ಬೆಂಗಳೂರು : ವಾಲ್ಮೀಕಿ ನಿಗಮ ಹಾಗೂ ಮೈಸೂರು ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಇದನ್ನ ಮುಚ್ಚಿಹಾಕಲು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ರಾಜಕೀಯ ನಾಟಕ ಆಡುತ್ತಿದ್ದಾರೆ ಎಂದು ಪರಿಷತ್ ಸದಸ್ಯ ಸಿ.ಟಿ.ರವಿ ಆರೋಪಿಸಿದರು.
ಮೈಸೂರಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಮೂಗಿನ ಅಡಿಯಲ್ಲಿ ಇವೆಲ್ಲ ಹಗರಣ ನಡೆದಿವೆ. ಆದರೆ ಈಗ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಮುಚ್ಚಿಹಾಕಲು ನಾಟಕವಡುತ್ತಿದ್ದಾರೆ ಎಂದು ಆರೋಪಿಸಿದರು.
ಸಿಎಂ ಮೂಗಿನಡಿ ಸಾವಿರಾರು ಕೋಟಿ ಬೆಲೆ ಬಾಳುವ ಮುಡಾ ಆಸ್ತಿ ಕಳ್ಳರ ಪಾಲಾಗಿದೆ. 69ನೇ ಇಸವಿಯಲ್ಲಿ ಭೂಮಿ ಕಳೆದುಕೊಂಡವರು ಇವತ್ತಿಗೆ ಜ್ಞಾನೋದಯವಾಗಿ ಅರ್ಜಿ ಕೊಟ್ಟಿದ್ದಾರಂತೆ. ಮುಡಾದವರು ಲಕ್ಷ ಲಕ್ಷ ಅಡಿಯನ್ನ ಬಿಟ್ಟು ಕೊಟ್ಟಿದ್ದಾರೆ. ಮುಡಾ ಲೂಟಿಯನ್ನ ನೋಡಿದರೆ ಚಾಲ್ಸ್ ಶೋಬರಾಜ್ ನನ್ನದು ಏನು ಹಗರಣ ಇಲ್ಲ ಅಂದುಕೊಳ್ಳುತ್ತಾರೆ ಎಂದರು.