ಕಲಬುರ್ಗಿ : ಮಸೀದಿ ಕಮಿಟಿ ಅಧ್ಯಕ್ಷ ಸ್ಥಾನದ ವಿಚಾರವಾಗಿ ಕಲ್ಬುರ್ಗಿಯಲ್ಲಿ ಎರಡು ಗುಂಪುಗಳ ನಡುವೆ ತೀವ್ರ ಗಲಾಟೆ ನಡೆದಿದೆ. ಪೊಲೀಸರ ಎದುರಿನಲ್ಲಿಯೇ ಮನೆಯ ಮೇಲೆ ಕಲ್ಲುತೂರಾಟ ನಡೆಸಿರುವ ಘಟನೆ ನಡೆದಿದೆ. ಕಲ್ಲು ತೂರಾಟದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗಲಾಟೆಯಲ್ಲಿ ಓರ್ವ ಮಹಿಳೆಗೆ ಗಂಭೀರವಾದ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಲಬುರ್ಗಿ ನಗರದ ಬುಲಂದ್ ಪರವೇಜ್ ಕಾಲೋನಿಯಲ್ಲಿ ಈ ಒಂದು ಗಲಾಟೆ ನಡೆದಿದೆ. ಮಸೀದಿ ಅಧ್ಯಕ್ಷರಾಗಿದ್ದ ನೈಮ್ ಖಾನ್ ಅವಧಿ ಮುಕ್ತಾಯವಾಗಿತ್ತು ಅವಧಿ ಮುಗಿದರು ಕೂಡ ಅಧ್ಯಕ್ಷ ಸ್ಥಾನ ಬಿಟ್ಟುಕೊಡದ ಹಿನ್ನೆಲೆಯಲ್ಲಿ ಗಲಾಟೆಯಾಗಿದೆ. ನಯಿಮ್ ಖಾನ್ ಸುಫಿಯಾ ಕುಟುಂಬದ ನಡುವೆ ಈ ಒಂದು ಗಲಾಟೆ ನಡೆದಿದೆ.
ಒಂದು ಕಡೆ ಸುಫಿಯ ಮನೆಯ ಮೇಲೆ ಕಲ್ಲುತೂರಾಟ ನಡೆಸಿ ಹಲ್ಲೆ ನಡೆಸಿದ್ದಾರೆ ಎಂದು ನಯಿಮ್ ಖಾನ್ ಕಡೆಯವರ ವಿರುದ್ಧ ಹಲ್ಲೆ ಮತ್ತು ಕಲ್ಲುತೂರಾಟ ಆರೋಪ ಕೇಳಿಬಂದಿದೆ. ಇನ್ನೊಂದು ಕಡೆ ಮನೆಯಲ್ಲಿ ಇದ್ದಂತಹ ಹೆಣ್ಣು ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನಯೀಮ್ ಖಾನ್ ಕೂಡ ಆರೋಪ ಮಾಡಿದ್ದಾರೆ. ಸುಫಿಯಾ ಖಾನ್ ವಿರುದ್ಧ ನಯೀಮ್ ಖಾನ್ ಆರೋಪ ಮಾಡಿದ್ದಾರೆ. ಘಟನೆಯಲ್ಲಿ ಓರ್ವ ಮಹಿಳೆಗೆ ಗಾಯವಾಗಿದು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.








