ಚಿತ್ರದುರ್ಗ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದಂತ ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ ಮತ್ತು 5 ಸಾವಿರ ದಂಡವನ್ನು ವಿಧಿಸಲಾಗಿದೆ. ಅಲ್ಲದೇ ನೊಂದ ಬಾಲಕಿಗೆ 5 ಲಕ್ಷ ರೂ ಗಳ ಪರಿಹಾರ ನೀಡಿ ಕೋರ್ಟ್ ಆದೇಶಿಸಿದೆ.
23-12-2019ರಂದು ಹೊರಗಡೆ ಮೂತ್ರ ವಿಸರ್ಜನೆಗೆ ತೆರಳಿದ್ದಂತ ಅಪ್ರಾಪ್ತ ಬಾಲಕಿಯನ್ನು ಹೊತ್ತೊಯ್ತು ಅತ್ಯಾಚಾರವೆಸಗಿನದ್ದನು. ಈ ಸಂಬಂಧ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
BREAKING NEWS : `PAYCM’ ಪೋಸ್ಟರ್ ಅಂಟಿಸಿದ ಕೇಸ್ : ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಈ ಪ್ರಕರಣ ಸಂಬಂಧ ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ಹಿರಿಯೂರು ವೃತ್ತ ನಿರೀಕ್ಷಕ ಚನ್ನೆಗೌಡ ಆರ್ ಬಿ ಕೈಗೊಂಡಿದ್ದರು. ಈ ಬಳಿಕ ಹಾಲಿ ಹಿರಿಯೂರು ವೃತ್ತ ನಿರೀಕ್ಷಕ ಕೆ ಆರ್ ರಾಘವೇಂದ್ರ ತನಿಖೆ ಪೂರೈಸಿ, ಆರೋಪಿಯ ವಿರುದ್ಧ ಚಿತ್ರದುರ್ಗ 2ನೇ ಹೆಚ್ಚುವರಿ 2ನೇ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಗೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು.
ನ್ಯಾಯಮೂರ್ತಿ ಬಿ.ಕೆ ಕೋಮಲ ಅವರು ಪ್ರಕರಣದ ವಿಚಾರಣೆ ನಡೆಸಿ, ಆರೋಪಿಗೆ ಕಲಂ 506 ಐಪಿಸಿ ಪ್ರಕರಣ ಸಂಬಂಧ 6 ತಿಂಗಳು ಸದಾ ಶಿಕ್ಷೆಯನ್ನು ವಿಧಿಸಿದ್ದಾರೆ. ಇದಲ್ಲದೇ ಐಪಿಸಿ ಕಲಂ 354(ಬಿ) ಅಡಿಯಲ್ಲಿ 1 ವರ್ಷ ಸಾದಾ ಶಿಕ್ಷೆ ಹಾಗೂ 1 ಸಾವಿರ ದಂಡ ವಿಧಿಸಿದ್ದಾರೆ. ಇದಲ್ಲದೇ ಕಲಂ 376 ಮತ್ತು ಪೋಕ್ಸೋ ಕಾಯ್ದೆಯಡಿ ದಾಖಲಾದ ಪ್ರಕರಣ ಸಂಬಂಧ 20 ವರ್ಷ ಕಠಿಣ ಶಿಕ್ಷೆ ಮತ್ತು 5 ಸಾವಿರ ರೂ ದಂಡವನ್ನು ವಿಧಿದ್ದಾರೆ.
“ನಾವು ಹೋಗುತ್ತಿದ್ದೇವೆ, ಕ್ಷಮಿಸಿ” : ಮಂಗಳೂರಿನಲ್ಲಿ ಹಾಸ್ಟೆಲ್ ಕಿಟಕಿ ಮುರಿದು ಪರಾರಿಯಾದ ಮೂವರು ವಿದ್ಯಾರ್ಥಿನಿಯರು
ಇನ್ನೂ ನೊಂದ ಬಾಲಕಿಗೆ 5 ಲಕ್ಷ ರೂಪಾಯಿಗಳ ಪರಿಹಾರ ನೀಡಲು ಆದೇಶಿಸಿದ್ದಾರೆ. ಈ ಪ್ರಕರ ಸಂಬಂಧ ಸರ್ಕಾರದ ಪರವಾಗಿ ವಿಷೇಷ ಅಭಿಯೋಜಕರಾಗಿ ಹೆಚ್ ಆರ್ ಜಗದೀಶ್ ವಾದಿಸಿದ್ದರು.