ಕೆಎನ್ ಎನ್ ನ್ಯೂಸ್ ಡೆಸ್ಕ್ : ಇಂದಿನ ದಿನದಲ್ಲಿ ಚಿಕ್ಕವಯಸ್ಸಿಗೆ ಕೊಲೆಸ್ಟ್ರಾಲ್ ಬರುತ್ತದೆ. ಇದನ್ನು ನಿಯಂತ್ರಣ ಮಾಡುವುದಕ್ಕೆ ಸಿಕ್ಕಾಪಟ್ಟೆ ಕಸರತ್ತು ಮಾಡುತ್ತಾರೆ. ಆದರೂ ಕೂಡ ಕೊಲೆಸ್ರ್ಟಾಲ್ ಕಡಿಮೆ ಆಗುವುದಿಲ್ಲ. ಕಡಿಮೆ ಮಾಡಲು ಏನು ಮಾಡಬೇಕು ಗೊತ್ತಾ?
ಪ್ರತಿ ದಿನ ಆಗ್ಗಾಗ್ಗೆ ನೀವು ಬಿಸಿ ನೀರು ಕುಡಿದರೆ ಹೊಟ್ಟೆಯಲ್ಲಿರುವ ಕೊಬ್ಬನ್ನು ಕಡಿಮೆ ಮಾಡುತ್ತದೆ. ಜೊತೆಗೆ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲ, ಬಿಸಿ ನೀರು ಸೇವಿಸುವುದರಿಂದ ವಿವಿಧ ಆರೋಗ್ಯ ಪ್ರಯೋಜನಗಳಿವೆ. 2 ಚಮಚ ಜೇನುತುಪ್ಪವನ್ನು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಕೊಲೆಸ್ಟ್ರಾಲನ್ನು ಮಟ್ಟದಲ್ಲಿ ನಿಯಂತ್ರಿಸಬಹುದು. ಈ ಅಭ್ಯಾಸವು ನಿಮ್ಮ ತೂಕವನ್ನು ಸಹ ನಿಯಂತ್ರಣದಲ್ಲಿಡುತ್ತದೆ. ಈ ಅಭ್ಯಾಸದ ಜೊತೆಗೆ ನೀವು ಪ್ಯಾಕ್ ಮಾಡಿದ ಆಹಾರ ಪದಾರ್ಥಗಳು, ಡೈರಿ ಉತ್ಪನ್ನಗಳು, ಮಾಂಸ ಹಾಗೂ ದೇಹದಲ್ಲಿ ಕೊಲೆಸ್ಟ್ರಾಲ್ ಉತ್ಪತ್ತಿ ಮಾಡುವ ಇನ್ನಿತರ ಆಹಾರಗಳಿಂದ ದೂರ ಇರಬೇಕು. ದಿನಕ್ಕೆ ಕನಿಷ್ಠ 20-30 ನಿಮಿಷ ವ್ಯಾಯಾಮ ಮಾಡಿದಾಗ ಮಾತ್ರ ಉತ್ತಮ ಫಲಿತಾಂಶ ದೊರೆಯುತ್ತದೆ.