ಬೆಳಗಾವಿ : ಬೆಳಗಾವಿಯಿಂದ ಬೆಂಗಳೂರಿಗೆ ಜೊತೆಯಾಗಿಯೇ ಆಗಮಿಸಿದ್ದಂತ ಕೆ.ಎಸ್ ಈಶ್ವರಪ್ಪ ಹಾಗೂ ರಮೇಶ್ ಜಾರಕಿಹೊಳಿ ಇದೀಗ ಸಿಎಂ ಬೊಮ್ಮಾಯಿ ಭೇಟಿಯಾಗಿದ್ದಾರೆ.
ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ ಗೆಸ್ಟ್ ಹೌಸ್ ನಲ್ಲಿ ಸಿಎಂ ಬೊಮ್ಮಾಯಿ ಜೊತೆ ಇಬ್ಬರು ನಾಯಕರು ಚರ್ಚೆ ನಡೆಸಿದ್ದಾರೆ.
ಸಭೆ ಬಳಿಕ ಮಾತನಾಡಿದ ಈಶ್ವರಪ್ಪ ಶೀಘ್ರವೇ ದೆಹಲಿಗೆ ಹೋಗಿ ಬಂದು ಸಂಪುಟ ವಿಸ್ತರಿಸುವುದಾಗಿ ಸಿಎಂ ಹೇಳಿದ್ದಾರೆ ಎಂದು ಈಶ್ವರಪ್ಪ ಹೇಳಿದ್ದಾರೆ.
ಸಂಪುಟ ವಿಸ್ತರಣೆ ಮಾಡದೇ, ಕ್ಲೀನ್ ಚಿಟ್ ಸಿಕ್ಕರೂ ಸಚಿವ ಸ್ಥಾನ ನೀಡದೇ ಇರುವ ಕಾರಣ, ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಹಾಗೂ ರಮೇಶ್ ಜಾರಕಿಹೊಳಿ ಸಿಡಿದೆದ್ದಿದ್ದರು. ನೇರವಾಗಿ ತೋರಿಸಿಕೊಳ್ಳದೇ ಇದ್ದರೂ, ಬೆಳಗಾವಿ ಸದನಕ್ಕೆ ಹಾಜರಾಗುವುದರಿಂದ ದೂರವೇ ಉಳಿದು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದರು. ಇಂತಹ ಶಾಸಕರರು ಇದೀಗ ಬೆಂಗಳೂರಿನಿಂದ ಬೆಳಗಾವಿಗೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿಗೆ ತೆರಳಿದ್ದಾರೆ.