ಬೆಂಗಳೂರು: ಇಂದು ರಾಜ್ಯಾದ್ಯಂತ ಕ್ರಿಸ್ ಮಸ್ ಸಂಭ್ರಮ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಚರ್ಚ್ ಗಳಲ್ಲಿ ವಿಶೇಷ ಹೂವಿನ ಅಲಂಕಾರದಿಂದ ಸಿಂಗಾರಗೊಂಡಿದ್ದು, ಪ್ರಾರ್ತನೆಯನ್ನು ಸಲ್ಲಿಸಿದರು.
BIGG NEWS: ಚಳಿಯ ನಡುವೆಯೇ ರಾಜ್ಯದಲ್ಲಿ 4 ದಿನ ವರುಣನ ಅಬ್ಬರ; ಹವಾಮಾನ ಇಲಾಖೆ ಸೂಚನೆ
ಕಳೆದ ಎರಡು ವರ್ಷ ಕೊರೊನಾದಿಂದ ಕ್ರಿಸ್ ಮಸ್ ಹಬ್ಬವನ್ನು ಸರಳವಾಗಿ ಆಚರಿಸಲಾಗಿತ್ತು. ಈ ಬಾರಿ ಕ್ರಿಸ್ ಮಸ್ ಆಚರಣೆ ಅನುಮಿ ನೀಡಲಾಗಿತ್ತು. ಆದರೆ ಕೊರೊನಾ ಹೊಸ ತಳಿ ಆತಂಕ ಎದುರಾಗಿದೆ. ಈ ನಡುವೆಯೇ ಬೆಂಗಳೂರಿನಲ್ಲಿ ಕ್ರಿಸ್ ಮಸ್ ಆಚರಣೆಯನ್ನು ಸಂಭ್ರಮದಿಂದ ಆಚರಿಸಲಾಗಿತ್ತು.
BIGG NEWS: ಚಳಿಯ ನಡುವೆಯೇ ರಾಜ್ಯದಲ್ಲಿ 4 ದಿನ ವರುಣನ ಅಬ್ಬರ; ಹವಾಮಾನ ಇಲಾಖೆ ಸೂಚನೆ
ನಗರದಲ್ಲಿ ಚರ್ಚ್ ನಲ್ಲಿ ಜನರು ಆಗಮಿಸಿ ಏಸುವಿಗೆ ಪ್ರಾರ್ಥನೆ ಸಲ್ಲಿಸಲಾಗಿತ್ತು.ಮೈಸೂರಿನಲ್ಲೂ ಸಹ ಕ್ರಿಸ್ ಮಸ್ ಹಬ್ಬವನ್ನು ಆಚರಿಸಲಾಯಿತು. ಸೆಂಟ್ ಫಿಲೋಮಿನಾ ಚರ್ಚ್ ನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಉಡುಪಿಯಲ್ಲಿ ಏಸು ಕ್ರಿಸ್ತರ ಜನ್ಮದಿನವಾದ ಕ್ರಿಸ್ ಮಸ್ ಹಬ್ಬವನ್ನು ಆಚರಿಸಿದ್ರು. ಚರ್ಚ್ ಗಳಲ್ಲಿ ವಿಶೇಷ ಪ್ರಾರ್ಥನೆ, ಗೀತೆಗಳ ಗಾಯನ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕೋಲಾರದ ಚರ್ಚ್ ಗಳಲ್ಲಿ ಬಂದು ಪ್ರಾರ್ಥನೆ ಸಲ್ಲಿಸಿದರು. ಬಾಗಲಕೋಟೆಯಲೂ ಸಹ ಬೆಳಗ್ಗೆಯಿಂದಲೇ ಏಸುವಿನ ಆರಾಧೆನೆಯಲ್ಲಿ ಜನರು ನಿರತರಾಗಿದ್ದರು.