ಹೈದರಾಬಾದ್: ಇಂದು ಹೈದರಾಬಾದ್ನಲ್ಲಿ ತೆಲಂಗಾಣ ಸಿಎಂ ಮತ್ತು ಟಿಆರ್ಎಸ್ ಅಧ್ಯಕ್ಷ ಕೆ ಚಂದ್ರಶೇಖರ್ ರಾವ್ ಹಾಗೂ ಕರ್ನಾಟಕದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಭೇಟಿಯಾಗಲಿದ್ದು, ಮಹತ್ವದ ಸಭೆ ನಡೆಸಲಿದ್ದಾರೆ. ರಾಜಕೀಯ ವಲಯದಲ್ಲಿ ಈ ಇಬ್ಬರು ನಾಯಕರ ಭೇಟಿಯನ್ನು ರಾಜಕೀಯದ ಮಹತ್ವದ ಬೆಳವಣಿಗೆ ಎಂದು ಬಣ್ಣಿಸಲಾಗಿದೆ.
ಹೈದರಾಬಾದ್ನಲ್ಲಿರುವ ಸಿಎಂ ಕೆಸಿಆರ್ ಅವರ ಅಧಿಕೃತ ನಿವಾಸದಲ್ಲಿ ಇಂದು ಮಧ್ಯಾಹ್ನ 1 ರಿಂದ 3 ಗಂಟೆವರೆಗೂ ಉಭಯ ನಾಯಕರ ಭೇಟಿ ನಡೆಯಲಿದೆ. ಇದೇ ವೇಳೆ ಈ ಇಬ್ಬರು ನಾಯಕರೂ ಭೋಜನವನ್ನು ಸ್ವೀಕರಿಸುವರು.
ನಿನ್ನೆ ರಾತ್ರಿಯೇ ಕುಮಾರಸ್ವಾಮಿ ಅವರು ಹೈದ್ರಾಬಾದ್ ತಲುಪಿದ್ದಾರೆ. ಸಭೆಯಲ್ಲಿ ಇಬ್ಬರೂ ನಾಯಕರು ಕರ್ನಾಟಕ, ತೆಲಂಗಾಣ ರಾಜಕೀಯ ಹಾಗೂ ಅದರಲ್ಲೂ ರಾಷ್ಟ್ರಮಟ್ಟದ ರಾಜಕಾರಣದ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಪಕ್ಷದ ಮೂಲಗಳ ಪ್ರಕಾರ, ಕೆಸಿಆರ್ ಈಗಾಗಲೇ ರಾಷ್ಟ್ರೀಯ ಪಕ್ಷದ ಹೆಸರು, ಧ್ವಜ ಮತ್ತು ಕಾರ್ಯಸೂಚಿಯನ್ನು ಅಂತಿಮಗೊಳಿಸಿದ್ದಾರೆ ಎಂದು ಹೇಳಲಾಗಿದೆ. ಇದೇ ವೇಳೆ ಪಕ್ಷ ಆರಂಭಕ್ಕೆ ಸಮಾನ ಮನಸ್ಕ ಪಕ್ಷಗಳು, ಪ್ರಮುಖ ನಾಯಕರು ಹಾಗೂ ಮುಖ್ಯಮಂತ್ರಿಗಳನ್ನು ಆಹ್ವಾನಿಸುವ ಕುರಿತು ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.
ಕೆಸಿಆರ್ ಇತ್ತೀಚೆಗಷ್ಟೇ ಆಗಸ್ಟ್ 31 ರಂದು ಬಿಹಾರ ಸಿಎಂ ನಿತೀಶ್ ಕುಮಾರ್ ಅವರನ್ನು ಪಾಟ್ನಾದಲ್ಲಿ ಭೇಟಿ ಮಾಡಿದ್ದರು. ಕುಮಾರಸ್ವಾಮಿ ಅವರು ಸೆಪ್ಟೆಂಬರ್ 5 ರಂದು ನವದೆಹಲಿಯಲ್ಲಿ ಬಿಹಾರ ಸಿಎಂ ಅವರನ್ನು ಭೇಟಿ ಮಾಡಿದ್ದರು.
ರಾವ್ ಅವರು ಶರದ್ ಪವಾರ್, ಉದ್ಧವ್ ಠಾಕ್ರೆ ಮತ್ತು ಹೇಮಂತ್ ಸೊರೆನ್ ಸೇರಿದಂತೆ ಹಲವಾರು ಬಿಜೆಪಿಯೇತರ, ಕಾಂಗ್ರೆಸ್ಸೇತರ ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡಿದ್ದಾರೆ ಮತ್ತು ಬಿಜೆಪಿಯ ಆಪಾದಿತ ಜನವಿರೋಧಿ ನೀತಿಗಳ ಬಗ್ಗೆ ಚರ್ಚಿಸಿದ್ದಾರೆ.
ಹೀಗೂ ಇರ್ತಾರೆ ‘ಪೊಲೀಸ್’: ‘ದುಬಾರಿ ಮೊಬೈಲ್’ ಕಳೆದುಕೊಂಡ ಕೆಲವೇ ಗಂಟೆಗಳಲ್ಲಿ ಪತ್ತೆ ಹಚ್ಚಿ ವಾಪಾಸ್.!