ಮುಂಬೈ: ಸೋಮವಾರ ರಾತ್ರಿ ಕಾರೊಂದು ಬೆಂಕಿಗಾಹುತಿಯಾಗಿದ್ದು, ಅದೇ ದಾರಿಯಲ್ಲಿ ಸಂಚರಿಸುತ್ತಿದ್ದ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ(Eknath Shinde) ಅವರು ಸಹಾಯಕ್ಕೆ ಧಾವಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಮುಂಬೈಯ ವೆಸ್ಟರ್ನ್ ಎಕ್ಸ್ಪ್ರೆಸ್ ಹೆದ್ದಾರಿ ಬಳಿ ಕಾರೊಂದು ಬೆಂಕಿ ತಗುಲಿ ಹೊತ್ತಿ ಉರಿದಿತ್ತು. ಆ ಸಮಯದಲ್ಲಿ ಅದೇ ದಾರಿಯಲ್ಲಿ ಸಂಚರಿಸುತ್ತಿದ್ದ ಶಿಂಧೆ ತಮ್ಮ ಬೆಂಗಾವಲು ವಾಹನವನ್ನು ನಿಲ್ಲಿಸಿ, ಅವರ ಸಹಾಯಕ್ಕಾಗಿ ಧಾವಿಸಿದ್ದಾರೆ.
ಶಿಂಧೆ ಬೆಂಕಿಗಾಹುತಿಯಾದ ವಾಹನದ ಮಾಲೀಕರನ್ನು ಭೇಟಿಯಾಗಿ, ಅವರಿಗೆ ಅಗತ್ಯವಿರುವ ಎಲ್ಲಾ ಸಹಾಯವನ್ನು ಅಧಿಕಾರಿಗಳು ಒದಗಿಸುತ್ತಾರೆ ಎಂದು ಭರವಸೆ ನೀಡಿದ್ದಾರೆ.
ಇದರ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಶಿಂಧೆ ಸಂತ್ರಸ್ತರೊಂದಿಗೆ ಮಾತನಾಡುವುದು ಕಂಡುಬಂದಿದೆ. ಅವರ ಹಿಂದುಗಡೆ ಕಾರೊಂದು ಬೆಂಕಿಯಲ್ಲಿ ಉರಿಯುತ್ತಿರುವುದನ್ನು ಕಾಣಬಹುದು