ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ಉಪ ವಿಭಾಗದ ವ್ಯಾಪ್ತಿಯ ಐಮಂಗಳ & ಮಲ್ಲಪ್ಪನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ದಿನಾಂಕ:-29.10.2024 ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಸಹಾಯಕ ಇಂಜಿನಿಯರ್ (ವಿ) 66/11 ಕೆವಿ ವಿ ವಿ ಕೇಂದ್ರ ಐಮಂಗಲ ರವರು ಮೇಲ್ಕಂಡ ಉಲ್ಲೇಖ ದಲ್ಲಿ ದಿನಾಂಕ:-29.10.2024 ರಂದು ಚಿತ್ರದುರ್ಗ 220/ 66/11 ಕೆ.ವಿ ಎಸ್ ಆರ್ ಎಸ್ ಕೇಂದ್ರದಲ್ಲಿ ತುರ್ತುನಿರ್ವಹಣಾ ಕಾಮಗಾರಿ ನಿರ್ವಹಿಸುವ ಪ್ರಯುಕ್ತ ಸದರಿ ದಿನಾಂಕ ದಂದು ಬೆಳಿಗ್ಗೆ:10.00 ರಿಂದ ಸಂಜೆ:04.00 ರವರೆಗೆ ಐಮಂಗಲ & ಮಲ್ಲಪ್ಪನಹಳ್ಳಿ ವಿ ವಿಕೇಂದ್ರ ಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ತಿಳಿಸಿರುತ್ತಾರೆ.
ಪ್ರಯುಕ್ತ ದಿನಾಂಕ:-29.10.2024 ರಂದು ಐಮಂಗಳ ಮತ್ತು ಮಲ್ಲಪ್ಪನಹಳ್ಳಿ 66/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ನಿರ್ವಹಿಸುವ ಪ್ರಯುಕ್ತ ಸದರಿ ದಿನಾಂಕ ದಂದು ಬೆಳಿಗ್ಗೆ:10.00 ರಿಂದ ಸಂಜೆ:04.00 ರವರೆಗೆ ಈ ಕೇಂದ್ರಗಳಲ್ಲಿ ಕೆಳಕಾಣಿಸಿರುವ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ.
ನಾಳೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ಮೇಟಿಕುರ್ಕೆ, ಸೂರಗೊಂಡನಹಳ್ಳಿ, ಗುಯಿಲಾಳು, ರೋಪ್ಪ,ಮರಡಿಹಳ್ಳಿ, ಐಮಂಗಲ, ಸಿ ಎಸ್ ಹಳ್ಳಿ ವದ್ದಿಕೆರೆ ಮರಡಿದೇವಿಗೆರೆ ದಾಸನಣ್ಣಮಾಳಿಗೆ ಹುಲಿತೋಟ್ಟಿಲು ತಾವಂದಿ ಗನ್ನಾಯಕನಹಳ್ಳಿ ಕಳವಿಭಾಗಿ ಕೋವೇರಹಟ್ಟಿ, ಹೊಸನಾಯಕರಹಟ್ಟಿ ಸೋಂಡೆಕೆರೆ ಯರಬಳ್ಳಿ ವದ್ದಿಕೆರೆ ಗೊಲ್ಲಹಳ್ಳಿ, ಬುರುಜಿನರೊಪ್ಪ ಪಾಲವ್ವನಹಳ್ಳಿ, ಸಿ ಎಸ್ ಹಳ್ಳಿ, ಹಾಗು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಪವರ್ ಕಟ್ ಆಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಮತ್ತೊಂದು ಅಮಾನವೀಯ ಘಟನೆ : ಬೆಳಗಾವಿಯಲ್ಲಿ ಗೋಮಾಳ ಜಾಗಕ್ಕಾಗಿ ದಲಿತರ ಗುಡಿಸಲುಗಳಿಗೆ ಬೆಂಕಿ!