ಲಕ್ನೋ : ಸಮೀಪದ ಚಿನ್ಹಾಟ್ ಪ್ರದೇಶದ ಗೋದಾಮಿನಿಂದ 17 ಲಕ್ಷ ರೂಪಾಯಿ ಮೌಲ್ಯದ ಕ್ಯಾಡ್ಬರಿ ಚಾಕೊಲೇಟ್ ಕದ್ದೊಯ್ದ ಈ ಘಟನೆ ನಡೆದಿದ್ದು ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ಚಿನ್ಹುತ್ ಠಾಣೆಯ ವ್ಯಾಪ್ತಿಯಲ್ಲಿ ಚಾಕೊಲೇಟ್ ತಯಾರಕರ ಗೋದಾಮಿನಂತೆ ಬಳಸಲಾಗುತ್ತಿದ್ದ ಮನೆಯ ಬಾಗಿಲು ಮುರಿದು ಚಾಕೊಲೇಟ್ ಕದಿಯಲಾಗಿದೆ ಎಂದು ಎಫ್ಐಆರ್ ದಾಖಲಿಸಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 340 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದೆ.
ಕಳ್ಳರು ಗೋದಾಮಿನಿಂದ ಕಳ್ಳತನ ಮಾಡುವ ವಿಡಿಯೋ ಸೆರೆಯಾಗದಂತೆ ಖತರ್ನಾಕ್ ಐಡಿಯಾವನ್ನು ಮಾಡಿದ್ದು, ಸಿಸಿಟಿವಿ ಕ್ಯಾಮೆರಾಗಳ ಇತರ ಉಪಕರಣಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಪೊಲೀಸರ ತನಿಖೆಯ ವೇಳೆ ಮಾಹಿತಿ ತಿಳಿದು ಬಂದಿದೆ.
ಪೊಲೀಸರು ತೀವ್ರ ತನಿಖೆಯನ್ನು ಪ್ರಾರಂಭಿಸಿದ್ದು. ಆ ಪ್ರದೇಶದಲ್ಲಿ ಇರುವ ಇತರ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ.