ಬೆಂಗಳೂರು: ಕನ್ನಡದ ಬಿಗ್ ಬಾಸ್ ಸೀಸನ್ 12ರ ಆವೃತ್ತಿಯಲ್ಲಿ ಗೆಲುವಿನ ನಗೆಯನ್ನು ಗಿಲ್ಲಿ ನಟ ಬೀರಿದ್ದರು. ಅವರ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿಯಾದರು. ಇಂತಹ ಗಿಲ್ಲಿ ನಟ ಅವರಿಗೆ ಸಿಎಂ ಸಿದ್ಧರಾಮಯ್ಯ ಅಭಿನಂದಿಸಿ, ಶುಭಾಶಯ ಕೋರಿದರು.
ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಬಿಗ್ ಬಾಸ್ ಸೀಸನ್ 12 ಗೆದ್ದಂತ ಗಿಲ್ಲಿ ನಟ ಭೇಟಿಯಾದರು. ಕೆಲ ಕಾಲ ಅವರೊಂದಿಗೆ ಮಾತನಾಡಿದಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ಗಿಲ್ಲಿ ನಟನಿಗೆ ಶಾಲು ಹೊದಿಸಿ, ಹಾರವನ್ನು ಹಾಕಿ ಅಭಿನಂದಿಸಿ, ಶುಭಕೋರಿದರು.








