ಹುಬ್ಬಳ್ಳಿ : ಮಹದಾಯಿ ಯೋಜನೆ ನನೆಗುದಿಗೆ ಬಿದ್ದಿಲ್ಲ, ಪ್ರಗತಿಯಲ್ಲಿದೆ. ಈ ಸಂಬಂಧ ಅರಣ್ಯ ಇಲಾಖೆಗೆ ಅನುಮತಿ ಕೋರಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ಯೋಜನೆ ನನೆಗುದಿಗೆ ಬಿದ್ದಿಲ್ಲ, ಪ್ರಗತಿಯಲ್ಲಿದೆ. ಈ ಸಂಬಂಧ ಅರಣ್ಯ ಇಲಾಖೆಗೆ ಅನುಮತಿ ಕೋರಲಾಗಿದೆ ಇದು ಅಂತಿಮ ಘಟ್ಟದಲ್ಲಿದೆ. ಕೇಂದ್ರ ಜಲ ಆಯೋಗದಿಂದ ಫೈನಲ್ ಕ್ಲಿಯರೆನ್ಸ್ ಬರಬೇಕಿದೆ. ಈ ಎರಡೂ ಬಂದ ಕೂಡಲೇ ಯೋಜನೆ ಕಾಮಗಾರಿ ಆರಂಭವಾಗಲಿದೆ ಎಂದರು.
ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ಒಂದು ಘಟನೆ ಎಷ್ಟರ ಮಟ್ಟಿಗೆ ತೆಗೆದುಕೊಂಡು ಹೋಗಬೇಕು ಎಂಬುದು ಆಯಾ ರಾಜಕೀಯ ಪಕ್ಷಕ್ಕೆ ಬಿಟ್ಟಿದ್ದು ಎಂದರು.
ಕರ್ನಾಟಕದಲ್ಲಿ ಮೊದಲು ಶಾಂತಿ ಮುಖ್ಯ, ಸಾವರ್ಕರ್ ಬಗ್ಗೆ ಇಂದಿರಾ ಗಾಮಧಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟಿಪ್ಪು-ಸಾವರ್ಕರ್ ಪರ ವಿರೋಧ ವಿಚಾರಗಳಿವೆ. ಅಲ್ಲದೇ ವೈಚಾರಿಕ ಭಿನ್ನಾಭಿಪ್ರಾಯಗಳೂ ಇವೆ. ಅದನ್ನು ರಾಜಕರಣ ಮಾಡುವುದು ಆಯಾ ಪಕ್ಷಕ್ಕೆ ಬಿಟ್ಟದ್ದು ಎಂದು ಹೇಳಿದ್ದಾರೆ.
BREAKING NEWS: ಐಟಿ ಸಿಟಿ ಜನತೆಗೆ ಸರ್ಕಾರದಿಂದ ಬಿಗ್ ಶಾಕ್; ಇನ್ಮುಂದೆ ಬೇಕಾಬಿಟ್ಟಿ ಗಾಡಿ ಪಾರ್ಕ್ ಮಾಡುವಂತಿಲ್ಲ