ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿರುವಂತ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ( Farmer PM HD Devegowdha ) ಅವರನ್ನು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ( Chief Minister Basavaraj Bommai ) ನಿವಾಸಕ್ಕೆ ಭೇಟಿ ನೀಡಿ ವಿಚಾರಿಸಿದರು.
BREAKING NEWS : `PAYCM’ ಪೋಸ್ಟರ್ ಅಂಟಿಸಿದ ಕೇಸ್ : ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಅನಾರೋಗ್ಯಕ್ಕೆ ಒಳಗಾಗಿರುವಂತ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರ ನಿವಾಸಕ್ಕೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿದರು. ಕೆಲ ಕಾಲ ಹೆಚ್ ಡಿ ದೇವೇಗೌಡ ಅವರೊಂದಿಗೆ ಮಾತನಾಡಿದಂತ ಸಿಎಂ ಬೊಮ್ಮಾಯಿ, ದೇವೇಗೌಡರ ಆರೋಗ್ಯವನ್ನು ವಿಚಾರಿಸಿದರು.
ಲಂಚವಿಲ್ಲದೇ ಯಾವ ಕೆಲಸವೂ ನಡೆಯುವುದಿಲ್ಲ, ಬಿಜೆಪಿ ಸರ್ಕಾರ ಅಂದರೇನೇ ಲಂಚದ ಸರ್ಕಾರ – ಕಾಂಗ್ರೆಸ್
ಇಂದು ದೇವೇಗೌಡ ಅವರ ನಿವಾಸಕ್ಕೆ ಭೇಟಿ ನೀಡಿದಂತ ಸಿಎಂ ಬಸವರಾಜ ಬೊಮ್ಮಾಯಿ ಜೊತೆಗೆ ಸಚಿವ ಕೆ.ಗೋಪಾಲಯ್ಯ, ವಿ.ಸೋವಣ್ಣ, ವಿ. ಮುನಿರತ್ನ ಸೇರಿದಂತೆ ಅನೇಕರು ಇದ್ದರು.
BIG NEWS: ನಾಳೆ ಸದನದಲ್ಲೇ ದಾಖಲೆಸಹಿತ ಸಚಿವರೊಬ್ಬರ ಅಕ್ರಮ ಬಯಲು: ಸ್ಪೋಟಕ ಬಾಂಬ್ ಸಿಡಿಸಿದ HDK
ಅಂದಹಾಗೇ ಕೆಲ ದಿನಗಳ ಹಿಂದೆ 6 ವರ್ಷಗಳ ಬಳಿಕ ವಿಪಕ್ಷ ನಾಯಕ ಸಿದ್ಧರಾಮಯ್ಯ ( Siddaramaiah ), ದೇವೇಗೌಡರಿಗೆ ಅನಾರೋಗ್ಯದ ವಿಷಯ ತಿಳಿದು ಅವರ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಈ ಬಳಿಕ ಹಲವು ಗಣ್ಯರು ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದರು.