ಉತ್ತರ ಪ್ರದೇಶ: 7 ವರ್ಷದ ಬಾಲಕಿಯೊಬ್ಬಳು 18 ಗಂಟೆಗಳ ಕಾಲ ಶಾಲಾ ಕೊಠಡಿಯಲ್ಲೇ ಲಾಕ್ ಆಗಿದ್ದ ಘಟನೆ ಬೆಳಕಿಗೆ ಬಂದಿದೆ.
ಯುಪಿಯ ಸಂಭಾಲ್ನಲ್ಲಿರುವ ಶಾಲೆಯೊಂದರಲ್ಲಿ 1 ನೇ ತರಗತಿ ವಿದ್ಯಾರ್ಥಿ ಮಂಗಳವಾರ ಶಾಲಾ ಅವಧಿಯಲ್ಲಿ ನಿದ್ರೆಗೆ ಜಾರಿದ್ದಾಳೆ. ಶಾಲೆ ಮುಗಿದರೂ ಎಚ್ಚರವಾಗದ ಮಗು ಹಾಗೆಯೇ ಮಲಗಿತ್ತು. ಕೊಠಡಿಯನ್ನು ಪರಿಶೀಲಿಸದೆ ಸಿಬ್ಬಂದಿ ಮಗು ಸಮೇತ ಬೀಗ ಹಾಕಿಕೊಂಡು ಮನೆಗೆ ಹೋದರು.
ಸಂಜೆಯಾದ್ರೂ ಬಾಲಕಿ ಮನೆಗೆ ಬಾರದ ಕಾರಣ ಆಕೆಯ ಅಜ್ಜಿ ಶಾಲೆ ಬಳಿ ಬಂದು ಹುಡುಕಾಡಿದ್ದಾರೆ. ನಂತ್ರ ಮನೆಯವರು ಅರಣ್ಯ ಪ್ರದೇಶದಲ್ಲಿ ಹುಡುಕಾಡಿದರೂ ಎಲ್ಲಿಯೂ ಪತ್ತೆಯಾಗಿರಲಿಲ್ಲ. ಬುಧವಾರ ಬೆಳಗ್ಗೆ 8 ಗಂಟೆಗೆ ಶಾಲೆ ಬಾಗಿಲು ತೆರೆದಾಗ ಬಾಲಕಿ ರಾತ್ರಿಯಿಡೀ ಶಾಲಾ ಕೊಠಡಿಯಲ್ಲೇ ಇರುವುದು ಕಂಡುಬಂದಿದೆ. ಈ ವೇಳೆ ಶಾಲೆ ವಿರುದ್ಧ ಬಾಲಕಿ ಪೋಷಕರು ಹರಿಹಾಯ್ದಿದ್ದಾರೆ.
ಶಾಲಾ ಅವಧಿ ಮುಗಿದರೂ ಶಿಕ್ಷಕರು ಹಾಗೂ ಇತರೆ ಸಿಬ್ಬಂದಿ ಕೊಠಡಿಗಳನ್ನು ಪರಿಶೀಲಿಸಿಲ್ಲ ಎಂದು ಬ್ಲಾಕ್ ಶಿಕ್ಷಣಾಧಿಕಾರಿ ಸಿಂಗ್ ತಿಳಿಸಿದ್ದಾರೆ. ಇದು ನಿರ್ಲಕ್ಷ್ಯದ ಪ್ರಕರಣವಾಗಿದ್ದು, ಸಂಪೂರ್ಣ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
BREAKING NEWS: ಮೊಹಮ್ಮದ್ ಸಾಕಿಬ್ ನಿವಾಸದಲ್ಲಿ NIA ದಾಳಿ ಅಂತ್ಯ : ಮಹತ್ವದ ದಾಖಲೆಗಳು ವಶಕ್ಕೆ
SHOCKING NEWS: ಯುಪಿಯಲ್ಲಿ ಗರ್ಭಿಣಿ ಮೇಲೆ ಸಾಮೂಹಿಕ ಅತ್ಯಾಚಾರ… ಗರ್ಭಪಾತದಿಂದ ಮಹಿಳೆ ಸ್ಥಿತಿ ಚಿಂತಾಜನಕ