ಚಿತ್ರದುರ್ಗ : ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕುದಪುರದಲ್ಲಿ ಪೊಲೀಸರ ಜೀಪಿನ ಮೇಲೆ ಕಳ್ಳರು ಕಲ್ಲೇಸಿದಿದ್ದಾರೆ. ನಿನ್ನೆ ರಾತ್ರಿ ನಡೆದಿರುವ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ.
ಪೊಲೀಸರು ತಡೆದರು ನಿಲ್ಲಿಸದೆ ಹೋಗಿದ್ದ ಬೊಲೆರೋ ವಾಹನವನ್ನು, ನಾಯಕನಹಟ್ಟಿ ಠಾಣೆಯ ಪೊಲೀಸರು ಬೊಲೆರೋ ವಾಹನವನ್ನು ಚೇಸ್ ಮಾಡಿದರು. ಈ ವೇಳೆ ಪೊಲೀಸ್ ಜೀಪ್ ಮೇಲೆ ಕಳ್ಳರು ಕಲ್ಲೆಸೆದಿದ್ದಾರೆ.
ತಕ್ಷಣ ಪಿಎಸ್ಐ ಶಿವಕುಮಾರ್ ಗಾಳಿಯಲ್ಲಿ ಗುಂಡು ಹಾರಿಸಿದರು. ಇತ್ತ ಗುಂಡು ಹಾರಿಸುತ್ತಿದ್ದಂತೆ ಕುದಾಪುರ ಬಳಿ ಖದೀಮರ ಗ್ಯಾಂಗ್ ಇದೀಗ ಎಸ್ಕೇಪ್ ಆಗಿದೆ. ಘಟನಾ ಸ್ಥಳಕ್ಕೆ ಎಸ್ಪಿ ಧರ್ಮೇಂದ್ರ ಕುಮಾರ್ ಮೀನಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.