ಚಿಕ್ಕಬಳ್ಳಾಪುರ : ಸಿಎಂ ಬಸವರಾಜ ಬೊಮ್ಮಾಯಿ ಪ್ರಧಾನಿ ಮೋದಿ ಬಳಿ ನಾಯಿಮರಿಯಂತೆ ಇರ್ತಾರೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಸುಧಾಕರ್ ಟಾಂಗ್ ಕೊಟ್ಟಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್, ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವನಾಯಕ, ಹಾಲಿ ಸ್ಥಾನಮಾನದಲ್ಲಿರುವವರು, ಪ್ರಧಾನಿ ಮೋದಿ ಬಳಿ ವಿನಯದಿಂದ ಸಿಎಂ ಬೊಮ್ಮಾಯಿ ಇರ್ತಾರೆ, ಆದರೆ ರಾಹುಲ್ ಗಾಂಧಿಗೆ ಯಾವ ಸ್ಥಾನಮಾನ, ನಾಯಕತ್ವ ಇಲ್ಲ, ರಾಹುಲ್ ಗಾಂಧಿ ಬಂದರೆ ಸಿದ್ದರಾಮಯ್ಯ ಓಡೋಡಿ ಹೋಗ್ತಾರೆ, ನಿಮಗೆ ಸ್ವಾಭಿಮಾನ ಇಲ್ಲಾ? ಎಂದು ಪ್ರಶ್ನಿಸಿದ್ದಾರೆ.
ಸಿಎಂ ಆಗಿದ್ದವರು ಸಣ್ಣತನದ ಹೇಳಿಕೆ ನೀಡಬಾರದು. ಸಿದ್ದರಾಮಯ್ಯ ನಡವಳಿಕೆ ನಮ್ಮಂಥವರಿಗೆ ಮಾರ್ಗದರ್ಶಿ, ಅದನ್ನು ಬಿಟ್ಟು ಸಣ್ಣತನದ ಹೇಳಿಕೆ ನೀಡಬಾರದು. ಅಭಿವೃದ್ಧಿ ಬಗ್ಗೆ ಚರ್ಚಿಸಲು ಸಿಎಂ ಯಾಕೆ ನಾವೇ ಬರ್ತಿವಿ ಎಂದು ಹೇಳಿದ್ದಾರೆ.
Viral New : ದೆಹಲಿಯ ಆದರ್ಶ್ ನಗರದಲ್ಲಿ ಯುವತಿಗೆ ಪಾಗಲ್ ಪ್ರೇಮಿಯೇ ಚೂರಿ ಇರಿತ, ಭಯಾನಕ video | WATCH