ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಸ್ವಪಕ್ಷದ ವಿರುದ್ಧವೇ ಜೆಡಿಎಸ್ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಸ್ವಪಕ್ಷದ ವಿರುದ್ಧವೇ ಅಸಮಾಧಾನ ಹೊರಹಾಕಿದ್ದರು.
ಇದರಿಂದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಪಕ್ಷದ ವರಿಷ್ಠರಾದಂತಹ ಹೆಚ್ಡಿ ದೇವೇಗೌಡ ಅವರು ಇತ್ತೀಚಿಗೆ ಎಂ ಇಬ್ರಾಹಿಂ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ್ದರು. ನಂತರ ಸೇಮ್ ಇಬ್ರಾಹಿಂ ಅವರು ಪಕ್ಷದ ಚಿನ್ಹೆ ಹಾಗು ಲೆಟರ್ ಹೆಡ್ ಬಳಸುತ್ತಿದ್ದರು. ಇದೀಗ ಪಕ್ಷದ ಚಿಹ್ನೆ, ಲೆಟರ್ ಹೆಡ್ ಬಳಕೆ ಮಾಡುವಂತಿಲ್ಲ. ಜೆಡಿಎಸ್ ಹೆಸರಲ್ಲಿ ಸುದ್ದಿಗೋಷ್ಠಿ ನಡೆಸುವಂತಿಲ್ಲ. ಪದಾಧಿಕಾರಿಗಳನ್ನು ನೇಮಕ ಮಾಡುವಂತಿಲ್ಲ ಎಂದು ಸಿಟಿ ಸಿವಿಲ್ ಕೋರ್ಟ್ ಆದೇಶ ನೀಡಿದೆ.
ಇಬ್ರಾಹಿಂ ಅವರು ಜೆಡಿಎಸ್ನಿಂದ ಉಚ್ಛಾಟನೆಯಾದರೂ ಪಕ್ಷದ ಚಿಹ್ನೆ, ಹೆಸರು ಬಳಸುತ್ತಿದ್ದಾರೆ. ಅದಕ್ಕೆ ನಿರ್ಬಂಧ ವಿಧಿಸಬೇಕು ಎಂದು ಕೋರಿ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಎ.ಪಿ.ರಂಗನಾಥ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಇಬ್ರಾಹಿಂ ಅವರು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿದ್ದಾಗ ಸಂಪೂರ್ಣ ನಿಷ್ಕ್ರಿಯರಾಗಿದ್ದರು. ಸಂಘಟನೆ, ಬಲವರ್ಧನೆಗೆ ಯಾವುದೇ ಕಾರ್ಯಕ್ರಮ ಹಮ್ಮಿಕೊಳ್ಳಲಿಲ್ಲ. ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅಮಾನತು ಮಾಡಿದ್ದರು. ನಂತರ ಬೆಂಗಳೂರಿನಲ್ಲಿ ನಡೆದ ಪಕ್ಷದ ರಾಷ್ಟ್ರೀಯ ನಾಯಕರ ಸಭೆ ಉಚ್ಛಾಟನೆಯ ನಿರ್ಧಾರ ಕೈಗೊಂಡಿತ್ತು.
ಆದರೆ, ಇಬ್ರಾಹಿಂ ಅವರು ನಮ್ಮದೇ ನಿಜವಾದ ಜೆಡಿಎಸ್. ಉಚ್ಛಾಟನೆ ನಿಯಮ ಬಾಹಿರ. ಈಗಲೂ ನಾನೆ ರಾಜ್ಯ ಘಟಕದ ಅಧ್ಯಕ್ಷ ಎಂದು ಹೇಳಿಕೆ ನೀಡಿದ್ದರು. ಅಧಿಕೃತವಾಗಿಯೇ ಪಕ್ಷದ ಲೆಟರ್ಹೆಡ್, ಚಿಹ್ನೆ ಬಳಸುತ್ತಿದ್ದರು.