ಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಇದೀಗ ವಿದೇಶದಲ್ಲಿ ತಲೆಮರಿಸಿಕೊಂಡಿದ್ದಾರೆ. ಇದಕ್ಕೆ ಸಿಎಂ ಸಿದ್ದರಾಮಯ್ಯನವರು ನಿನ್ನೆ ಪ್ರಜ್ವಲ್ ರೇವಣ್ಣ ಅವರ ಜೊತೆ ಅಶೋಕ್ ಮಾತನಾಡಿರಬಹುದು ಎಂದು ಹೇಳಿಕೆ ನೀಡಿದರು ಇವರ ಹೇಳಿಕೆಗೆ ಆರ್ ಅಶೋಕ್ ವಿದೇಶಕ್ಕೆ ಪ್ರಜ್ವಲ್ಲರನ್ನು ಓಡಿ ಹೋಗಲು ಬಿಟ್ಟಿದೆ ಸಿಎಂ ಸಿದ್ದರಾಮಯ್ಯ ಎಂದು ಆರೋಪಿಸಿದರು.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಮತದಾನ ಮಾಡಿ ಬಂದಾಗ ಬಂಧಿಸದೆ ಕತ್ತೆ ಕಾಯುತ್ತಿದ್ದರಾ? ಡೋರ್ ಕ್ಲೋಸ್ ಸಭೆ ಮಾಡಿ ನಿಯೋಜಿತ ಪ್ಲಾನ್ ಮಾಡಿದ್ರು ಪ್ರಜ್ವಲ್ ಹಿಡಿಯದಿದ್ದರೆ ಮೋದಿ ದೋಷಣೆ ಮಾಡಬಹುದದು ಎಂಬ ಪ್ಲಾನ್ ಮಾಡಲಾಗಿತ್ತು. ಅದರಂತೆ ಸರ್ಕಾರ ಪ್ರಜ್ವಲ್ ರೇವಣ್ಣರನ್ನು ವಿದೇಶಕ್ಕೆ ಕಳುಹಿಸಿದೆ ಎಂದು ಆರೋಪಿಸಿದರು.
ವಿದೇಶಕ್ಕೆ ಹೋಗುವ ಮುನ್ನ ನನ್ನ ಜೊತೆ ಮಾತನಾಡಿದರೆ ತನಿಖೆ ಮಾಡಲಿ. ನನ್ನ ಫೋನ್ ಹಾಗೂ ಸಿದ್ದರಾಮಯ್ಯ ಫೋನ್ ಕೂಡ ತನಿಖೆ ಮಾಡಲಿ. ಆಗ ಯಾರು ಯಾರ ಜೊತೆ ಮಾತನಾಡಿದರು ಎಂದು ಗೊತ್ತಾಗುತ್ತದೆ. ನಾವು ಅದಕ್ಕಾಗಿಯೇ ಪ್ರಕರಣವನ್ನು CBI ಗೆ ಕೊಡಿ ಅಂತ ಹೇಳುತ್ತಿದ್ದೇವೆ ಎಂದು ಬೆಂಗಳೂರಿನಲ್ಲಿ ವಿರೋಧ ಪಕ್ಷದ ನಾಯಕ ಆರಶೋಕ್ ಹೇಳಿಕೆ ನೀಡಿದರು.