ಬೆಂಗಳೂರು: ವಾರ್ತಾ ಇಲಾಖೆಯಲ್ಲಿ ಸಮಗ್ರ ಬದಲಾವಣೆ ತರುವ ಸಂಬಂಧ ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್.ಶ್ರೀನಿವಾಸಮೂರ್ತಿ ನೇತೃತ್ವದ ಸಮಿತಿ ಸಲ್ಲಿಸಿದ ವರದಿ ಜಾರಿ ಮಾಡುವಂತೆ ಆಗ್ರಹಿಸಿ, ರಾಜ್ಯ ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷ, ವಿಧಾನ ಪರಿಷತ್ ಶಾಸಕರಾದ ದಿನೇಶ ಗೂಳಿಗೌಡ ಅವರು ಮಾಡಿದ ಮನವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದಿಸಿದ್ದಾರೆ. ತಕ್ಷಣ ಚರ್ಚಿಸುವಂತೆ ವಾರ್ತಾ ಇಲಾಖೆ ಆಯುಕ್ತರಿಗೆ ಸಿಎಂ ನಿರ್ದೇಶನ ನೀಡಿದ್ದಾರೆ.
ಮನವಿಯಲ್ಲಿ ಏನಿದೆ..?
1978ರಲ್ಲಿ ವಾರ್ತಾ ಇಲಾಖೆ ಅಳವಡಿಸಿಕೊಂಡಿದ್ದ ಅವೈಜ್ಞಾನಿಕ ವೃಂದ ಮತ್ತು ನೇಮಕಾತಿ ನಿಯಮದ ಪರಿಣಾಮವಾಗಿ ವಾರ್ತಾ ಇಲಾಖೆ . ಇದನ್ನು ಸರಿಪಡಿಸುವ ಕೆಲಸ ಮಾಡಿಲ್ಲ ಅನುಗುಣವಾಗಿ ಹೊಸ ವೃಂದ ಮತ್ತು ನೇಮಕಾತಿ ನಿಯಮ ಅಳವಡಿಸಿಕೊಳ್ಳುವ ಬದಲು ಹಳೆ ಪದ್ದತಿ ಇದೆ . ಈಗಾಗಲೇ 15-20 ವರ್ಷದಿಂದ ಬಡ್ತಿ ಇಲ್ಲದೆ ಸರ್ಕಾರದ ಕೆಲಸವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗುವುದಿಲ್ಲ.
ಆದ್ದರಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಹೊಸದಾಗಿ ಅಳವಡಿಸಿಕೊಳ್ಳಲು ಉದ್ದೇಶಿಸಿರುವ ವೃಂದ ಮತ್ತು ನೇಮಕಾತಿ ನಿಯಮದ ಕರಡು ಪ್ರಸ್ತಾವನೆಯನ್ನು ಎಲ್ಲ ನೌಕರರಿಗೆ ಅಧಿಕೃತವಾಗಿ ನೀಡಿ, ತಕರಾರು, ಸಲಹೆ, ಸೂಚನೆಗಳನ್ನು ಲಿಖಿತವಾಗಿ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ವೈಜ್ಞಾನಿಕ ನೇಮಕಾತಿ ನಿಯಮ ರೂಪಿಸಿ
ಎಲ್ಲ ವೃಂದದ ನೌಕರರಿಗೆ ಸೇವಾ ಅವಧಿಯಲ್ಲಿ ಕನಿಷ್ಠ 3 ಬಡ್ತಿಗಳಾದರೂ ಸಿಗುವಂತೆ ವೈಜ್ಞಾನಿಕವಾಗಿ ಹಾಗೂ ತರ್ಕಬದ್ಧವಾಗಿ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು ತಯಾರಿಸಲು ಸಂಬಂಧಪಟ್ಟವರಿಗೆ ಸೂಚಿಸಬೇಕು. ಹಳೆಯ ವೃಂದ ಮತ್ತು ನೇಮಕಾತಿ ನಿಯಮದಿಂದ ತೊಂದರೆಗೊಳಗಾದ ನೌಕರರು ಹೊಸ ವೃಂದ ಮತ್ತು ನೇಮಕಾತಿ ನಿಯಮಗಳ ಅಳವಡಿಕೆಯ ನಂತರವೂ ಮತ್ತೆ ಸರಿಯಾದ ಬಡ್ತಿ ಇಲ್ಲದೆ ಅನ್ಯಾಯಕ್ಕೆ ಒಳಗಾಗದಂತೆ ಎಚ್ಚರವಹಿಸಲು ಸಂಬಂಧಪಟ್ಟವರಿಗೆ ಸೂಚಿಸಬೇಕು ಎಂದು ದಿನೇಶ ಗೂಳಿಗೌಡ ಮನವಿ ಮಾಡಿದ್ದರು.
8 ವರ್ಷವಾದರೂ ಜಾರಿಯಾಗದ ವರದಿ
ಹಿಂದೆ ನಮ್ಮದೇ ಸರ್ಕಾರ ಈ ಸಂಬಂಧ ಅಧ್ಯಯನಕ್ಕೆ ನಿವೃತ್ತ ಐ.ಎ.ಎಸ್. ಅಧಿಕಾರಿಯಾದ ಶ್ರೀ ಎಂ. ಆರ್. ಶ್ರೀನಿವಾಸಮೂರ್ತಿ ನೇತೃತ್ವದ ಸಮಿತಿಯನ್ನು ನೇಮಕ ಮಾಡಿತ್ತು. ಸಮಿತಿಯು ವಿವಿಧ ರಾಜ್ಯಗಳಿಗೆ ಹೋಗಿ ಭೇಟಿ ಕೊಟ್ಟು, ಅಲ್ಲಿನ ವ್ಯವಸ್ಥೆಯನ್ನು ಅಧ್ಯಯನ ಮಾಡಿದೆ. ವಿವಿಧ ಕ್ಷೇತ್ರಗಳ ಗಣ್ಯರನ್ನು ಮಾತನಾಡಿಸಿ ಸಮಗ್ರ ವರದಿ ನೀಡಿದೆ.
ಆದರೆ, ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿ 08 ವರ್ಷ ಕಳೆದರೂ ವರದಿಯು ಅನುಷ್ಠಾನಗೊಂಡಿಲ್ಲ. ಹಳೇ ಪದ್ಧತಿಯನ್ನೇ ಮುಂದುವರಿಸಿಕೊಂಡು ಬಂದಿವೆ.
ಇಲಾಖೆಯಲ್ಲಿ ಹಲವಾರು ಅಧಿಕಾರಿಗಳು ಮತ್ತು ಸಿಬ್ಬಂದಿ 15-20 ವರ್ಷಗಳು ಬಡ್ತಿ ಇಲ್ಲದೆ, ಒಂದೇ ವೃಂದ(ಕೇಡರ್)ದಲ್ಲಿ ಸೇವೆ ಸಲ್ಲಿಸುತ್ತಿದ್ದು, ಇದರಿಂದಾಗಿ ನೌಕರರಲ್ಲಿ, ನಿರುತ್ಸಾಹ ಉಂಟಾಗಿದೆ.
ಸರ್ಕಾರದ ಪ್ರಚಾರದ ಕೆಲಸಗಳು ಸಮರ್ಪಕವಾಗಿ ಇನ್ನಷ್ಟು ವೇಗವಾಗಿ ಆಗಬೇಕು ಅನ್ನುವುದು ಜನಪ್ರತಿನಿಧಿಗಳ, ಮಾಧ್ಯಮ ಪ್ರತಿನಿಧಿಗಳ ಅಭಿಲಾಷ ಹೊಂದಿದ್ದಾರೆ
ಇಲಾಖೆಯಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿಯನ್ನು ಮಾಡಲಾಗುತ್ತಿದ್ದು, ಕೆಲವೇ ಕೆಲವರಿಗೆ ಅನುಗುಣವಾಗಿ ಕರಡು ತಯಾರಿಸಿಕೊಳ್ಳಲಾಗಿದೆ ಎಂಬುದು ತಿಳಿದುಬಂದಿದೆ. ಮನಸೋ ಇಚ್ಛೆ ಸಂಬಂಧವೇ ಇಲ್ಲದ ಒಂದು ವೃಂದದಿಂದ ಮತ್ತೊಂದು ವೃಂದಕ್ಕೆ ಬಡ್ತಿ ನೀಡಲು ಪ್ರಸ್ತಾಪಿಸಲಾಗಿದೆ.
ಹೊಸ ತಿದ್ದುಪಡಿ
ಉದಾಹರಣೆಗೆ ಸಹಾಯಕ ನಿರ್ದೇಶಕ, ಹಿರಿಯ ಸಹಾಯಕ ನಿರ್ದೇಶಕ, ಉಪ ನಿರ್ದೇಶಕ, ಜಂಟಿ ನಿರ್ದೇಶಕ ಹುದ್ದೆಗಳು ವಾರ್ತಾ ವಿಷಯಗಳ ಹಿನ್ನೆಲೆ ಇರುವ ಹುದ್ದೆಗಳಾಗಿವೆ. ಪತ್ರಿಕೋದ್ಯಮ ಶಿಕ್ಷಣ ಹಾಗೂ ಪತ್ರಕರ್ತರಾಗಿ ಸುದ್ದಿ ಮಾಧ್ಯಮದಲ್ಲಿ 2-3 ವರ್ಷ ಕೆಲಸ ಮಾಡಿದ ಅನುಭವ ಹೊಂದಿದವರು ಸಹಾಯಕ ನಿರ್ದೇಶಕರಾಗಿ, ಹಿರಿಯ ಸಹಾಯಕ ನಿರ್ದೇಶಕರಾಗಿ ನಂತರ ಉಪ ನಿರ್ದೇಶಕ ಹುದ್ದೆಗೆ ಬಡ್ತಿ ಹೊಂದಬೇಕಾಗುತ್ತಿದೆ. ಆದರೆ, ಪತ್ರಿಕೋದ್ಯಮದ ಅನುಭವ ಹಾಗೂ ಪ್ರಚಾರ ಕೆಲಸವನ್ನು ಎಂದೂ ನಿರ್ವಹಿಸ ಆಡಳಿತಾಧಿಕಾರಿ ಹುದ್ದೆಯಿಂದ ಉಪ ನಿರ್ದೇಶಕ ಹುದ್ದೆಗೆ ಬಡ್ತಿ ನೀಡುವ ಅವೈಜ್ಞಾನಿಕ ಪ್ರಸ್ತಾವನೆಯನ್ನು ಹೊಸ ತಿದ್ದುಪಡಿಯಲ್ಲಿ ಅಳವಡಿಸಲಾಗುತ್ತಿದೆ. ಇದರಿಂದ ಇಲಾಖೆ ಕಾರ್ಯಸ್ವರೂಪದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ, ಹಿರಿಯ ಸಹಾಯಕ ನಿರ್ದೇಶಕ ಹಾಗೂ ಉಪ ನಿರ್ದೇಶಕ ಹುದ್ದೆಗಳು ಪತ್ರಿಕೋದ್ಯಮ ವಿಷಯದ ತಾಂತ್ರಿಕ ಹುದ್ದೆಗಳಾಗಿರುತ್ತವೆ. ಆದರೆ, ಲಿಪಿಕ ವರ್ಗದಲ್ಲಿ 3-4 ಬಡ್ತಿ ಪಡೆದುಕೊಂಡಿರುವ ಹಾಗೂ ಪತ್ರಿಕೋದ್ಯಮದ ಅನುಭವ ಇಲ್ಲದ ಆಡಳಿತಾಧಿಕಾರಿಯಾದವರನ್ನು ತಾಂತ್ರಿಕ ಹುದ್ದೆಯಾದ ಉಪ ನಿರ್ದೇಶಕ ಹುದ್ದೆಗೆ ಬಡ್ತಿ ಮೂಲಕ ನೇಮಕ ಮಾಡುವ ಅವೈಜ್ಞಾನಿಕ ಕ್ರಮವನ್ನು ಹೊಸ ವೃಂದ ಮತ್ತು ನೇಮಕಾತಿ ನಿಯಮದಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ/ಎಂದು ದಿನೇಶ ಗೂಳಿಗೌಡ ತಮ್ಮ ಮನವಿಯಲ್ಲಿ ವಿವರಿಸಿದ್ದಾರೆ.
ಈ ಬಾರಿ ಗಿಲ್ಲಿ ನಟ ಗೆಲ್ಲೋದು ಫಿಕ್ಸ್: ಬಿಗ್ ಬಾಸ್ 11 ವಿನ್ನರ್ ಹನುಮಂತು ಭವಿಷ್ಯ
ಮ್ಯಾಟ್ರಿಮೋನಿಯಲ್ಲಿ ವಿವಾಹಕ್ಕಾಗಿ ಹುಡುಗರನ್ನು ಹುಡುಕೋ ಹುಡುಗಿಯರೇ ಈ ಸುದ್ದಿ ಓದಿ.!








