ಚಿತ್ರದುರ್ಗ: ಯುಗಾದಿ ಹಬ್ಬದ ಪ್ರಯುಕ್ತ ಜಿಲ್ಲೆಯಲ್ಲಿ ಜೂಜಾಟದಲ್ಲಿ ತೊಡಗಿದ್ದಂತವರ ಮೇಲೆ ದಾಳಿ ನಡೆಸಿರುವಂತ ಪೊಲೀಸರು, ಬರೋಬ್ಬರಿ 154 ಕೇಸ್ ದಾಖಲಿಸಿದ್ದಾರೆ. ಜೊತೆಗೆ 10.80 ಲಕ್ಷ ಹಣವನ್ನು ಜಪ್ತಿ ಮಾಡಿದ್ದಾರೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಚಿತ್ರದುರ್ಗ ಜಿಲ್ಲಾ ಪೊಲೀಸ್ ಇಲಾಖೆ ಮಾಹಿತಿ ನೀಡಿದ್ದು, ಜಿಲ್ಲೆಯಾಧ್ಯಂತ ಯುಗಾದಿ ಹಬ್ಬದ ಪ್ರಯುಕ್ತ ಇಸ್ಪೀಟ್ ಜೂಜಾಟದ ಅಡ್ಡೆಯ ಮೇಲೆ ದಿನಾಂಕ 29-03-2025ರಿಂದ 31-03-2025ರವರೆಗೆ ವಿಶೇಷ ದಾಳಿ ನಡೆಸಲಾಗಿದೆ. ಕಾನೂನು ಬಾಹಿರವಾಗಿ ಇಸ್ಪೀಟ್ ಜೂಜಾಟದಲ್ಲಿ ಭಾಗಿಯಾಗಿದ್ದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
ಚಿತ್ರದುರ್ಗ ಉಪ ವಿಭಾಗದ ವ್ಯಾಪ್ತಿಯಲ್ಲಿ 47 ಕೇಸ್ ದಾಖಲಿಸಿ, 246 ಮಂದಿ ಬಂಧಿಸಲಾಗಿದೆ. ಅವರಿಂದ 3,94,270 ಹಣ ಜಪ್ತಿ ಮಾಡಲಾಗಿದೆ. ಚಳ್ಳಕೆರೆ ಉಪ ವಿಭಾಗದಲ್ಲಿ 51 ಕೋಸ್ ದಾಖಲಿಸಿ, 329 ಮಂದಿ ಬಂಧಿಸಲಾಗಿದೆ. 1,73,420 ಹಣವನ್ನು ಜಪ್ತಿ ಮಾಡಲಾಗಿದೆ ಎಂಬುದಾಗಿ ತಿಳಿಸಿದೆ.
ಹಿರಿಯೂರು ಉಪ ವಿಭಾಗದ ವ್ಯಾಪ್ತಿಯಲ್ಲಿ 56 ಪ್ರಕರಣಗಳನ್ನು ದಾಖಲಿಸಲಾಗಿದ್ದು 275 ಆರೋಪಿಗಳಾಗಿದ್ದಾರೆ. ಇವರಿಂದ 5,12,540 ಹಣವನ್ನು ಜಪ್ತಿ ಮಾಡಲಾಗಿದೆ.
ಒಟ್ಟಾರೆ ಚಿತ್ರದುರ್ಗ ಜಿಲ್ಲೆಯಾಧ್ಯಂತ ಒಟ್ಟು 154 ಕೇಸ್ ದಾಖಲಾಗಿದ್ದರೇ, ಆರೋಪಿತರ ಸಂಖ್ಯೆ 850 ಆಗಿದೆ. ಇವರಿಂದ 10,80,230 ಹಣವನ್ನು ವಶ ಪಡಿಸಿಕೊಳ್ಳಲಾಗಿದೆ ಅಂತ ಚಿತ್ರದುರ್ಗ ಜಿಲ್ಲಾ ಪೊಲೀಸ್ ತಿಳಿಸಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ಯುಗಾದಿ ಹಬ್ಬದ ಪ್ರಯುಕ್ತ ಕೈಗೊಂಡಿದ್ದ ಅಕ್ರಮ ಜೂಜಾಟದ ಸ್ಥಳಗಳ ಮೇಲಿನ ದಾಳಿ ಮುಂದುವರೆದಿದ್ದು 3 ದಿನಗಳ ದಾಳಿಯಲ್ಲಿ ಒಟ್ಟು 154 ಪ್ರಕರಣಗಳನ್ನು ದಾಖಲು ಮಾಡಿ 850 ಜನರನ್ನು ದಸ್ತಗಿರಿ ಮಾಡಿದ್ದು ಸದರಿಯವರಿಂದ ಒಟ್ಟು 10,80,230/- ರೂಪಾಯಿಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ.@DgpKarnataka pic.twitter.com/baAXheNRaI
— Chitradurga District Police (@spchitradurga) April 1, 2025
ಚಿತ್ರದುರ್ಗ: ಯಲ್ಲದಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ‘ಶುಶ್ರೂಷಾಧಿಕಾರಿ ಎಸ್.ಜೆ ಸೋಮಶೇಖರ್’ ಅಮಾನತು
‘ಕೋರ್ಟ್ ಕೇಸ್ ಇತ್ಯರ್ಥ’ದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಜು.12ರಂದು ‘ರಾಷ್ಟ್ರೀಯ ಲೋಕ್ ಅದಾಲತ್’