ಮೈಸೂರು: ಮೋದಿ ಹೇಳಿದ್ದೆಲ್ಲ ಸುಳ್ಳು. ಉದ್ಯೋಗ ಸೃಷ್ಠಿ ಮಾಡ್ತೀವಿ, 15 ಲಕ್ಷ ಹಣ ಕೊಡ್ತೀವಿ ಅಂತೆಲ್ಲ ಹೇಳಿದ್ರು. ಆದ್ರೇ ಒಂದೇ ಒಂದು ನೀಡಿದ ಭರವಸೆ ಈಡೇರಿಸಲಿಲ್ಲ ಎಂಬುದಾಗಿ ಸರಣಿ ಪ್ರಶ್ನೆಗಳ ಮೂಲಕ ಪ್ರಧಾನಿ ಮೋದಿ ವಿರುದ್ಧ ಸಿಎಂ ಸಿದ್ಧರಾಮಯ್ಯ ವಾಗ್ಧಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಬಿಜೆಪಿಯವರು ಚುನಾವಣೆ ಸಂದರ್ಭದಲ್ಲಿ 600 ಭರವಸೆ ನೀಡಿದ್ದರು. 600 ಭರವಸೆಗಳಲ್ಲಿ ಶೇ.10ರಷ್ಟು ಭರವಸೆಗಳನ್ನು ನೀಡಿಲ್ಲ ಎಂದರು.
ಮೋದಿ 15 ಲಕ್ಷ ಹಾಕುತ್ತೇವೆ ಅಂತ ಭರವಸೆ ನೀಡಿದ್ರು ಕೊಟ್ರಾ.? 2 ಕೋಟಿ ಉದ್ಯೋಗದ ಭರವಸೆ ನೀಡಿದ್ರು ಕೊಟ್ರಾ? ರೈತರ ಆದಾಯ ಡಬ್ಬಲ್ ಮಾಡ್ತೀವಿ ಅಂದಿದ್ದರು ಮಾಡಿದ್ರಾ.? ಎಂಬುದಾಗಿ ಸರಣಿ ಪ್ರಶ್ನೆಗಳನ್ನು ಕೇಳುವ ಮೂಲಕ ಮೋದಿ ವಿರುದ್ಧ ಸಿಎಂ ಸಿದ್ಧರಾಮಯ್ಯ ವಾಗ್ಧಾಳಿ ನಡೆಸಿದರು.
ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : ನವೋದಯ ವಿದ್ಯಾಲಯದಲ್ಲಿ 1377 ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ
‘ಸೋನುಗೌಡ’ ಕಾನೂನು ಬಾಹಿರವಾಗಿ ‘ಮಗು ದತ್ತು’ ಪ್ರಕರಣ: ಪೊರೀಸರಿಂದ ‘ಸ್ಥಳ ಮಹಜರು’