ಕಲಬುರ್ಗಿ: 10ನೇ ತರಗತಿ ಓದುತ್ತಿದ್ದಂತ ವಿದ್ಯಾರ್ಥಿನಿಯನ್ನು 9ನೇ ತರಗತಿ ಓದುತ್ತಿದ್ದಂತ ವಿದ್ಯಾರ್ಥಿಯೊಬ್ಬ ಒನ್ ಸೈಡ್ ಪ್ರೀತಿ ಮಾಡಿದ್ದಾನೆ. ಆದರೇ ಆತನ ಪ್ರೀತಿಯನ್ನು ಅಪ್ರಾಪ್ತ ಬಾಲಕಿ ನಿರಾಕರಿಸಿದ್ದಾಳೆ. ಇಷ್ಟಕ್ಕೇ ಸಿಟ್ಟಾದಂತ ಆತ, ಆಕೆ ತೆರಳುತ್ತಿದ್ದಂತ ಬಸ್ ಹಿಂಬಾಲಿಸಿ ಬೈಕ್ ನಲ್ಲಿ ತೆರಳಿ, ಕೆಳಗೆ ಇಳಿಸಿಕೊಂಡು ಚಾಕುವಿನಿಂದ ಇರಿದಿರುವ ಘಟನೆ ಕಲಬುರ್ಗಿಯಲ್ಲಿ ನಡೆದಿದೆ.
ಕಲಬುರ್ಗಿ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಅಟ್ಟೂರು ಕ್ರಾಸ್ ಬಳಿಯಲ್ಲಿ ಇಂದು ಜಿಲ್ಲೆಯ ಜನತೆ ಬೆಚ್ಚಿ ಬೀಳಿಸುವಂತ ಘಟನೆ ನಡೆದಿದೆ. ಅಲ್ಲದೇ ಸಿನಿಮೀಯ ರೀತಿಯಲ್ಲಿ ನಡೆದಂತ ಘಟನೆಯಿಂದ ಜನರು ಆಘಾತಗೊಳ್ಳುವಂತೆ ಮಾಡಿದೆ. ಅದೇ 9ನೇ ತರಗತಿಯಲ್ಲಿ ಓದುತ್ತಿದ್ದಂತ 17 ವರ್ಷದ ಬಾಲಕ, 10ನೇ ತರಗತಿಯಲ್ಲಿ ಓದುತ್ತಿದ್ದಂತ ಬಾಲಕಿಯನ್ನು ಪ್ರೀತಿಸುವಂತೆ ಮಾಡಿದ ಮನವಿ ನಿರಾಕರಿಸಿದಂತ ನಂತ್ರ ಆದಂತ ಘಟನೆಯಾಗಿದೆ.
9ನೇ ತರಗತಿ ಬಾಲಕ, 10ನೇ ತರಗತಿ ಬಾಲಕಿಯನ್ನು ಪ್ರೀತಿಸುವಂತೆ ಪೀಡಿಸಿದರೂ, ಆತನ ಪ್ರೀತಿಯನ್ನು ಒಪ್ಪಿಕೊಂಡಿಲ್ಲ. ಇಷ್ಟಕ್ಕೇ ಕೋಪಗೊಂಡ ಆ ಅಪ್ರಾಪ್ತ ಬಾಲಕ, ಇಂದು ಶಾಲೆಗೆ ತೆರಳುತ್ತಿದ್ದಂತ ಬಾಲಕಿಯ ಬಸ್ ಅನ್ನು ಬೈಕ್ ನಲ್ಲಿ ಹಿಂಬಾಲಿಸಿ ಲವ್ ಏನು ಬೇಡ. ಬಾ ಮಾತನಾಡುವುದಿದೆ ಎಂಬುದಾಗಿ ಕೆಳಗೆ ಇಳಿಸಿಕೊಂಡಿದ್ದಾನೆ. ಆ ಬಳಿಕ ಬಾಲಕಿಯ ಕುತ್ತಿಗೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.
ಬಾಲಕನಿಂದ ಚಾಕು ಇರಿತಕ್ಕೆ ಒಳಗಾದಂತ ಬಾಲಕಿಯನ್ನು ಕೂಡಲೇ ಕಲಬುರ್ಗಿ ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಬಾಲಕಿಯ ಸ್ಥಿತಿ ಗಂಭೀರವಾಗಿರೋದಾಗಿ ತಿಳಿದು ಬಂದಿದೆ. ಈ ಸಂಬಂಧ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BIG Alert: ಪೋಷಕರೇ..! ನೀವು ಮಕ್ಕಳಿಗೆ ‘ಬಾಂಬೆ ಮಿಠಾಯಿ’ ಕೊಡಿಸ್ತಾ ಇದ್ದೀರಾ.? ಇಲ್ಲಿದೆ ‘ಶಾಕಿಂಗ್ ನ್ಯೂಸ್’
ALEART: ‘ಆ್ಯಂಟಿಬಯೋಟಿಕ್’ ಮಾತ್ರೆ ಸೇವನೆ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆಯಿಂದ ಮಹತ್ವದ ಎಚ್ಚರಿಕೆ!