ಚಿತ್ರದುರ್ಗ: ಸೆಪ್ಟೆಂಬರ್ 17ರಂದು ಜಿಲ್ಲಾ ಕೇಂದ್ರದಲ್ಲಿನ ಹಿಂದೂ ಮಹಾ ಗಣಪತಿ ವಿಸರ್ಜನಾ ಮೆರವಣಿಗೆಯನ್ನು ಏರ್ಪಡಿಸಲಾಗಿದೆ. ಈ ಹಿನ್ನಲೆಯಲ್ಲಿ ವಾಹನ ಸವಾರರಿಗೆ ತೊಂದರೆ ಆಗದಂತೆ ಪರ್ಯಾಯ ಮಾರ್ಗದಲ್ಲಿ ಸಚರಿಸುವಂತೆ ಜಿಲ್ಲಾಡಳಿತ ತಿಳಿಸಿದೆ.
ಈ ಸಂಬಂಧ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ದಿನಾಂಕ 17-09-2022ರಂದು ಚಿತ್ರದುರ್ಗ ನಗರದಲ್ಲಿ ಹಿಂದೂ ಮಹಾ ಗಣಪತಿ ಪ್ರತಿಷ್ಠಾನಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ಹಿಂದೂ ಮಹಾ ಗಣಪತಿ ವಿಸರ್ಜನಾ ಮೆರವಣಿಗೆ ಹಾಗೂ ಶೋಭಾಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ನಗರದ ಬಿ.ಡಿ ರಸ್ತೆಯಲ್ಲಿ ಸಂಚರಿಸಿ, ಹೊಳಲ್ಕೆರೆ ರಸ್ತೆ ಮುಖಾಂತರ ಚಂದ್ರವಳ್ಳಿ ಬಳಿಯ ವಿಸರ್ಜನಾ ಸ್ಥಳವನ್ನು ತಲುಪಲಿದೆ ಎಂದು ಹೇಳಿದ್ದಾರೆ.
ಶಿವಮೊಗ್ಗ: ಕೋವಿಡ್-19 ಬೂಸ್ಚರ್ ಡೋಸ್ ಪಡೆಯಿರಿ – DHO ಡಾ.ರಾಜೇಶ್ ಸುರಗಿಹಳ್ಳಿ ಮನವಿ
ಇನ್ನೂ ಸೆ.17ರಂದು ಹಿಂದೂ ಮಹಾಗಣಪತಿ ವಿಸರ್ಜನೆ ಹಿನ್ನಲೆಯಲ್ಲಿ, ಒಂದು ಲಕ್ಷಕ್ಕೂ ಅಧಿಕ ಜನರು ಭಾಗವಹಿಸೋ ಕಾರಣ ಸಂಚಾರ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಹೀಗಾಗಿ ಬೆಂಗಳಊರು ಹಾಗೂ ಚಳ್ಳಕೆರೆ ಮತ್ತು ಹೊಸಪೇಟೆ ಮಾರ್ಗದಿಂದ ಬರುವ ವಾಹನಗಳು ರಾಷ್ಟ್ರೀಯ ಹೆದ್ದಾರಿ 4ರ ಬೈಪಾಸ್ ರಸ್ತೆ ಮುಖಾಂತರ ಬಂದು, ಮೆದೇಹಳ್ಳಿ ರಸ್ತೆ ಮತ್ತು ಎಪಿಎಂಸಿ ಮಾರುಕಟ್ಟೆ ಮುಖಾಂತರ ಬಸ್ ನಿಲ್ದಾಣಗಳಿಗೆ ಬಂದು ಪುನಹ ಅದೇ ಮಾರ್ಗದಲ್ಲಿ ಹೋಗುವಂತೆ ಸೂಚಿಸಿದ್ದಾರೆ.
ದಾವಣಗೆರೆ ಮಾರ್ಗದಿಂದ ಬರುವ ವಾಹನಗಳು ಜೆಎಂಐಟಿ ವೃತ್ತದ ಮುಖಾಂತರವಾಗಿ ಬಂದು, ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣಕ್ಕೆ, ಪುನಹ ಅದೇ ಮಾರ್ಗವಾಗಿ ಸಂಚರಿಸುವುದು. ಶಿವಮೊಗ್ಗ, ಹೊಳಲ್ಕೆರೆ, ಭೀಮಸಮುದ್ರ ಮಾರ್ಗದಿಂದ ಬರುವ ವಾಹನಗಳು ರಾಷ್ಟ್ರೀಯ ಹೆದ್ದಾರಿ 13ರ ಬೈಪಾಸ್ ನಲ್ಲಿ ಮುರುಘಾ ಮಠದವರೆಗೆ ಹೋಗಿ ನಂತ್ರ, ರಾಷ್ಟ್ರೀಯ ಹೆದ್ದಾರಿ 4ರ ಬೈಪಾಸ್ ರಸ್ತೆ ಮುಖಾಂತರ ಕೆ ಎಸ್ ಆರ್ ಟಿ ಸಿ ಮತ್ತು ಖಾಸಗಿ ಬಸ್ ನಿಲ್ದಾಣಕ್ಕೆ ಬಂದು ಪುನಹ ಅದೇ ಮಾರ್ಗದಲ್ಲಿ ಸಂಚರಿಸುವಂತೆ ತಿಳಿಸಿದ್ದಾರೆ.
ಹಿಂದೂ ಮಹಾಗಣಪತಿ ವಿಸರ್ಜನೆಯಲ್ಲಿ ಭಾಗವಹಿಸುವವರು ಚಳ್ಳಕೆರೆ ಸರ್ಕಲ್ ಮೂಲಕ ಮುರುಘಾರಾಜೇಂದ್ರ ಕ್ರೀಡಾಂಗಣ, ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು ಹಾಗೂ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ತಮ್ಮ ವಾಹನಗಳನ್ನು ಪಾರ್ಕ್ ಮಾಡುವಂತೆ ತಿಳಿಸಿದ್ದಾರೆ.
ದಿನಾಂಕ.17.09.22 ರಂದು ಚಿತ್ರದುರ್ಗ ನಗರದಲ್ಲಿ ಹಿಂದೂ ಮಹಾ ಗಣಪತಿ ವಿಸರ್ಜನಾ ಮೆರವಣಿಗೆಯ ಅಂಗವಾಗಿ ಸದರಿ ಮಾರ್ಗದಲ್ಲಿ ಚಲಿಸುವ ವಾಹನಗಳ ಮಾರ್ಗ ಬದಲಾವಣೆಯ ಬಗ್ಗೆ ಮಾನ್ಯ ಜಿಲ್ಲಾಧಿಕಾರಿಗಳು ಚಿತ್ರದುರ್ಗ ಜಿಲ್ಲೆ ರವರ ಆದೇಶವನ್ನು ಮಾಡಿದ್ದು ಸದರಿ ವಿಚಾರದ ಬಗ್ಗೆ @ParashuramaKal1 ನೀಡಿರುವ ಪತ್ರಿಕಾ ಪ್ರಕಟಣೆಯ ಪ್ರತಿ @DgpKarnataka pic.twitter.com/ahEDjDZ7pO
— Chitradurga District Police (@DistrictPolice1) September 15, 2022