ಬೆಂಗಳೂರು: ಚಿತ್ತಾಪುರ ರಿಪಬ್ಲಿಕ್‌ನ ‘ರಜಾಕರಿಗೆ’ ಕೋರ್ಟ್ ಚಾಟಿ! ಬೀಸಿದೆ. ಆ ಮೂಲಕ ಆರ್ ಎಸ್ ಎಸ್ ಪಥಸಂಚಲನಕ್ಕೆ ಹೈಕೋರ್ಟ್ ಅನುಮತಿ ನೀಡಿದೆ ಎಂಬುದಾಗಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪಥಸಂಚಲನಕ್ಕೆ ವಿಧಿಸಿದ್ದ ನಿಷೇಧವನ್ನು ಮಾನ್ಯ ಹೈಕೋರ್ಟ್ ರದ್ದು ಮಾಡಿ, ನವೆಂಬರ್ 2ರಂದು ಪಥಸಂಚಲನ ನಡೆಸಲು ಅನುಮತಿ ನೀಡಿದೆ ಎಂದಿದ್ದಾರೆ.
ಜನರು ಮಾತಬಿಕ್ಷೆ ನೀಡಿ ಗೆಲ್ಲಿಸಿಸುವ ಕ್ಷೇತ್ರವನ್ನು ತಮ್ಮದೇ ರಿಪಬ್ಲಿಕ್ ಎಂದು ಭಾವಿಸಿಕೊಂಡು, ದೇಶಭಕ್ತರ ಪಥಸಂಚಲನವನ್ನು ತಡೆಯಲು ಯತ್ನಿಸಿದ ಚಿತ್ತಾಪುರದ ‘ರಜಾಕರು’ ಇಂದು ನ್ಯಾಯದ ಮುಂದೆ ತಲೆಬಾಗಬೇಕಾದ ಪರಿಸ್ಥಿತಿ ಬಂದಿದೆ ಎಂದು ತಿಳಿಸಿದ್ದಾರೆ.
ದೇಶಭಕ್ತಿ, ಶಿಸ್ತು ಮತ್ತು ಸೇವೆಯ ಪ್ರತೀಕವಾದ RSS ಪಥಸಂಚಲನವನ್ನು ತಡೆಯಲು ನಡೆದ ರಾಜಕೀಯ ನಾಟಕ ಈಗ ಸಂಪೂರ್ಣವಾಗಿ ಬಯಲಾಗಿದೆ ಎಂದಿದ್ದಾರೆ.
ಸತ್ಯವನ್ನು ತಾತ್ಕಾಲಿಕವಾಗಿ ತಡೆಯಬಹುದು, ಆದರೆ ಶಾಶ್ವತವಾಗಿ ಸೋಲಿಸಲು ಸಾಧ್ಯವಿಲ್ಲ. ಹೈಕೋರ್ಟ್ ತೀರ್ಪು ಇದರ ಜೀವಂತ ಸಾಕ್ಷಿ! ಎಂಬುದಾಗಿ ಅಭಿಪ್ರಾಯ ಪಟ್ಟಿದ್ದಾರೆ.
⚖️ಚಿತ್ತಾಪುರ ರಿಪಬ್ಲಿಕ್‌ನ ‘ರಜಾಕರಿಗೆ’ ಕೋರ್ಟ್ ಚಾಟಿ!
ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪಥಸಂಚಲನಕ್ಕೆ ವಿಧಿಸಿದ್ದ ನಿಷೇಧವನ್ನು ಮಾನ್ಯ ಹೈಕೋರ್ಟ್ ರದ್ದು ಮಾಡಿ, ನವೆಂಬರ್ 2ರಂದು ಪಥಸಂಚಲನ ನಡೆಸಲು ಅನುಮತಿ ನೀಡಿದೆ.
ಜನರು ಮಾತಬಿಕ್ಷೆ ನೀಡಿ ಗೆಲ್ಲಿಸಿಸುವ ಕ್ಷೇತ್ರವನ್ನು ತಮ್ಮದೇ ರಿಪಬ್ಲಿಕ್ ಎಂದು ಭಾವಿಸಿಕೊಂಡು,… pic.twitter.com/EIOHHqEEdh
— R. Ashoka (@RAshokaBJP) October 19, 2025