ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ಕರಿಯಾಲ ಗ್ರಾಮ ಪಂಚಾಯ್ತಿಯ ಪಿಡಿಓ ವಿರುದ್ಧ ಗ್ರಾಮ ಪಂಚಾಯ್ತಿ ಸದಸ್ಯರು ಸಿಡಿದೆದ್ದಿದ್ದರು. ಪಿಡಿಓ ದುರ್ವರ್ತನೆಯನ್ನು ಖಂಡಿಸಿ ಸಾಮೂಹಿಕ ರಾಜೀನಾಮೆ ನೀಡಿದ್ದರು. ಈ ಹಿನ್ನಲೆಯಲ್ಲಿ PDO ಅಮಾನುತುಗೊಳಿಸಲಾಗಿದೆ. ಹೀಗಾಗಿ ಗ್ರಾಮ ಪಂಚಾಯ್ತಿ ಸದಸ್ಯರು ಕೂಡ ತಮ್ಮ ಸಾಮೂಹಿಕ ರಾಜೀನಾಮೆ ಹಿಂಪಡೆದಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕರಿಯಾಲ ಗ್ರಾಮ ಪಂಚಾಯ್ತಿಯ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ, ಪಂಚಾಯ್ತಿಯ ಸದಸ್ಯರು, ಅಧ್ಯಕ್ಷರು, ಉಪಾಧ್ಯಕ್ಷರಿಗೆ ಗೌರವ ಕೊಡದೇ, ದುರ್ವರ್ತನೆ ತೋರಿದ್ದರು.
ಪಿಡಿಒ ದುರ್ವರ್ತನೆ ಖಂಡಿಸಿ ಕರಿಯಾಲ ಗ್ರಾಮ ಪಂಚಾಯ್ತಿಗೆ ಸೇರಿದಂತ 11 ಸದಸ್ಯರು ಸಾಮೂಹಿಕ ರಾಜೀನಾಮೆ ನೀಡಿದ್ದರು. ಇದರಿಂದ ಪರಿಸ್ಥಿತಿಯ ವಿಕೋಪತೆಯನ್ನು ಅರಿತಿದ್ದಂತ ಹಿರಿಯೂರು ತಾಲೂಕು ಪಂಚಾಯ್ತಿ ಇಓ ವರದಿ ಆಧರಿಸಿ, ಚಿತ್ರದುರ್ಗ ಜಿಲ್ಲಾ ಪಂಚಾಯ್ತಿ ಸಿಇಓ ಕರಿಯಾಲ ಗ್ರಾಮ ಪಂಚಾಯ್ತಿ ಪಿಡಿಒ ಅಮಾನತುಗೊಳಿಸಿದ್ದರು. ಅಲ್ಲದೇ ಕರಿಯಾಲ ಗ್ರಾಮ ಪಂಚಾಯ್ತಿಗೆ ಬೇರೊಬ್ಬ ಪಿಡಿಒ ನೇಮಕ ಮಾಡಲಾಗಿತ್ತು.
ಈ ಎಲ್ಲಾ ಕಾರಣದಿಂದಾಗಿ ಪಿಡಿಒ ದುರ್ವರ್ತನೆ ಖಂಡಿಸಿ ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸಿದ್ದಂತ 11 ಸದಸ್ಯರು ತಮ್ಮ ರಾಜೀನಾಮೆ ಪತ್ರವನ್ನು ಹಿಂಪಡೆದಿದ್ದಾರೆ.
Good News: ‘ನಕ್ಷೆ ಇಲ್ಲದ ಜಮೀನು’ಗಳಲ್ಲಿ ಕೃಷಿ ನಿರತ ರೈತರಿಗೆ ‘ಸಾಗುವಳಿ ಚೀಟಿ’ ನೀಡಲು ‘ರಾಜ್ಯ ಸರ್ಕಾರ’ ನಿರ್ಧಾರ
‘ಪ್ರಧಾನಿ ಮೋದಿ’ ಜೊತೆ ಸೆಲ್ಫಿ ಕ್ಲಿಕ್ಕಿಸಿದ ಕಾಶ್ಮೀರದ ‘ನಜೀಮ್’ ಯಾರು.? ಹಿನ್ನಲೆ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ