ಹಾವೇರಿ : ಕರ್ನಾಟಕ ಕಾಂಗ್ರೆಸ್ ಪಕ್ಷದ ಎಟಿಎಂ ಆಗಿದೆ ಎಂದು ಮೋದಿ ಹೇಳಿಕೆ ನೀಡಿದ ವಿಚಾರವಾಗಿ, 2 ಸಾವಿರ ಕೋಟಿ ಕೊಟ್ಟು ಬಿಎಸ್ ಯಡಿಯೂರಪ್ಪ ಬಸವರಾಜ್ ಬೊಮ್ಮಾಯಿ ಸಿಎಂ ಆಗಿದ್ದಾರೆಂದು ಯತ್ನಾಳ್ ಹೇಳುತ್ತಾರೆ. ವಿಜಯೇಂದ್ರ ಕೂಡ ದುಡ್ಡು ಕೊಟ್ಟು ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದಾರೆ ಇಂಥವರಿಗೆ ವೋಟ್ ಹಾಕಬೇಕ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ ಮಾತನಾಡಿದ ಅವರು, ಕೋವಿಡ್ ವೇಳೆ ಪ್ರತಿ ಪಿಪಿಇ ಕಿಟಿಗೆ 2,147 ನೀಡಿ ಖರೀದಿ ಮಾಡಿದ್ದಾರೆ. ಯಡಿಯೂರಪ್ಪ ಶ್ರೀರಾಮಲು ಸೇರಿ ಮೂರು ಲಕ್ಷ ಪಿಪಿಇ ಕಿಟ್ ಖರೀದಿ ಮಾಡಿದ್ದಾರೆ. ಮೋದಿ ಚೀನಾದಿಂದ ಯಾವುದೇ ವಸ್ತು ಖರೀದಿಸಿಲ್ಲವೆಂದು ಹೇಳುತ್ತಾರೆ. ಬಿಪಿ ಇಕಿಟ್ ಖರೀದಿ ಹೆಸರಿನಲ್ಲಿ 2,000 ಕೋಟಿ ಲೂಟಿ ಮಾಡಿದ್ದಾರೆ. ಕೊರೋನಾ ವೇಳೆ ಆಕ್ಸಿಜನ್ ಪೂರೈಸದೆ 50,000 ಜನ ಮೃತಪಟ್ಟಿದ್ದಾರೆ. ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ 36 ಜನ ಸತ್ತು ಹೋಗಿದ್ದಾರೆ.
ಆದರೆ ಸುಧಾಕರ್ ಇಬ್ಬರು ಅಥವಾ ಮೂವರು ಸತ್ತಿರಬಹುದು ಅಂತ ಹೇಳಿದ್ದರು. ಇಂಥವರು ಬೇಕಾ ಮತ್ತೆ ಬಿಜೆಪಿಯವರು ಅಧಿಕಾರಕ್ಕೆ ಬರಬೇಕಾ? ಗುತ್ತಿಗೆದಾರರಿಂದ 40 ಪರ್ಸೆಂಟ್ ಕಮಿಷನ್ ಪಡಿತಿದ್ದಾರೆ ಎಂದು ಕೆಂಪಣ್ಣ ಹೇಳಿದ್ದರು ನಾಗಮೋಹನ್ ದಾಸ್ ವರದಿ ಬರಲಿ ಕ್ರಿಮಿನಲ್ ಕೇಸ್ ಹಾಕಿಸುತ್ತೇವೆ ಬೊಮ್ಮಯಿ ಇರಲಿ ಮತ್ಯಾರೆ ಇರಲಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುತ್ತೇವೆ ಎಂದು ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.