ಕೆಎನ್ ಎನ್ ನ್ಯೂಸ್ ಡೆಸ್ಕ್ : ನಾಳೆ ಕ್ರಿಸ್ಮಸ್ ಆಚರಣೆ ಸಂಭ್ರಮ ಸಡಗರದಿಂದ ಕೂಡಿದೆ. ಅದರಲ್ಲೂ ಚರ್ಚೆಗಳು ಬಗೆಬಗೆ ಹೂಗಳಿಂದ ಸಿಂಗಾರಗೊಳ್ಳುತ್ತಿವೆ.
HEALTH TIPS: ಚಳಿಗಾಲದಲ್ಲಿ ಮಕ್ಕಳಿಗೆ ಬಾಳೆಹಣ್ಣು ಕೊಡುವುದಕ್ಕೆ ವೈದ್ಯರ ಸಲಹೆ ಇಲ್ಲಿದೆ ನೋಡಿ
ಹಾಗೆ ಬೆಂಗಳೂರಿನಲ್ಲಿ ಕ್ರಿಸ್ಮಸ್ ಆಚರಣೆ ದೊಡ್ಡ ಪ್ರಮಾಣದಲ್ಲಿಯೇ ಇರುತ್ತದೆ. ಹಾಗಿದ್ದರೆ ಈ ಸಲದ ಕ್ರಿಸ್ಮಸ್ಗೆ ಬಿಡುವು ಮಾಡಿಕೊಂಡು ಈ ಏಳು ಪ್ರಮುಖ ಚರ್ಚ್ಗಳಿಗೆ ಭೇಟಿ ನೀಡಿ ಬನ್ನಿ..
ಬೆಂಗಳೂರಿನ ರಿಚ್ಮಂಡ್ ಸರ್ಕಲ್ ಬಳಿ ಇರುವ ಆಲ್ ಸೆಂಟ್ ಚರ್ಚ್ ಇದೀಗ ಕ್ರಿಸ್ಮಸ್ ಹಬ್ಬಕ್ಕೆ ಸಿದ್ಧವಾಗಿದೆ. ನಗರದ ಕ್ಲೆವಲೆಂಡ್ ಟೌನ್ನಲ್ಲಿನ ಫ್ರಾನ್ಸಿಸ್ ಕ್ಸೇವಿಯರ್ ಕೆಥೆಡ್ರಲ್ ಚರ್ಚ್ ತುಂಬ ಹಳೇಯ ಚರ್ಚ್ಗಳಲ್ಲೊಂದು.
ಒನ್ ಸ್ಟೇಷನ್ ಒನ್ ಚರ್ಚ್ ಪಾಲಿಸಿ ಅಡಿಯಲ್ಲಿ ಈಸ್ಟ್ ಇಂಡಿಯಾ ಆಡಳಿತದ ಅವಧಿಯಲ್ಲಿ ಎಂಜಿ ರಸ್ತೆಯಲ್ಲಿ ನಿರ್ಮಾಣವಾದ ಚರ್ಚ್ ಇದಾಗಿದೆ.
ಬೆಂಗಳೂರಿನ ಶಿವಾಜಿ ನಗರದಲ್ಲಿರುವ ಸೆಂಟ್ ಆಂಡ್ರ್ಯೂ ಚರ್ಚ್ ಗೋತಿಕ್ ಶೈಲಿಯಲ್ಲಿ ನಿರ್ಮಿಸಲಾಗಿದೆ.
HEALTH TIPS: ಚಳಿಗಾಲದಲ್ಲಿ ಮಕ್ಕಳಿಗೆ ಬಾಳೆಹಣ್ಣು ಕೊಡುವುದಕ್ಕೆ ವೈದ್ಯರ ಸಲಹೆ ಇಲ್ಲಿದೆ ನೋಡಿ
ಸುತ್ತಲೂ ಉದ್ಯಾನ, ಅದರ ಮಧ್ಯೆ ಚೆಂದದ ಚರ್ಚ್. ಬೆಂಗಳೂರಿನ ಕ್ಲೆವಲೆಂಡ್ ಟೌನ್ನಲ್ಲಿದೆ ಈ ಸೆಂಟ್ ಜಾನ್ಸ್ ಚರ್ಚ್. ಬೆಂಗಳೂರಿನ ಶಿವಾಜಿನಗರದಲ್ಲಿನ ಸೆಂಟ್ ಮಾರ್ಸ್ ಕೆಥೆಡ್ರಲ್ ಚರ್ಚ್ ತನ್ನ ವಿಶಿಷ್ಠ ಶೈಲಿಯ ವಿನ್ಯಾಸದಿಂದಲೇ ಎಲ್ಲರ ಗಮನ ಸೆಳೆಯುತ್ತಿದೆ. ಶಿವಾಜಿ ನಗರದಲ್ಲಿನ ಮತ್ತೊಂದು ವಿಶೇಷ ಚರ್ಚ್ ಎಂದರೆ ಅದು ಸೆಂಟ್ ಮೇರಿ ಬೇಸಿಲಿಕಾ ಚರ್ಚ್. ಇದನ್ನು ಗೋತಿಕ್ ಶೈಲಿಯಲ್ಲಿ ನಿರ್ಮಿಸಲಾಗಿದೆ.