ಅವಿನಾಶ್ ಆರ್ ಭೀಮಸಂದ್ರ
ಬೆಂಗಳೂರು: 2025-26ನೇ ಸಾಲಿನ ಬಜೆಟ್ ಅನ್ನು ಸಿಎಂ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಮಂಡನೆ ಮಾಡುತ್ತಿದ್ದಾರೆ. ಈ ನಡುವೆ ಅವರು ತಮ್ಮ ಬಜೆಟ್ ಮಂಡನೆ ವೇಳೆಯಲ್ಲಿ ಮಾತನಾಡುತ್ತ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಭವಿಶ್ಯದ ಕರ್ನಾಟಕದ ಆರ್ಥಿಕ ಅಭಿವೃದ್ದಿಗೆ ಸಹಾಯವಾಗಲಿದೆ ಅಂತ ತಿಳಿಸಿದರು.
ಬೆಂಗಳೂರಿಗೆ ಅನುದಾನ ಏಳು ಸಾವಿರ ಕೋಟಿ ಏರಿಕೆ ಮಾಡಲಾಗಿದೆ ಅಂತ ತಿಳಿಸಿದರು. ಇನ್ನೂ ಇದೇ ವೇಳೆ ಬೆಂಗಳೂರು ಟನಲ್ ಯೋಜನೆಗೆ ನಲವತ್ತು ಸಾವಿರ ಕೋಟಿಯನ್ನು ಬಿಡುಗಡೆ ಮಾಡಲಾಗುವುದು ಅಂತ ತಿಳಿಸಿದರು. ಇದೇ ವೇಳೆ ಸರ್ಕಾರಿ-ಪ್ರೌಢಶಾಲೆ ಶಿಕ್ಷಕರ ಗೌರವ ಧನ ಹೆಚ್ಚಳ ಮಾಡಲಾಗಿದ್ದು, ಮಾಸಿಕ ಎರಡು ಸಾವಿರ ರೂಗಳನ್ನು ಹೆಚ್ಚಳ ಮಾಡಿರುವುದಾಗಿ ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಇದೇ ವೇಳೆ ಅವರು ಬಿಸಿಯೂಟ ಕಾರ್ಯಕರ್ತೆಯರ ಗೌರವ ಧನ ಹೆಚ್ಚಳ ಮಾಡಿರುವುದಾಗಿ ತಿಳಿಸಿದರು.