ಬೆಂಗಳೂರು : ಇಂದು ಬೆಂಗಳೂರಲ್ಲಿ ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಆ ಬಳಿಕ ಪ್ರಧಾನಿ ಮೋದಿ, ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಒಟ್ಟಾಗಿಯೇ ಮೆಟ್ರೋದಲ್ಲಿ ಪ್ರಯಾಣಿಸಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಮಾಡಿದಂತ ಹಾಸ್ಯಕ್ಕೆ ಸಿಎಂ, ಡಿಕೆಶಿ ಬಿದ್ದು ಬಿದ್ದು ನಕ್ಕರು.
ಹೌದು ಮಹಿಳೆಯರಿಗೆ ನೀಡಿದ ಉಚಿತ ಪ್ರಯಾಣವನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿ ಸಿಡಿಸಿದ ಹಾಸ್ಯ ಚಟಾಕಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಕ್ಕಿದ್ದಾರೆ.ಪ್ರಧಾನಿ ಮೋದಿ ಅವರು ಅಲ್ಲಿದ್ದ ಮಹಿಳೆಯರಿಗೆ ನೀವು ಮೆಟ್ರೋದಲ್ಲಿ ಹೋಗಲು ಇಷ್ಟ ಪಡುತ್ತಿರೋ? ಬಸ್ಸಿನಲ್ಲಿ ಹೋಗಲು ಇಷ್ಟ ಪಡುತ್ತೀರೋ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಮಹಿಳೆಯರು ನಾವು ಮೆಟ್ರೋದಲ್ಲಿ ಹೋಗಲು ಇಷ್ಟ ಪಡುತ್ತೇವೆ. ಮೆಟ್ರೋ ಪ್ರಯಾಣ ಉತ್ತಮ ಎಂದು ಉತ್ತರಿಸಿದ್ದಾರೆ.
ಈ ವಿಚಾರವನ್ನು ಮೋದಿ ಸಿಎಂ, ಡಿಸಿಎಂ ಕಡೆ ತಿರುಗಿ, ನೋಡಿ ಸಿದ್ದರಾಮಯ್ಯನವರೇ ನೀವು ಮಹಿಳೆಯರಿಗೆ ಫ್ರೀ ಬಸ್ ಮಾಡಿದ್ರೂ ಅವ್ರು ಬಸ್ ಇಷ್ಟ ಪಡುತ್ತಿಲ್ಲ. ಮೆಟ್ರೋ ಇಷ್ಟ ಅಂತೆ ಎಂದು ಹೇಳಿದರು.ಪ್ರಧಾನಿ ಮೋದಿ ಅವರ ಸಂದರ್ಭೋಚಿತ ಹಾಸ್ಯ ಚಟಾಕಿಗೆ ಅಲ್ಲಿದ್ದ ಎಲ್ಲರೂ ನಕ್ಕಿದ್ದಾರೆ. ಫ್ರೀ ಬಸ್ ಉಲ್ಲೇಖಿಸಿ ಮೆಟ್ರೋದಲ್ಲಿ ಮೋದಿಯವರಿಂದ ಸಿಎಂ ಡಿಸಿಎಂಗೆ ಹಾಸ್ಯದ ಮೂಲಕ ಟಾಂಗ್ ನೀಡಿದ್ದಾರೆ.