ಬೆಂಗಳೂರು: ಕಾಂಗ್ರೆಸ್ ವಿಜಯ ಸಂಕಲ್ಪ ಶಿಬಿರ ಕಾರ್ಯಾಗಾರದಲ್ಲಿ ಪಕ್ಷದ ಎರಡು ಬಣಗಳ ನಡುವೆ ತೀವ್ರ ಮಾರಾಮಾರಿ ನಡೆದಿದೆ. ದಾಸರಹಳ್ಳಿಯ ಎನ್ಟಿಟಿಎಫ್ ಜಿಮ್ಖಾನ ಕ್ಲಬ್ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
BIGG NEWS : ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ; `ಗ್ರಾಮ ಒನ್’ ಕೇಂದ್ರಗಳಲ್ಲಿ ವಿತರಣೆ
ದಾಸರಹಳ್ಳಿ ಉಸ್ತುವಾರಿ ಡಾ. ನಾಗಲಕ್ಷ್ಮಿ ಚೌಧರಿ ನೇತೃತ್ವದಲ್ಲಿ ನಡೆಯುತ್ತಿದ್ದ ಶಿಬಿರಕ್ಕೆ ಕಾಂಗ್ರೆಸ್ ಮುಖಂಡ ಪಿ.ಎನ್ ಕೃಷ್ಣ ಮೂರ್ತಿಗೆ ಆಹ್ವಾನ ನೀಡಿರಲಿಲ್ಲ. ಇದರಿಂದ ಕೆರಳಿದ ಪಿಎನ್ ಕೃಷ್ಣಮೂರ್ತಿ ಬೆಂಬಲಿಗರು ಸಭೆ ನಡೆಯುತ್ತಿದ್ದ ಸ್ಥಳಕ್ಕ ಆಗಮಿಸಿ ಗಲಾಟೆ ನಡೆಸಿದರು ಎಂಬ ಆರೋಪ ಕೇಳಿಬಂದಿದೆ.
ಗಲಾಟೆ ವೇಳೆಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ 20ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಈ ಕುರಿತು ಪೀಣ್ಯ ಪೋಲಿಸ್ ಠಾಣೆಯಲ್ಲಿ ದೂರ ದಾಖಲು ಮಾಡಲಾಗಿದೆ. ಕೆಪಿಸಿಸಿ ಸದಸ್ಯರಾಗಿರುವ ಪಿಎನ್ ಕೃಷ್ಣಮೂರ್ತಿಯನ್ನು ಸಭೆಗೆ ಆಹ್ವಾನಿಸಿಲ್ಲ ಎಂದು ಇಪ್ಪತ್ತಕ್ಕೂ ಹೆಚ್ಚು ಬೆಂಬಲಿಗರು ಗಲಾಟೆ ನಡೆಸಿದ್ದಾರೆ ಎನ್ನಲಾಗ್ತಿದೆ.
BIGG NEWS : ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ; `ಗ್ರಾಮ ಒನ್’ ಕೇಂದ್ರಗಳಲ್ಲಿ ವಿತರಣೆ
ಸಭಾಂಗಣದ ಸ್ಥಳ ಇಕ್ಕಟ್ಟಾಗಿದ್ದರಿಂದ ಗಲಾಟೆ ವೇಳೆ ನೂಕು ನುಗ್ಗಲು ಉಂಟಾಗಿದ್ದು, ಮಹಿಳೆಯರು ಸೇರಿದಂತೆ 20ಕ್ಕೂ ಹೆಚ್ಚು ಕಾರ್ಯಕರ್ತರು ಗಾಯಗೊಂಡಿದ್ದಾರೆ. ಗಾಯಗೊಂಡ ಕಾಂಗ್ರೆಸ್ ಕಾರ್ಯಕರ್ತರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
BIGG NEWS : ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ; `ಗ್ರಾಮ ಒನ್’ ಕೇಂದ್ರಗಳಲ್ಲಿ ವಿತರಣೆ