ಚನ್ನಪಟ್ಟಣ: ಇಂದು ಚನ್ನಪಟ್ಟಣ ಉಪ ಚುನಾವಣೆಗೆ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾಗಿತ್ತು. ಈ ವೇಳೆಯಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ, ವಕೀಲ ಸಿ.ಶಿವು ಯಾದವ್ ಅವರು ಭರ್ಜರಿ ಚುನಾವಣಾ ಪ್ರಚಾರ ನಡೆಸಿದರು. ಅಲ್ಲದೇ ಕಾಡುಗೊಲ್ಲರ ಹಟ್ಟಿಗಳಿಗೆ ಭೇಟಿ ನೀಡಿದಂತ ಅವರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಿದರು.
ಇಂದು ಚಿತ್ರದುರ್ಗದಿಂದ ತೆರಳಿದಂತ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಿ.ಶಿವು ಯಾದವ್ ಅವರು, ಚನ್ನಪಟ್ಟಣದಲ್ಲಿ ವಿಧಾನಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಪರವಾಗಿ ಮತಬೇಟೆಯನ್ನು ನಡೆಸಿದರು.
ಚೆನ್ನಪಟ್ಟಣದ ನ್ಯಾಯಾಲಯದಲ್ಲಿ ಚೆನ್ನಪಟ್ಟಣ ವಕೀಲರ ಸಂಘದ ಅದ್ಯಕ್ಷರಾದ ಗಿರೀಶ್ ಮತ್ತು ಪದಾಧಿಕಾರಿಗಳೊಂದಿಗೆ ವಕೀಲರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸಿ ಪಿ ಯೋಗೇಶ್ವರ ಪರ ಮತಯಾಚನೆ ಮಾಡಿದುವಂತೆ ಮನವಿ ಮಾಡಿದರು.
ಇದಲ್ಲದೇ ಚನ್ನಪಟ್ಟಣದ ಅರಳಲ ಸಂದ್ರ, ವಿಟ್ಟನಹಳ್ಳಿ, ಬಾಚಳ್ಳಿ, ದೇವರಹೊಸಹಳ್ಳಿ ಗೊಲ್ಲರಹಟ್ಟಿಗಳಿಗೆ ಭೇಟಿ ನೀಡಿದಂತ ಅವರು, ಜನಾಂಗದ ಮುಖಂಡರೊಂದಿಗೆ ಮತ್ತು ಮಹಿಳೆಯರೊಂದಿಗೆ ಚರ್ಚಿಸಿದರು.
ಕಾಡುಗೊಲ್ಲ ಜನಾಂಗಕ್ಕೆ ಅಸ್ಮಿತೆ ನೀಡಿದ್ದು ಕಾಂಗ್ರೆಸ್ ಪಕ್ಷವಾಗಿದೆ. ಕಾಡುಗೊಲ್ಲ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೆಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಿತ್ತು. ವಾಸಿಸುವವನೇ ಮನೆ ಒಡೆಯ ಎಂಬ ಕಾನೂನು ಜಾರಿ ಮಾಡಿ ರಾಜ್ಯದ ಬಹುತೇಕ ಗೊಲ್ಲರಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿದೆ. ಕಾಡುಗೊಲ್ಲ ಜನಾಂಗದ ಪರ ಇರುವ ಸಿದ್ದರಾಮಯ್ಯ ಅವರ ಸರ್ಕಾರದ ಪರವಾಗಿ ಮತ ಚಲಾಹಿಸಬೇಕೆಂದು ಕೋರಿದರು.
ಜಸ್ಟೀಸ್ ಮೈಕಲ್ ಕುನ್ಹಾ ಅವರ ವೈಯಕ್ತಿಕ ನಿಂದನೆಗೆ ಖಂಡನೆ: ಪ್ರಲ್ಹಾದ್ ಜೋಶಿ ವಿರುದ್ಧ ರಾಜ್ಯಪಾಲರಿಗೆ ದೂರು
ಬೆಂಗಳೂರು ಜನತೆಗೆ ಮಹತ್ವದ ಮಾಹಿತಿ: ‘ಇ-ಖಾತಾ ಸಮಸ್ಯೆ’ ನಿವಾರಣೆಗೆ ‘ಸಹಾಯವಾಣಿ ಸಂಖ್ಯೆ’ ಬಿಡುಗಡೆ
ಸಿಎಂ, ಡಿಸಿಎಂ ವಿರುದ್ಧ ಕುಮಾರಸ್ವಾಮಿ, ದೇವೇಗೌಡರು ವೈಯಕ್ತಿಕ ಆರೋಪಗಳನ್ನು ಮಾಡುತ್ತಿದ್ದಾರೆ: ಚಲುವರಾಯಸ್ವಾಮಿ