೇಂದ್ರ ಸರ್ಕಾರವೇ ರಚಿಸುತ್ತದೆ.

● ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಯವರು ಕಮಿಟಿಯ ನೇತೃತ್ವ ವಹಿಸಿರುತ್ತಾರೆ.

● ಕೇಂದ್ರದ ನಿಯಮಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುತ್ತದೆ.

● ಮತ್ತು ಸಂಸತ್ತಿನಲ್ಲಿ ತಾವೇ ಈ ಶಿಫಾರಸುಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ಮಾಡಿ ಈಗ

ನಮ್ಮ ಸರ್ಕಾರದ ಮೇಲೆ ಬೆಲೆಯೇರಿಕೆ ನಿರ್ಧಾರದ ಆರೋಪ ಹೊರಿಸುವುದು ಅಪ್ರಾಮಾಣಿಕ ನಡೆ ಮಾತ್ರವಲ್ಲ, ಜನರನ್ನು ಉದ್ದೇಶಪೂರ್ವಕವಾಗಿ ತಪ್ಪುದಾರಿಗೆಳೆಯುವ ಪ್ರಯತ್ನವಾಗಿದೆ.

ನಾನು ಈ ಕೆಳಕಂಡ ವಿಷಯವನ್ನು ಔಪಚಾರಿಕವಾಗಿ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಲಿದ್ದು, ಕೇಂದ್ರಕ್ಕೆ ನನ್ನ ಒತ್ತಾಯಗಳು:

● ದರ ನಿಗದಿ ಕಮಿಟಿಯು ಶಿಫಾರಸು ಮಾಡಿರುವ ದರವನ್ನು ಮರುಪರಿಶೀಲಿಸಬೇಕು.

● ದೈನಂದಿನ ಪ್ರಯಾಣಿಕರು, ವಿದ್ಯಾರ್ಥಿಗಳು ಮತ್ತು ಬಡಜನರಿಗೆ ಅನುಕೂಲವಾಗುವಂತೆ ಸಮಾನವಾಗಿ ದರ ನಿಗದಿ ಮಾಡುವ ವ್ಯವಸ್ಥೆಯನ್ನು ಅನುಸರಿಸಬೇಕು.

● ಸಾಮಾಜಿಕ ನ್ಯಾಯದೊಂದಿಗೆ ಸುಸ್ಥಿರ ಆರ್ಥಿಕತೆಯನ್ನು ಸರಿದೂಗಿಸುವ ನೀತಿಗಳ ಬಗ್ಗೆ ಗಮನ ಹರಿಸಬೇಕು.

ನಗರಗಳ ಸಂಪರ್ಕ ಹಾಗೂ ಸಾರಿಗೆ, ಸಾರ್ವಜನಿಕ ಸೇವೆಗಳು ಮತ್ತು ಜನರ ಹಿತವನ್ನು ರಕ್ಷಿಸುವಲ್ಲಿ ಕರ್ನಾಟಕವು ದೇಶದಲ್ಲೇ ಮುಂಚೂಣಿ ರಾಜ್ಯವಾಗಿದೆ. ನಾವು ಬೆಂಗಳೂರು ನಗರ ನಿವಾಸಿಗಳ ಹಿತರಕ್ಷಣೆಗಾಗಿ ಸಂವಿಧಾನಾತ್ಮಕವಾಗಿ, ರಚನಾತ್ಮಕವಾಗಿ ಮತ್ತು ದೃಢವಾಗಿ ನಿಲ್ಲಲಿದ್ದೇವೆ.

ವಿರೋಧ ಪಕ್ಷಗಳು ಹರಡುತ್ತಿರುವ ತಪ್ಪು ಮಾಹಿತಿಯನ್ನು ಬದಿಗೊತ್ತಿ ರಾಜ್ಯದ ಜನತೆಯ ಹಿತಕ್ಕಾಗಿ ನೀವೆಲ್ಲರೂ ನಮ್ಮ ಜೊತೆ ನಿಲ್ಲಬೇಕು ಎಂದು ಮನವಿ ಮಾಡುತ್ತೇನೆ. ದೆಹಲಿಯಲ್ಲಿ ಕರ್ನಾಟಕದ ಹಿತ ಕಾಪಾಡಲು ವಿಫಲರಾಗಿರುವ ಬಿಜೆಪಿ ನಾಯಕರೇ ಇಂದು ಮೆಟ್ರೋ ಪ್ರಯಾಣ ದರ ಏರಿಕೆಗೆ ರಾಜ್ಯ ಸರ್ಕಾರವನ್ನು ಗುರಿಯಾಗಿಸಿ ಟೀಕಿಸುವ ಮೂಲಕ ರಾಜಕೀಯ ನಾಟಕ ಮಾಡುತ್ತಿದ್ದಾರೆ.

● ಕರ್ನಾಟಕದ ಬಿಜೆಪಿ ಸಂಸದರು ಈ ವಿಷಯವನ್ನು ಸಂಸತ್ತಿನಲ್ಲಿ ಏಕೆ ಪ್ರಶ್ನಿಸಲಿಲ್ಲ?

● ಕರ್ನಾಟಕದ ಬಿಜೆಪಿ ಸಚಿವರು ಕೇಂದ್ರ ಮಟ್ಟದಲ್ಲಿ ಉನ್ನತ ದರದ ಸ್ಲ್ಯಾಬ್‌ಗಳನ್ನು ಏಕೆ ವಿರೋಧಿಸಲಿಲ್ಲ?

● ಬೆಂಗಳೂರಿಗರ ಬೆಂಬಲಕ್ಕೆ ನಿಲ್ಲಬೇಕಿದ್ದ ಕರ್ನಾಟಕದ ಬಿಜೆಪಿ ನಾಯಕರು ದೆಹಲಿ ಸರ್ಕಾರದ ವಕ್ತಾರರಂತೆ ವರ್ತಿಸುತ್ತಿರುವುದು ಯಾಕೆ?

ಅಸಮರ್ಪಕ ತೆರಿಗೆ ಹಂಚಿಕೆ, ನ್ಯಾಯಯುತ ಅನುದಾನದ ನಿರಾಕರಣೆ, ಮೂಲಭೂತ ಸೌಲಭ್ಯಗಳಿಗೆ ಬೆಂಬಲ ನೀಡುವಲ್ಲಿ ಅನುಸರಿಸುತ್ತಿರುವ ವಿಳಂಬ ನೀತಿ ಮತ್ತು ಈಗ ಸಾಮಾನ್ಯ ಜನರ ಮೇಲೆ ಹೊರೆ ಹಾಕುವ ಮೆಟ್ರೋ ದರಗಳು, ಇವೆಲ್ಲವೂ ಕನ್ನಡಿಗರನ್ನು ಶೋಷಣೆಗೊಳಿಪಡಿಸಲು ಕೇಂದ್ರ ಸರ್ಕಾರದ ಅಸ್ತ್ರಗಳಾಗಿವೆ ಎಂದಿದ್ದಾರೆ.

ಬೆಂಗಳೂರು ಮೆಟ್ರೋ ಕೇವಲ ಒಂದು ಸಾರಿಗೆ ವ್ಯವಸ್ಥೆಯಲ್ಲ, ಅದು ನಮ್ಮ ನಗರದ ಲಕ್ಷಾಂತರ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಸಾಮಾನ್ಯ ಕುಟುಂಬಗಳ ಕನಸುಗಳನ್ನು ಹೊತ್ತೊಯ್ಯುವ, ಪ್ರಗತಿಯತ್ತ ಮುನ್ನಡೆಸುವ ಮತ್ತು ಈ ಎಲ್ಲರ ದೈನಂದಿನ ಜೀವನಾಡಿಯ ಸಂಕೇತವಾಗಿದೆ. ಇತ್ತೀಚಿನ ಮೆಟ್ರೋ ದರ ಪರಿಷ್ಕರಣೆಯ ನಂತರ ಪ್ರಯಾಣಿಕರಿಂದ ವ್ಯಕ್ತವಾದ ಆತಂಕ ಮತ್ತು… pic.twitter.com/2l8583y71n

— Siddaramaiah (@siddaramaiah) February 6, 2026

Share. Facebook Twitter LinkedIn WhatsApp Email

Related Posts

ಬಾತ್‌ರೂಮ್ Vs ವಾಶ್‌ರೂಮ್ ನಡುವಿನ ವ್ಯತ್ಯಾಸವೇನು? ಇಲ್ಲಿದೆ ಸರಳ ವಿವರಣೆ!

24/03/2026 8:10 AM1 Min Read

ಪೋಷಕರಿಗೆ ಗುಡ್ ನ್ಯೂಸ್ : ಜೂನ್ ನಿಂದ 10,000 ಅಂಗನವಾಡಿ ಕೇಂದ್ರಗಳಲ್ಲಿ LKG, UKG ತರಗತಿ ಆರಂಭ

24/03/2026 7:45 AM1 Min Read

ನಿಮಗೆ ರಾಘವೇಂದ್ರ ಸ್ವಾಮಿಗಳ ಜೀವನ ಚರಿತ್ರೆ ಗೊತ್ತಾ?! ಇಲ್ಲಿದೆ ಓದಿ.!

24/03/2026 7:27 AM6 Mins Read
Recent News

ಬಾತ್‌ರೂಮ್ Vs ವಾಶ್‌ರೂಮ್ ನಡುವಿನ ವ್ಯತ್ಯಾಸವೇನು? ಇಲ್ಲಿದೆ ಸರಳ ವಿವರಣೆ!

24/03/2026 8:10 AM

ಇಂಧನ ಕೊರತೆ ನೀಗಿಸಲು ಸಿದ್ಧತೆ: ಯುಎಇಯಿಂದ 2 ಎಲ್‌ಪಿಜಿ ಹಡಗು ಹಾಗೂ ಸೌದಿಯಿಂದ ತೈಲ ಟ್ಯಾಂಕರ್ ಭಾರತದತ್ತ!

24/03/2026 8:02 AM

ಒಪ್ಪಿಗೆಯ ದೈಹಿಕ ಸಂಬಂಧ ಅತ್ಯಾಚಾರವಲ್ಲ : ಕೋರ್ಟ್ ಮಹತ್ವದ ತೀರ್ಪು

24/03/2026 7:57 AM

ಉದ್ಯೋಗಿಗಳಿಗೆ ಗುಡ್ ನ್ಯೂಸ್ : ಇನ್ಮುಂದೆ ಕ್ಲೈಮ್ ಮಾಡದ PF ಹಣ ನೇರ ನಿಮ್ಮ ಬ್ಯಾಂಕ್ ಖಾತೆಗೆ !

24/03/2026 7:55 AM
State News
KARNATAKA

ಬಾತ್‌ರೂಮ್ Vs ವಾಶ್‌ರೂಮ್ ನಡುವಿನ ವ್ಯತ್ಯಾಸವೇನು? ಇಲ್ಲಿದೆ ಸರಳ ವಿವರಣೆ!

By kannadanewsnow5724/03/2026 8:10 AM KARNATAKA 1 Min Read

ನಾವು ಶಾಪಿಂಗ್ ಮಾಲ್, ರೆಸ್ಟೋರೆಂಟ್, ಜಿಮ್ ಅಥವಾ ಹೋಟೆಲ್‌ಗಳಿಗೆ ಹೋದಾಗ ಅಲ್ಲಿನ ಶೌಚಾಲಯಗಳ ಹೊರಗೆ ಬೇರೆ ಬೇರೆ ಬೋರ್ಡ್‌ಗಳನ್ನು ನೋಡಿರುತ್ತೇವೆ.…

ಪೋಷಕರಿಗೆ ಗುಡ್ ನ್ಯೂಸ್ : ಜೂನ್ ನಿಂದ 10,000 ಅಂಗನವಾಡಿ ಕೇಂದ್ರಗಳಲ್ಲಿ LKG, UKG ತರಗತಿ ಆರಂಭ

24/03/2026 7:45 AM

ನಿಮಗೆ ರಾಘವೇಂದ್ರ ಸ್ವಾಮಿಗಳ ಜೀವನ ಚರಿತ್ರೆ ಗೊತ್ತಾ?! ಇಲ್ಲಿದೆ ಓದಿ.!

24/03/2026 7:27 AM

ALERT : ಸಾಲದ `EMI’ ಪಾವತಿ ಮಿಸ್ ಮಾಡಿಕೊಂಡರೆ ನಿಮಗಾಗುವ ನಷ್ಟಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

24/03/2026 7:25 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.