ಬೆಂಗಳೂರು: ಕಳೆದ ಎರಡು ವರ್ಷ ಕೊರೊನಾದಿಂದ ಹೊಸ ವರ್ಷ ಆಚರಣೆಗೆ ಬ್ರೇಕ್ ಬಿದ್ದಿತ್ತು. ಇದರಿಂದ ಬೆಂಗಳೂರು ಜನತೆ ಫುಲ್ ನಿರಾಸೆಗೊಂಡಿದ್ದು, ಎರಡು ವರ್ಷ ಸಾಧರಣವಾಗಿ ಹೊಸ ವರ್ಷವನ್ನು ಭರ ಮಾಡಿಕೊಂಡಿದ್ದರು. ಆದರೆ ಈ ಬಾರಿ ಹೊಸ ವರ್ಷಾಚರಣೆಗೆ ಮನರಂಜನಾ ಆಯೋಜಕರಿಗೆ ಅನುಮತಿ ನೀಡಿದ್ದಾರೆ.
BIG BREAKING NEWS: ಬೆಂಗಳೂರಿನಲ್ಲಿ ಕಾಲೇಜಿನ 6ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿನಿ ಸಾವು
ಹೀಗಾಗಿ ಅದ್ಧೂರಿಯಾಗಿ ಹೊಸ ವರ್ಷ ಆಚರಣೆಗಾಗಿ ಬೆಂಗಳೂರು ಜನತೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಇನ್ನು ಸಂಭ್ರಮಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಿಟಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.
ಬೆಂಗಳೂರಿನಲ್ಲಿ ಕ್ರಿಸ್ಮಸ್, ಹೊಸ ವರ್ಷದ ಸಂದರ್ಭಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಆಯೋಜಕರು, ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಬೆಂಗಳೂರು ಪೊಲೀಸರು ಕೆಲವು ಸೂಚನೆಗಳನ್ನು ನೀಡಿದ್ದಾರೆ. ಕಾರ್ಯಕ್ರಮಕ್ಕೆ ಸಿಬ್ಬಂದಿ ಆಯೋಜನೆ ಮಾಡುವ ವೇಳೆ ಅವರ ಬಗ್ಗೆ ಸರಿಯಾಗಿ ಪರಿಶೀಲನೆ ಮಾಡಲು ಹಾಗೂ ಮಹಿಳಾ ಸಿಬ್ಬಂದಿಯನ್ನು ನೇಮಿಸಿ ಅವರಿಗೆ ಸರಿಯಾಗಿ ಟ್ರೈನಿಂಗ್ ಕೊಟ್ಟು ಅವರಿಗೆ ಸಾರಿಗೆ ವ್ಯವಸ್ಥೆ ಮಾಡುವಂತೆ ಆಯೋಜಕರಿಗೆ ಪೊಲೀಸರು ಸೂಚನೆ ನೀಡಿದ್ದಾರೆ.
BIG BREAKING NEWS: ಬೆಂಗಳೂರಿನಲ್ಲಿ ಕಾಲೇಜಿನ 6ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿನಿ ಸಾವು
ಶುಕ್ರವಾರ ಹೋಟೆಲ್, ರೆಸ್ಟೋರೆಂಟ್ ಮಾಲೀಕರೊಂದಿಗೆ ಸಭೆ ನಡೆಸಿದ ಪೊಲೀಸ್ ಇಲಾಖೆ ಕೆಲವು ಗೈಡ್ಲೈನ್ಸ್ ಹೊರಡಿಸಿದೆ. ಹಾಗೂ ತಾವು ಆಯೋಜಿಸುವ ಕಾರ್ಯಕ್ರಮದ ಭದ್ರತಾ ಸಿಬ್ಬಂದಿಯ ವಿರುದ್ಧ ಯಾವುದೇ ಕ್ರಿಮಿನಲ್ ಆರೋಪಗಳಿವೆಯೇ ಎಂದು ಪರಿಶೀಲಿಸಲು ತಿಳಿಸಲಾಗಿದೆ. ಇದಕ್ಕಾಗಿ ಸೇವಾ ಸಿಂಧು ಆ್ಯಪ್ ಬಳಸಲು ಪೊಲೀಸರು ಸೂಚಿಸಿದ್ದಾರೆ.
ಪಬ್, ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ಕ್ರಿಸ್ಮಸ್, ಹೊಸ ವರ್ಷಕ್ಕೆ ಕಾರ್ಯಕ್ರಮಗಳನ್ನು ಆಯೋಜಿಸಿದರೆ ಆ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಅನುಮತಿ ಪಡೆಯಲು ತಿಳಿಸಲಾಗಿದೆ. ಹಾಗೂ ಭದ್ರತಾ ದೃಷ್ಟಿಯಿಂದ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಪ್ರವೇಶ, ನಿರ್ಗಮನ ಮತ್ತು ಪಾರ್ಕಿಂಗ್ ಪ್ರದೇಶಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲು ಪೊಲೀಸರು ತಿಳಿಸಿದ್ದಾರೆ.
BIG BREAKING NEWS: ಬೆಂಗಳೂರಿನಲ್ಲಿ ಕಾಲೇಜಿನ 6ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿನಿ ಸಾವು
ಪಾರ್ಟಿಗಳಲ್ಲಿ ಯಾವುದೇ ರಿತಿಯ ಶಸ್ತ್ರಾಸ್ತ್ರಗಳು, ಡ್ರಗ್ಸ್ ಅಥವಾ ಇತರ ನಿಷೇಧಿತ ವಸ್ತುಗಳನ್ನು ತರಲು ಅನುಮತಿ ನೀಡಬಾರದು. ಈವೆಂಟ್ ಆಯೋಜಕರು ಟ್ರಾವೆಲ್ ಏಜೆನ್ಸಿಗಳೊಂದಿಗೆ ಮಾತನಾಡಿಕೊಂಡು ಪಾರ್ಟಿಗೆ ಬಂದ ಅತಿಥಿ, ಸಿಬ್ಬಂದಿಗೆ ಸುರಕ್ಷಿತ ಸಾರಿಗೆ ವ್ಯವಸ್ಥೆಯನ್ನು ಮಾಡಬೇಕು. ಈವೆಂಟ್ನಲ್ಲಿ ಹೆಚ್ಚು ಜನರಿಗೆ ಅನುಮತಿ ನೀಡುವಂತಿಲ್ಲ. ಹೆಚ್ಚು ಟಿಕೆಟ್ ಸೇಲ್ ಮಾಡುವಂತಿಲ್ಲ. ಹೀಗೆ ಮಾಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಆಯೋಜಕರಿಗೆ ವಾರ್ನಿಂಗ್ ಕೊಟ್ಟಿದ್ದಾರೆ.