ಬೆಂಗಳೂರು: ಕಬ್ಬು ಬೆಳೆಗಾರರು ಬೆಲೆ ನಿಗದಿಗೆ ಒತ್ತಾಯಿಸಿ ನಡೆಸುತ್ತಿರುವಂತ ಪ್ರತಿಭಟನೆ ಸಂಬಂಧ ಇಂದು ಬೆಳಗ್ಗೆಯಿಂದ ಕಾರ್ಖಾನೆ ಮಾಲೀಕರು, ರೈತರೊಂದಿಗೆ ಸಭೆ ನಡೆಸಿದ್ದೇನೆ. ಪ್ರತಿ ಟನ್ ಕಬ್ಬಿಗೆ ರೂ.3,300 ನೀಡಲು ನಿರ್ಧರಿಸಿರುವುದಾಗಿ ಸಿಎಂ ಸಿದ್ಧರಾಮಯ್ಯ ಘೋಷಿಸಿದರು.
ರಾಜ್ಯದಲ್ಲಿ 12 ಕಾರ್ಖಾನೆ ಹೊರತುಪಡಿಸಿದರೇ ಉಳಿದೆಲ್ಲವೂ ಖಾಸಗಿಯವು. ದಿನಾಂಕ 06-05-2025ರಂದು ಎಫ್ ಆರ್ ಸಿ ಯನ್ನು ಕೇಂದ್ರ ಸರ್ಕಾರ ನಿಗದಿ ಮಾಡಿದೆ. 2025-26ನೇ ಸಾಲಿನಲ್ಲಿ 10.25 ರಿಕವರಿ ಇದ್ದರೇ ಟನ್ ಗೆ ರೂ.3,550 ರೂ ನಿಗದಿ ಪಡಿಸಲಾಗಿದೆ. ಇದರಲ್ಲಿ ಕಟಾವು, ಸಾರಿಗೆ ವೆಚ್ಚವೂ ಸೇರಿರುತ್ತದೆ ಎಂಬುದಾಗಿ ತಿಳಿಸಿದರು.
9.5 ರಿಕವರಿಗಿಂತ ಕಡಿಮೆ ಇದ್ದರೇ 3290.50 ರೂಪಾಯಿ ನಿಗದಿ ಪಡಿಸಲಾಗಿದೆ. ಎಫ್ ಆರ್ ಪಿ ಗಿಂತ ಹೆಚ್ಚಿನ ದರವನ್ನು ನೀಡುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾನಿರತ ರೈತರ ಜೊತೆಗೆ ಡಿಸಿ, ಎಸ್ ಪಿ ಸಭಎ ವಿಫಲವಾಗಿತ್ತು ಎಂದರು.
ಪ್ರತಿ ಟನ್ ಕಬ್ಬಿಗೆ ರೂ.3,500 ನೀಡುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಈಗಾಗಲೇ ಈ ವಿಷಯ ಸಂಬಂಧ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಇಂದು 11.30ರಿಂದ ರೈತ ಪ್ರತಿನಿಧಿಗಳು, ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆಗೆ ಇಲ್ಲಿಯವರೆಗೆ ಮಾತನಾಡಿ, ಚರ್ಚಿಸಿದ್ದೇನೆ ಎಂದರು.
ರೈತರ ಸಮಸ್ಯೆ ಕಬ್ಬು ಬೆಳೆಗಾರರು ಪ್ರಸ್ತಾಪಿಸಿದ್ದಾರೆ. ಸಕ್ಕರೆ ಕಾರ್ಖಾನೆ ಮಾಲೀಕರು ಅವರ ಸಮಸ್ಯೆ ತಿಳಿಸಿದ್ದಾರೆ. ಇಬ್ಬರ ವಿಚಾರಗಳನ್ನು ಚರ್ಚಿಸಿ ಅಂತಿಮವಾಗಿ ಪ್ರತಿ ಟನ್ ಕಬ್ಬಿಗೆ ರೂ.3,300 ನೀಡಲು ನಿಗದಿ ಪಡಿಸಲು ನಿರ್ಧರಿಸಲಾಗಿದೆ ಎಂದರು.








