ಚಾಮರಾಜನಗರ: ಶಾಲೆಯಲ್ಲಿ ಶಿಕ್ಷಕರಿಗೆ ನೋಟ್ಸ್ ತೋರಿಸುತ್ತಿದ್ದಂತ ಸಂದರ್ಭದಲ್ಲೇ 3ನೇ ತರಗತಿ ವಿದ್ಯಾರ್ಥಿನಿಗೆ ಹೃದಯಾಘಾತ ಉಂಟಾಗಿದೆ. ಇದರಿಂದ ಕುಸಿದು ಬಿದ್ದಂತ ವಿದ್ಯಾರ್ಥಿನಿಯ ಸಾವನ್ನಪ್ಪಿರುವಂತ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಚಾಮರಾಜನಗರ ತಾಲ್ಲೂಕಿನ ಬನದಗುಪ್ಪೆ ಗ್ರಾಮದ ತೇಜಸ್ವಿನಿ ಇಂದು ಶಾಲೆಗೆ ತೆರಳಿದ್ದರು. ಸೇಂಟ್ ಫ್ರಾನ್ಸಿಸ್ ಶಾಲೆಯಲ್ಲಿ 3ನೇ ತರಗತಿ ಓದುತ್ತಿದ್ದಂತ ಆಕೆ, ಇಂದು ನೋಟ್ಸ್ ತೋರಿಸಲು ತೆರಳಿದಂತ ಸಂದರ್ಭದಲ್ಲೇ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದಿದ್ದಾಳೆ.
ಶಾಲೆಯಲ್ಲೇ ಕುಸಿದು ಬಿದ್ದಂತ 3ನೇ ತರಗತಿ ವಿದ್ಯಾರ್ಥಿನಿ ತೇಜಸ್ವಿಯನ್ನು ಕೂಡಲೇ ಶಾಲಾ ಶಿಕ್ಷಕರು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೇ ತೇಜಸ್ವಿಯನ್ನು ಪರೀಕ್ಷಿಸಿದಂತ ವೈದ್ಯರು ಮಾರ್ಗಮಧ್ಯದಲ್ಲೇ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.
ಮೃತ ತೇಜಸ್ವಿನಿ ಬನದಗುಪ್ಪಿ ಗ್ರಾಮ ಲಿಂಗರಾಜು ಹಾಗೂ ಶ್ರುತಿ ಎಂಬುವರ ದಂಪತಿಯ ಪುತ್ರಿಯಾಗಿದ್ದಾರೆ. ಆಕೆಯ ಪಾರ್ಥೀವ ಶರೀರವನ್ನು ಆಸ್ಪತ್ರೆಯಿಂದ ಊರಿಗೆ ಪೋಷಕರು ಕೊಂಡೊಯ್ಯುತ್ತಿದ್ದಾರೆ. ಈಗ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
BIG UPDATE : ಕರ್ನಾಟಕದಲ್ಲಿ 2 ‘HMPV’ ಸೋಂಕು ಧೃಡ : ‘ICMR’ ಸ್ಪಷ್ಟನೆ | HMPV VIRUS
‘HMPV ವೈರಸ್’ ಎಂದರೇನು? ಅದರ ಲಕ್ಷಣಗಳು ಯಾವುವು? ಇಲ್ಲಿದೆ ಮಾಹಿತಿ | HMPV virus