ಬೆಂಗಳೂರು: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳಕ್ಕೆ ಬ್ರೇಕ್ ಹಾಕುವ ಸಂಬಂಧ ಹೊಸ ಮಸೂದೆಯನ್ನು ಸರ್ಕಾರ ಜಾರಿಗೆ ತರುತ್ತಿದೆ. ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತರುವಂತ ಮಸೂದೆಯನ್ನು ಸಿಎಂ ಸಿದ್ಧರಾಮಯ್ಯಗೆ ಸಮಿತಿ ಸಲ್ಲಿಸಿದೆ. ಈ ವರದಿಗೆ ಸಿಎಂ ಕೂಡ ಒಪ್ಪಿಗೆ ಸೂಚಿಸಿದ್ದಾರೆ. ಹಾಗಾದ್ರೇ ಸುಗ್ರೀವಾಜ್ಞೆಯ ಕರಡಿನಲ್ಲಿ ಏನಿದೆ ಅಂತ ಮುಂದೆ ಓದಿ.
ಮೈಕ್ರೋ ಫೈನಾನ್ಸ್ ಕಿರುಕುಳ ತಡೆಯ ಸಂಬಂಧ ಸುಗ್ರೀವಾಜ್ಞೆ ರಚನೆಗಾಗಿ ಅಧಿಕಾರಿಗಳ ವಿಶೇಷ ತಂಡವನ್ನು ರಾಜ್ಯ ಸರ್ಕಾರ ರಚಿಸಿತ್ತು. ಇದೀಗ ಅಧ್ಯಯನ ಮಾಡಿರುವಂತ ತಂಡವು ಸಿಎಂ ಸಿದ್ಧರಾಮಯ್ಯ ಅವರಿಗೆ 10 ಪುಟಗಳ ಕರಡನ್ನ ಸಲ್ಲಿಸಿದೆ.
ಅಧಿಕಾರಿಗಳ ವರದಿ ಪರಿಶೀಲಿಸಿದ ನಂತರ ರವಾನೆ ಮಾಡಲಾಗಿದೆ. ಆ ಬಳಿಕ ರಾಜ್ಯಪಾಲರಿಗೆ ಸುಗ್ರೀವಾಜ್ಞೆಯನ್ನು ಸಿಎಂ ಸಿದ್ಧರಾಮಯ್ಯ ರವಾನಿಸಲಿದ್ದಾರೆ.
ವರದಿಯಂತೆ ಕಿರುಕುಳ ಕೊಟ್ಟರೆ ಮೈಕ್ರೋ ಫೈನಾನ್ಸ್ ಪರವಾನಗಿ ರದ್ದತಿ. ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಸಾಲಗಾರರಿಗೆ ಕಿರುಕುಳ ನೀಡಿದರೆ ಗರಿಷ್ಠ 3 ವರ್ಷಗಳ ಜೈಲು ಶಿಕ್ಷೆ. 5 ಲಕ್ಷ ರೂ ವರೆಗೆ ದಂಡ. ಲೈಸೆನ್ಸ್ ರದ್ದುಗೊಳಿಸುವುದು. ಸಾಲ ನೀಡುವಾಗ ಅಡಮಾನ ಪಡೆಯಬಾರದು. ಕಿರುಕುಳ ನೀಡಿದರೆ ಜಾಮೀನುರಹಿತ ಪ್ರಕರಣ ಎಂದು ಪರಿಗಣಿಸಲು ಕರಡು ಮಸೂದೆಯಲ್ಲಿ ಅವಕಾಶವಿದೆ.
ಮೈಕ್ರೋ ಫೈನಾನ್ಸ್ ಕಿರುಕುಳ ತಡೆಯ ಕರಡು ಸುಗ್ರೀವಾಜ್ಞೆಯಲ್ಲಿ ಏನೇನಿದೆ?
* ಸಾಲ ವಸೂಲಿ ವೇಳೆ ಸಾಲಗಾರರಿಗೆ ಹಿಂಸೆ,ಹಲ್ಲೆ, ಅವಮಾನಕ್ಕೆ ನಿಷಿದ್ಧ
* ಬಲವಂತವಾಗಿ ಸ್ಥಿರಾಸ್ತಿ, ದಾಖಲೆ ಕಸಿದು ದಬ್ಬಾಳಿಕೆ, ದೌರ್ಜನ್ಯ ಎಸಗುವಂತಿಲ್ಲ
* ಸಾಲ ವಸೂಲಾತಿಗೆ ಗೂಂಡಾಗಳ ಬಳಕೆ,ಮನೆಗೆ ಭೇಟಿ ನೀಡುವುದು,ಬೆದರಿಕೆ ಹಾಕುವುದು ಗಂಭೀರ ಅಪರಾಧ
* ಸಾಲಗಾರರ ದೈನಂದಿನ ಕೆಲಸಗಳಿಗೆ ಅಡ್ಡಿ ತೊಂದರೆ ನೀಡಿದರೆ ಲೈಸೆನ್ಸ್ ರದ್ದು
* ಗ್ರಾಹಕರಿಂದ ಸ್ವೀಕರಿಸಿದ ಹಣಕ್ಕೆ ಅಧಿಕೃತ ಸಹಿ ಮಾಡಿದ ರಶೀದಿ ನೀಡುವುದು ಕಡ್ಡಾಯ
* ಸಾಲ ಪಡೆದವರು ಬಡ್ಡಿ, ಕಂತು ಪಾವತಿ ವಿವರ ಕೇಳಿದರೆ ಸಂಸ್ಥೆಗಳು ಕೊಡಬೇಕು
* ಮೈಕ್ರೋ ಫೈನಾನ್ಸ್‌ಗಳು ಕಡ್ಡಾಯವಾಗಿ ಸ್ಥಳೀಯ ಕಚೇರಿಯನ್ನು ಹೊಂದಿರಬೇಕು
* ಸುಗ್ರೀವಾಜ್ಞೆ ಹೊರಡಿಸಿದ 30 ದಿನದೊಳಗೆ ನೋಂದಣಿ ಪ್ರಾಧಿಕಾರದಲ್ಲಿ (ಜಿಲ್ಲಾಧಿಕಾರಿ)ಮೈಕ್ರೋ ಫೈನಾನ್ಸ್ ಕಂಪನಿಗಳು, ಲೇವಾದೇವಿದಾರ ಸಂಸ್ಥೆಗಳು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ
* ಸಾಲಗಾರರ ಸಂಪೂರ್ಣ ಮಾಹಿತಿ,ಸಾಲದ ಮೊತ್ತ, ಬಡ್ಡಿ ದರ,ವಸೂಲಿಗೆ ಬಾಕಿ, ಸಾಲ ಪಡೆಯುವಾಗ ಸಂಗ್ರಹಿಸಿದ ಲಿಖಿತ ಮುಚ್ಚಳಿಕೆ ನೀಡಬೇಕು
* ಸುಗ್ರೀವಾಜ್ಞೆ ಜಾರಿಯಾದ ಬಳಿಕ ಮೈಕ್ರೋ ಫೈನಾನ್ಸ್ ಕಂಪನಿ,ಲೇವಾದೇವಿದಾರರು ನೋಂದಣಿ ಮಾಡದೆ ಸಾಲ ವಹಿವಾಟು ನಡೆಸುವಂತಿಲ್ಲ
* ನೋಂದಣಿ ಅವಧಿ ಒಂದು ವರ್ಷ ಮಾತ್ರ
* ಅವಧಿ ಮುಗಿಯುವ 60 ದಿನಗಳ ( 2 ತಿಂಗಳ) ಮೊದಲೇ ನವೀಕರಣಕ್ಕೆ ಅರ್ಜಿ ಸಲ್ಲಿಸಬೇಕು
* ಅರ್ಜಿ ಪರಿಶೀಲಿಸಿದ ಬಳಿಕ ಪ್ರಾಧಿಕಾರವು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ
* ದೂರು ಬಂದರೆ, ಸ್ವಯಂಪ್ರೇರಿತವಾಗಿ ನೋಂದಣಿ ರದ್ದು ಮಾಡುವ ಅಧಿಕಾರ ಪ್ರಾಧಿಕಾರಕ್ಕಿರಲಿದೆ
* ಸುಗ್ರೀವಾಜ್ಞೆಯಲ್ಲಿರುವ ಯಾವುದೇ ನಿಯಮವನ್ನು ಉಲ್ಲಂಘಿಸಿದರೆ, ಪ್ರಾಧಿಕಾರವು ನೋಟಿಸ್ ನೀಡದೆ ನೋಂದಣಿಯನ್ನೆ ಅಮಾನತು, ರದ್ದು
ಮಾಡಬಹುದು
* ಸಾಲ ನೀಡುವ,ವಸೂಲು ಮಾಡುವ ನಿಯಮಗಳನ್ನು ಅಧಿಸೂಚನೆ ಮೂಲಕ ರೂಪಿಸಲು ಸರ್ಕಾರಕ್ಕೆ ಅಧಿಕಾರ
* ಸಾಲಗಾರರಿಂದ ಭದ್ರತೆಯಾಗಿ ಯಾವುದೇ ವಸ್ತು,ಆಸ್ತಿ ಅಡಮಾನ ಇಟ್ಟುಕೊಂಡ್ರೆ ಅದನ್ನು ವಾಪಸ್ ನೀಡಬೇಕು.
‘DO’ಗಳು ಹಾಸ್ಟೆಲ್ ಗೆ ಭೇಟಿ ನೀಡುವುದು ಕಡ್ಡಾಯ: ಸಚಿವ ಶಿವರಾಜ್ ತಂಡರಗಿ